ಕೇಂದ್ರ ಸಚಿವರಿಗೆ ಕರೊನಾ ಕಂಟಕವಾಗಿ ಕಾಡುತ್ತಿದೆ. ಮೊದಲು ಕೊವಿಡ್​-19 ಸೋಂಕು ಕಾಣಿಸಿಕೊಂಡಿದ್ದು ಗೃಹ ಸಚಿವ ಅಮಿತ್​ ಷಾ ಅವರಲ್ಲಿ. ನಂತರ ಧರ್ಮೇಂದ್ರ ಪ್ರಧಾನ್​ ಅವರಲ್ಲೂ ಸೋಂಕು ದೃಢಪಟ್ಟಿದೆ.
ಹಾಗೇ ಇಂದು ಇಬ್ಬರು ಕೇಂದ್ರ ಸಚಿವರಲ್ಲಿ ಕರೊನಾ ಇರುವುದು ಪತ್ತೆಯಾಗಿದ್ದು, ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ.ಇಂದು ಮಧ್ಯಾಹ್ಯ ಕೇಂದ್ರ ಕೃಷಿ ಸಚಿವಾಲಯದ ರಾಜ್ಯ ಸಚಿವ ಕೈಲಾಶ್ ಚೌಧರಿಯವರು ತಮಗೆ ಕೊವಿಡ್​-19 ತಗುಲಿದ್ದಾಗಿ ಟ್ವೀಟ್​ ಮಾಡಿದ್ದರು. ಹಾಗೇ ಅವರು ಜೋಧ್​ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಕೇಂದ್ರ ಜಲಸಂಪನ್ಮೂಲ ಖಾತೆ ರಾಜ್ಯ ಸಚಿವ ಅರ್ಜುನ್​ ರಾಮ್​ ಮೇಘ್ವಾಲ್​ ಅವರಲ್ಲಿ ಸೋಂಕು ದೃಢಪಟ್ಟಿದ್ದು, ದೆಹಲಿಯ ಏಮ್ಸ್​ಗೆ ದಾಖಲಾಗಿದೆ.ಇದನ್ನೂ ಓದಿ:ಬಾಲಿವುಡ್​ ನಟ ಸಂಜಯ್​ ದತ್​​ಗೆ ಅನಾರೋಗ್ಯ; ಐಸಿಯುನಲ್ಲಿ ಚಿಕಿತ್ಸೆ
ನನಗೆ ಕರೊನಾದ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡಿವೆ. ಮೊದಲೊಂದು ಬಾರಿ ತಪಾಸಣೆ ಮಾಡಿಸಿದಾಗ ವರದಿ ನೆಗೆಟಿವ್​ ಎಂದು ಬಂದಿತ್ತು. ಹಾಗೇ ಎರಡನೇ ಬಾರಿ ಟೆಸ್ಟ್​​ನಲ್ಲಿ ಪಾಸಿಟಿವ್​ ಬಂದಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅರ್ಜುನ್​ ಮೇಘ್ವಾಲ್ ಅವರು ಹೊಸಬಗೆಯ ಹಪ್ಪಳ ಭಾಭಿ ಜಿ ಪಾಪಡ್​​ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಇದನ್ನು ತಿಂದರೆ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಿ, ಕರೊನಾ ವಿರುದ್ಧ ಹೋರಾಟ ಮಾಡುತ್ತವೆ ಎಂದೂ ಹೇಳಿ, ಸುದ್ದಿಯಾಗಿದ್ದರು. (ಏಜೆನ್ಸೀಸ್​)
ಒಂದೊಮ್ಮೆ 2014ಕ್ಕೂ ಮುನ್ನ ಕೊವಿಡ್​-19 ವೈರಸ್​ ಬಂದಿದ್ದರೆ ಏನಾಗುತ್ತಿತ್ತು?- ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 8 =
Remember me
