ನವದೆಹಲಿ:ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಯಾವಾಗಲೂ ತಮ್ಮ ಕಟುವಾದ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಆಗಾಗ ವಿವಾದಾತ್ಮಕ ಹೇಳಿಕೆ ನೀಡುವ ಅವರು, ಮತ್ತೊಮ್ಮೆ ಹಲಾಲ್ ವಿಚಾರವಾಗಿ ಹೇಳಿಕೆ ನೀಡಿದ್ದಾರೆ. ಷಡ್ಯಂತ್ರದ ಭಾಗವಾಗಿ ಹಿಂದೂಗಳಿಗೆ ಹಲಾಲ್ ಮಾಂಸವನ್ನು ನೀಡಲಾಗುತ್ತಿದೆ ಮತ್ತು ಅವರ ಧರ್ಮವನ್ನು ಭ್ರಷ್ಟಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬೇಗುಸರಾಯ್‌ನ ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಮಾತನಾಡಿ, ಅನೇಕ ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಕೊಡುವ ಪದ್ಧತಿ ಹಿಂದೂ ಧರ್ಮದ ಭಾಗವಾಗಿದ್ದರೂ ಅದನ್ನು ನಿಷೇಧಿಸುವ ಷಡ್ಯಂತ್ರ ನಡೆಸಲಾಗುತ್ತಿದೆ. ಮತ್ತೊಂದೆಡೆ ಹಿಂದೂಗಳು ಮಾಡುವ ತ್ಯಾಗ ಬಲಿದಾನವಾದರೆ ಮುಸಲ್ಮಾನರ ಬಲಿದಾನವನ್ನೂ ಸರ್ಕಾರ ನಿಲ್ಲಿಸಬೇಕು. ಹಿಂದೂಗಳ ಮನೆಯಲ್ಲಿ ತಯಾರಿಸಿದ ಮಾಂಸವನ್ನು ಯಾವ ಮುಸಲ್ಮಾನರೂ ತಿನ್ನುವುದಿಲ್ಲ. ಆದರೆ ಹಿಂದೂಗಳು ತಮ್ಮ ಮನೆಯಲ್ಲಿ ಬೇಯಿಸಿದ ಹಲಾಲ್ ಮಾಂಸವನ್ನು ತಿನ್ನುತ್ತಾರೆ ಇದರಿಂದ ಹಿಂದೂಗಳ ಧರ್ಮ ಭ್ರಷ್ಟವಾಗುತ್ತಿದೆ. ರಾಜ್ಯದ ನಿತೀಶ್ ಸರ್ಕಾರಕ್ಕೆ ಈ ವಿಷಯಗಳ ಬಗ್ಗೆ ಕಾಳಜಿ ಇಲ್ಲ, ಅವರು ಕೇವಲ ತಮ್ಮ ವೋಟ್ ಬ್ಯಾಂಕ್ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ಹೇಳಿದರು.
ರಸ್ತೆಬದಿಯಲ್ಲಿ ಮಾಂಸ ಕತ್ತರಿಸುವುದರಿಂದ ಸುತ್ತಮುತ್ತ ಕೊಳಚೆ ಹರಡುತ್ತಿದ್ದು, ಸ್ವಚ್ಛತೆಯ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಬದಿಯ ಬಯಲಿನಲ್ಲಿ ಮಾಂಸ ಕತ್ತರಿಸುವುದನ್ನು ನಿಷೇಧಿಸಬೇಕು.
ಮಾಂಸ ತಿನ್ನುವ ಎಲ್ಲಾ ಹಿಂದೂಗಳು ಜಟ್ಕಾ ಮಾಂಸವನ್ನು ತಿನ್ನಬೇಕು  ಗಿರಿರಾಜ್ ಸಿಂಗ್ ಹಿಂದೂಗಳಲ್ಲಿ ಮನವಿ ಮಾಡಿದರು. ತಾವೂ ಕೂಡ ಝಟ್ಕಾ ಮಾಂಸ ತಿನ್ನುತ್ತಾರೆ ಎಂದು  ಹೇಳಿದರು.
ಹಲಾಲ್ ವಿಚಾರವಾಗಿ ಗಿರಿರಾಜ್ ಸಿಂಗ್ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ, ಇದಕ್ಕೂ ಮುನ್ನ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ನಮಸ್ಕಾರ ದೇವ್ರು ಖ್ಯಾತಿಯ ಡಾ. ಬ್ರೋ ಮಿಸ್ಸಿಂಗ್​!; ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಉತ್ತರ

ಇಂದು 100 ಕೋಟಿ ರೂ.ಸಂಭಾವನೆ ಪಡೆಯುವ ಈ ಸ್ಟಾರ್​​​ ನಟನ ಮೊದಲ ಸಂಬಳ 100 ರೂ.! ಯಾರು? ಈ ನಟ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 7 =
Remember me
