ಮುಂಬೈ:ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ್ದ ಕೆಲ ಮಹತ್ತರ ವಿಚಾರ ಇಲ್ಲಿದೆ.
ವಿಡಿಯೋ ಸರ್ಚಿಂಗ್​ ತಾಣ ಯೂ ಟೂಬ್​ನಿಂದ ನಿತಿನ್​ ಗಡ್ಕರಿ ಅವರಿಗೆ ತಿಂಗಳಿಗೆ 4 ಲಕ್ಷ ರೂಪಾಯಿ ಪಾವತಿ ಆಗ್ತಿದೆಯಂತೆ. ಈ ವಿಚಾರವನ್ನ ಸ್ವತಃ ನಿತಿನ್​ ಗಡ್ಕರಿ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾವು ಮದುವೆ ಆದ ಹೊಸತರಲ್ಲಿಯೇ ಪತ್ನಿಗೂ ತಿಳಿಯದಂತೆ ಮಾವನ ಮನೆಯನ್ನ ತೆರವು ಮಾಡಿಸಿದ್ದರಂತೆ!
ಕರೊನಾ ಲಾಕ್​ಡೌನ್​ ವೇಳೆ ತಾವು ಹೇಗೆ ಸಮಯ ಕಳೆದೆ ಎಂಬುದನ್ನೂ ಹೇಳಿಕೊಂಡಿದ್ದಾರೆ. ಆ ವೇಳೆ ಅಡುಗೆ ಮಾಡುವುದನ್ನ ಕಲಿತೆ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಷಣ ಮಾಡಲು ಆರಂಭಿಸಿದೆ. ಆ ವಿಡಿಯೋಗಳನ್ನು ಯೂಟೂಬ್​ಗೆ ಅಪ್​ಲೋಡ್​ ಮಾಡುತ್ತಿದ್ದು, ವೀಕ್ಷಕರ ಸಂಖ್ಯೆ ಹೆಚ್ಚಾಗಿ ನನಗೀಗ ಯೂಟೂಬ್​ನಿಂದ ತಿಂಗಳಿಗೆ 4 ಲಕ್ಷ ರೂಪಾಯಿ ಪಾವತಿ ಆಗ್ತಿದೆ ಎಂದು ನಿತಿನ್​ ಗಡ್ಕರಿ ವಿವರಿಸಿದ್ದಾರೆ.
ಅದು ನಾನು ಮದುವೆ ಆದ ಆರಂಭದ ದಿನಗಳು. ನನ್ನ ಮಾವನ ಮನೆ ರಸ್ತೆ ಮಧ್ಯದಲ್ಲಿತ್ತು. ರಸ್ತೆ ಕಾಮಗಾರಿಗೆ ಈ ಮನೆ ಅಡ್ಡವಾಗಿದೆ, ಅದನ್ನು ತೆರವು ಮಾಡಬೇಕಿದೆ ಎಂದು ಅಧಿಕಾರಿಗಳು ನನಗೆ ಹೇಳಿದ್ರು. ನಾನು ಮಾವನ ಮನೆಯನ್ನ ಕೆಡವಲು ಅಧಿಕಾರಿಗಳಿಗೆ ಆದೇಶಿಸಿದೆ. ಈ ವಿಚಾರವನ್ನ ನಾನು ನನ್ನ ಪತ್ನಿಗೂ ಹೇಳಿರಲಿಲ್ಲ ಎಂದು ಹಳೇ ನೆನಪನ್ನೂ ಮೆಲುಕು ಹಾಕಿದ್ದಾರೆ.
ಕೈಯಲ್ಲಿ ಮಚ್ಚು ಹಿಡಿದು, ಗ್ರಾಪಂ ಸದಸ್ಯೆಯನ್ನ ಹೊತ್ತೊಯ್ದ ಚಿಕ್ಕಪ್ಪ! ಕತ್ತಲಲ್ಲಿ ನಡೆಯಿತು ಘೋರ ದುರಂತ

ಕರೊನಾ ಎಂಬುದು ಕೇವಲ 1 ಗ್ರಾಂ ಅಷ್ಟೆ, ಇನ್ನೂ 8 ವರ್ಷ ಸಾವು-ನೋವು ಕಾಡುತ್ತೆ: ಭವಿಷ್ಯ ನುಡಿದ ಕೋಡಿಶ್ರೀಗಳು

ಕೈಯಲ್ಲಿ ಮಚ್ಚು ಹಿಡಿದು, ಗ್ರಾಪಂ ಸದಸ್ಯೆಯನ್ನ ಹೊತ್ತೊಯ್ದ ಚಿಕ್ಕಪ್ಪ! ಕತ್ತಲಲ್ಲಿ ನಡೆಯಿತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
