| ಆರ್.ಕೆ.ಸಿಂಗ್ಕೇಂದ್ರ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವರುಜಗತ್ತು ಸೌರ ಕ್ರಾಂತಿಯ ಉತ್ತುಂಗದಲ್ಲಿದೆ. ಸೌರಶಕ್ತಿಯು ಜಗತ್ತಿನ ಅತಿ ಹೇರಳವಾದ ಮತ್ತು ಶುದ್ಧ ಇಂಧನದ ಮೂಲವಾಗಿದೆ. ಅಲ್ಲದೆ, ಅದರ ವ್ಯಾಪಕವಾದ ಸ್ವೀಕಾರದಿಂದಾಗಿ ಅದು ಅಂತಾರಾಷ್ಟ್ರೀಯ ಹವಾಮಾನ ಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗಲು ಅಗತ್ಯ ಸಾಮಾನ್ಯ ಶಕ್ತಿಯಾಗಿದೆ. ಹಲವು ದೇಶಗಳು ಈಗ ವ್ಯವಸ್ಥಿತ ನೀತಿ ಮತ್ತು ನಿಬಂಧನೆಗಳನ್ನು ಹೊಂದಿವೆ. ಇದು ಜಾಗತಿಕ ಹವಾಮಾನ ಕ್ರಿಯೆ ಬಯಸುವ ವ್ಯಾಪ್ತಿ ಮತ್ತು ಲಭ್ಯತೆಯನ್ನು ಒದಗಿಸುತ್ತದೆ. ಸೌರ ಶಕ್ತಿಯು ಇಂಧನ ಲಭ್ಯತೆ ಮತ್ತು ಇಂಧನ ಭದ್ರತೆಯನ್ನು ನಿರ್ವಹಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ, ಅಭಿವೃದ್ಧಿಶೀಲ ದೇಶಗಳಲ್ಲಿ ಬ್ಯಾಟರಿ ಶಕ್ತಿ ಸಂಗ್ರಹಣೆ, ವಿದ್ಯುತ್ ವಾಹನ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಹೈಡ್ರೋಜನ್ ಉತ್ಪಾದನೆಯೊಂದಿಗೆ ಸಂಯೋಜಿಸುವ ಮೂಲಕ ಇಂಧನ ಪರಿವರ್ತನೆಯನ್ನು ಸುಗುಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವೆಚ್ಚ, ಸರಳತೆ ಮತ್ತು ಸುಲಭ ನಿರ್ವಹಣೆ, ಮಾಡ್ಯುಲಾರಿಟಿ ಮತ್ತು ಅನ್ವಯಿಸುವ ಶ್ರೇಣಿಯಲ್ಲಿ ಇತರ ಇಂಧನ ತಂತ್ರಜ್ಞಾನಗಳ ಮೇಲೆ ತಾಂತ್ರಿಕ ಶ್ರೇಷ್ಠತೆಯ ಹೊರತಾಗಿಯೂ, ಸೌರಶಕ್ತಿಯು ಒಂದು ಪ್ರಮುಖ ಸವಾಲನ್ನು ಎದುರಿಸುತ್ತಿದ್ದು, ಅದನ್ನು ಪರಿಹರಿಸಬೇಕಾಗಿದೆ. ಜಾಗತಿಕ ಫೋಟೋವೋಲ್ಟಿಕ್ (ಪಿವಿ) ಉತ್ಪಾದನಾ ಪೂರೈಕೆ ಸರಣಿಯು ಬೆರಳೆಣಿಕೆಯಷ್ಟು ದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದ್ದು, ಇತ್ತೀಚಿನ ಬೆಲೆ ಏರಿಕೆಯಿಂದಾಗಿ ಸೀಮಿತ ಪೂರೈಕೆ ಸರಣಿಯ ಉಸಿರುಗಟ್ಟುವ ಸ್ಥಿತಿ ಎದುರಿಸುವಂತಾಗಿದೆ. ಈ ಅಡಚಣೆಗಳು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಕೋವಿಡ್-19 ಬಿಕ್ಕಟ್ಟಿನಿಂದಾಗಿ ಬಹುಪಕ್ಷೀಯ ಸವಾಲುಗಳ ಕಾರಣಕ್ಕೆ ಸರಕುಗಳ ಏರಿಕೆ ಹೆಚ್ಚಾಗಿದ್ದು, ಇಂಧನ ಸುರಕ್ಷತೆಗಾಗಿ ಇಂಧನ, ಕಚ್ಚಾ ವಸ್ತುಗಳು ಮತ್ತು ಉತ್ಪಾದನಾ ಸರಕುಗಳ ಆಮದುಗಳಿಗಾಗಿ ಕೆಲವು ದೇಶಗಳ ಮೇಲೆ ಹೆಚ್ಚಿನ ಅವಲಂಬನೆ ಮಾಡಬೇಕಾಗಿ ಬಂದಿದೆ. ಸೋಲಾರ್ ಪ್ಯಾನಲ್‌ಗಳ ಖರೀದಿಯಲ್ಲಿ ಹೆಚ್ಚುವರಿ ಸವಾಲು ಇದೆ. 2030ರ ವೇಳೆಗೆ ಸೌರ ಪಿವಿ ಗಾಗಿ ಜಾಗತಿಕ ಬೇಡಿಕೆಯು 5,000 ಗಿಗಾವ್ಯಾಟ್‌ಗಳ (ಜಿಡಬ್ಲ್ಯು) ಸಂಚಿತ ಸಾಮರ್ಥ್ಯದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಆದರೂ ಸೋಲಾರ್‌ನ ಬೆಲೆಗಳು ಮತ್ತು ಜಗತ್ತಿನಾದ್ಯಂತ ಕೈಗೊಳ್ಳುತ್ತಿರುವ ಉಪಕ್ರಮಗಳನ್ನು ಗಮನಿಸಿದರೆ 10,000 ಗಿಗಾವ್ಯಾಟ್ ಸಮೀಸುವ ಅಂದಾಜುಗಳು ಇದೆ. ಇದರರ್ಥ ಪ್ರತಿ ವಾರ್ಷಿಕ ಸುಮಾರು 800 ರಿಂದ 10,000 ಗಿಗಾ ವ್ಯಾಟ್ ಪಿವಿಗಳು ಸಾಮರ್ಥ್ಯದ ಸೇರ್ಪಡೆಯಾಗುವ ನಿರೀಕ್ಷೆ ಇದ್ದು, ಈವರೆಗೆ 200ಗಿಗಾವ್ಯಾಟ್​ಗೆ ಸೀಮಿತವಾಗಿತ್ತು.
ಭವಿಷ್ಯಕ್ಕಾಗಿ ನಾವು ಪ್ರಸ್ತುತ ಸಾಮರ್ಥ್ಯಕ್ಕಿಂತ ಐದು ಪಟ್ಟು ಹೆಚ್ಚು ಮಾಡಬೇಕಾಗಿರುವುದರಿಂದ ನಿರಂತರ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ದೇಶಗಳು ತಮ್ಮ ಪೂರೈಕೆ ಸರಪಳಿಯನ್ನು ವೈವಿಧ್ಯಗೊಳಿಸುವ ಮೂಲಕ ನಿರಂತರತೆಯನ್ನು ಸುಧಾರಿಸಬಹುದು. ಸೌರ ಪಿವಿ ಉತ್ಪಾದನಾ ಯೋಜನೆಗಳ ಅಭಿವೃದ್ಧಿಯನ್ನು ಬೆಂಬಲಿಸುವ ಅತ್ಯುತ್ತಮ ಮಾರ್ಗವೆಂದರೆ ಅಪ್‌ಸ್ಟ್ರೀಮ್ (ಮೇಲ್ಮಟ್ಟದ) ಉತ್ಪಾದಕರಿಗೆ ನೇರ ಬೆಂಬಲ, ಉದಾಹರಣೆಗೆ ತೆರಿಗೆ ವಿನಾಯಿತಿಗಳು, ಕಡಿಮೆ ಬಡ್ಡಿಯಲ್ಲಿ ಹಣಕಾಸು ಲಭ್ಯತೆ ಅಥವಾ ನೇರ ಸಬ್ಸಿಡಿಗಳಂತಹ ಹಣಕಾಸಿನ ಪ್ರೋತ್ಸಾಹಗಳ ಮೂಲಕ (ಉದಾಹರಣೆಗೆ, ಭೂಮಿ ಅಥವಾ ಮೂಲಸೌಕರ್ಯ ಹೂಡಿಕೆಗಳು) ನೆರವು ನೀಡಬೇಕು.
ಬೇಡಿಕೆಯನ್ನು ಉತ್ತೇಜಿಸುವುದು ಮತ್ತು ತಳಮಟ್ಟದ ಉತ್ಪಾದಕರನ್ನು ಪ್ರೊತ್ಸಾಹಿಸುವುದು ಉದ್ಯಮವನ್ನು ಅಭಿವೃದ್ಧಿಪಡಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಆದರೆ ಇದಕ್ಕೆ ಮತ್ತಷ್ಟು ಹೂಡಿಕೆ ಅಗತ್ಯ ಹಾಗೂ ಅದನ್ನು ಆಕರ್ಷಿಸಲು ಕ್ರಮ ಕೈಗೊಳ್ಳಬೇಕು. ಸೌರ ಪಿವಿಯಲ್ಲಿ ಉತ್ಪಾದನೆಯನ್ನು ಉತ್ತೇಜಿಸಲು ಭಾರತವು ಇತ್ತೀಚೆಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಅದರ ಅಡಿಯಲ್ಲಿ ಯೋಜನೆಗಳಿಗೆ ಬಿಡ್‌ದಾರರು ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸುತ್ತಾರೆ ಮತ್ತು ನಡೆಸುತ್ತಾರೆ ಅದು ಸಂಪೂರ್ಣ ಉತ್ಪಾದನಾ ಪ್ರಕ್ರಿಯೆಯಲ್ಲಿ ಪಾಲಿಸಿಲಿಕಾನ್, ಇನ್‌ಗಾಟ್ಸ್, ವೇಫರ್‌ಗಳು, ಕೋಶಗಳು ಮತ್ತು ಹೆಚ್ಚಿನ ದಕ್ಷತೆಯ ಸೌರ ಫಲಕಗಳನ್ನು ಉತ್ಪಾದಿಸಲಾಗುತ್ತದೆ.
ಸೌರ ಪಿವಿ ಉತ್ಪಾದನಾ ವಲಯದ ದೀರ್ಘಾವಧಿಯ ಆರ್ಥಿಕ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಕ್ಷಿಪ್ರ ಮತ್ತು ಕಡಿಮೆ ವೆಚ್ಚದ ಶುದ್ಧ ಇಂಧನ ಪರಿವರ್ತನೆಗಳಿಗೆ ನಿರ್ಣಾಯಕವಾಗಿದೆ. ಕ್ಷಿಪ್ರ ಬೆಳವಣಿಗೆ, ಯೋಜನೆಗಳ ದೀರ್ಘ ಅವಧಿಯೊಂದಿಗೆ ಸೇರಿ, ಪೂರೈಕೆ ಮತ್ತು ಬೇಡಿಕೆ ಹೊಂದಾಣಿಕೆಯ ಅಪಾಯವನ್ನು ಹೆಚ್ಚಿಸುತ್ತದೆ, ಇದು ವೆಚ್ಚ ಹೆಚ್ಚಳ ಮತ್ತು ಪೂರೈಕೆ ಕೊರತೆಗೆ ಕಾರಣವಾಗಬಹುದು. ಎಲ್ಲ ಪೂರೈಕೆ ಸರಪಳಿ ವಿಭಾಗಗಳಿಗೆ ಸೌರ ಪಿವಿ ವಲಯದ ನಿವ್ವಳ ಲಾಭದಾಯಕತೆಯು ಅಸ್ಥಿರವಾಗಿದೆ. ಹಾಗಾಗಿ, ವ್ಯಾಪಾರ ವಿಧಾನಗಳಲ್ಲಿನ ದುರ್ಬಲತೆಗಳನ್ನು ಪೂರಕ ನೀತಿಗಳಿಂದ ರಕ್ಷಿಸಬೇಕಾಗಿದೆ.
ದೇಶಗಳ ನಡುವೆ ಹೆಚ್ಚಿದ ಸಹಕಾರವು ಇಂಧನ ಪರಿವರ್ತನೆಯ ಬೆನ್ನೆಲುಬಾಗಿರುತ್ತದೆ, ಹೂಡಿಕೆಯನ್ನು ಪೋಷಿಸುತ್ತದೆ ಮತ್ತು ಲಕ್ಷಾಂತರ ಹೊಸ ಹಸಿರು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಸರ್ಕಾರಗಳು ಮತ್ತು ಬಾಧ್ಯಸ್ಥಗಾರರು ಸೋಲಾರ್ ಪಿವಿ ಉತ್ಪಾದನೆಗೆ ಹೆಚ್ಚಿನ ಗಮನವನ್ನು ನೀಡಲಾರಂಭಿಸಿದ್ದಾರೆ, ಆದರೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಕ್ಷಿಪ್ರವಾಗಿ ಇಂಗಾಲಮಯವಾಗುತ್ತಿರುವ ಜಗತ್ತಿನಲ್ಲಿ ಈ ವಲಯದ ಕಾರ್ಯತಂತ್ರದ ಪ್ರಾಮುಖ್ಯತೆಗೆ ಸಮಾನ ಮನಸ್ಕ ದೇಶಗಳು ಒಗ್ಗೂಡಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಮಾಡ್ಯೂಲ್ (ಮಾದರಿ) ತಯಾರಿಕೆಯು ಎಲ್ಲೆಡೆ ನಡೆಯುತ್ತದೆಂದು ನಿರೀಕ್ಷಿಸಲಾಗಿದೆ. ಆರಂಭಿಕ ವರ್ಷಗಳಲ್ಲಿ ಬೆಂಬಲದ ಅವಶ್ಯಕತೆಯಿದೆ ಮತ್ತು ಜಾಗತಿಕ ಸಮುದಾಯವಾಗಿ, ಉತ್ಪಾದನೆಗೆ ಪೂರಕ ಪರಿಸರ ಸೃಷ್ಟಿಸುವಲ್ಲಿ ನಾವು ಎಲ್ಲ ದೇಶಗಳನ್ನು ಬೆಂಬಲಿಸಬೇಕಾಗಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸಹಿ ಹಾಕಿರುವ ಮತ್ತು 110 ಸದಸ್ಯ ರಾಷ್ಟ್ರಗಳು ಈ ಬದಲಾವಣೆಯನ್ನು ತರಲು ಗಂಭೀರ ಪ್ರಯತ್ನ ನಡೆಸಿವೆ.
ಸೋಲಾರ್ ಪ್ಲಸ್ ಬ್ಯಾಟರಿಗಳು ಹೆಚ್ಚು ಸ್ಪರ್ಧಾತ್ಮಕವಾಗುವುದು ಸೇರಿದಂತೆ ಹೊಸ ತಂತ್ರಜ್ಞಾನಗಳು ಮಾರುಕಟ್ಟೆಗೆ ಬರಲಿವೆ. ಪೂರೈಕೆ ಸರಪಳಿಯಲ್ಲಿ ಹೊಸ ಸೌರ ಪಿವಿ ಉತ್ಪಾದನಾ ಸೌಲಭ್ಯಗಳು 2030ರ ವೇಳೆಗೆ ಶತಕೋಟಿ ಹೂಡಿಕೆಯನ್ನು ಆಕರ್ಷಿಸಬಹುದು. ಪೂರೈಕೆ ಸರಪಳಿಯ ಉದ್ದಕ್ಕೂ ವಾರ್ಷಿಕ ಹೂಡಿಕೆ ಮಟ್ಟಗಳು ದ್ವಿಗುಣಗೊಳ್ಳುವ ಅಗತ್ಯವಿದೆ. ಪಾಲಿಸಿಲಿಕಾನ್, ಇನ್‌ಗಾಟ್ಸ್ ಮತ್ತು ವೇಫರ್‌ಗಳ ತಯಾರಿಕೆಯು ನಿರ್ಣಾಯಕ ಹಂತಗಳಾಗಿವೆ ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಬೆಂಬಲಿಸಲು ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವ ಅಗತ್ಯವಿದೆ. ಸೌರ ಶಕ್ತಿಯು ಹೇರಳವಾಗಿ ಲಭ್ಯವಿದೆ, ಮನೆಗಳು ಮತ್ತು ಸಮುದಾಯಗಳು ಇಂಧನದ ವಿಷಯದಲ್ಲಿ ಸ್ವಾವಲಂಬಿಯಾಗಲು ಅನುವು ಮಾಡಿಕೊಡುವ ಸೌರಶಕ್ತಿಗಿಂತ ಸೂಕ್ತವಾದ ತಂತ್ರಜ್ಞಾನವಿಲ್ಲ. ಗ್ರಿಡ್-ಇಂಟ್ಯಾರ್‍ಯಾಕ್ಟಿವ್ ಮಿನಿ ಗ್ರಿಡ್‌ಗಳು ಮತ್ತು ಮೇಲ್ಛಾವಣಿಯಲ್ಲಿ ಸೌರ ಫಲಕಗಳ ಅಳವಡಿಕೆ ಈ ಬದಲಾವಣೆಯನ್ನು ಸಕ್ರಿಯಗೊಳಿಸುತ್ತವೆ. ಸೌರಶಕ್ತಿಯು 2070ರವೇಳೆಗೆ ನಾವು ಎದುರುನೋಡುತ್ತಿರುವ ನಿವ್ವಳ ಶೂನ್ಯ ಇಂಗಾಲದ- ನೆಟ್ ಝಿರೋ ಕಾರ್ಬನ್ ಗುರಿ ಸಾಧನೆಗೆ ಭಾರತಕ್ಕೆ ಮೂಲಾಧಾರವಾಗಬಹುದು.(ಲೇಖನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಆರ್.ಕೆ.ಸಿಂಗ್ ಅವರ ವೈಯಕ್ತಿಕ)
ಚಿನ್ನದ ವ್ಯಾಮೋಹಕ್ಕೆ ಭೂಮಿ ಹೋಯ್ತು! 20 ಲಕ್ಷ ರೂಪಾಯಿಗೆ 8 ಕೆಜಿ ಚಿನ್ನದ ಆಮಿಷ… ಸಂಕಷ್ಟದಲ್ಲಿ ದಂಪತಿ…

ಅನ್ಯಕೋಮಿನ ಯುವಕನ ಜತೆ ಪ್ರೀತಿ; ಮಗಳನ್ನೇ ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿದ ತಂದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 19 =
Remember me
