ನವದೆಹಲಿ:ಈಗಾಗಲೇ ಸಾವಿರಾರು ಮಂದಿಯನ್ನು ತನ್ನ ಮೃತ್ಯಕೂಪಕ್ಕೆ ಆಹುತಿ ಪಡೆದುಕೊಂಡು ಜಾಗತಿಕವಾಗಿ ಹರಡುತ್ತಾ ಸಾವಿನ ಭೀತಿಯನ್ನು ಹೆಚ್ಚಿಸುತ್ತಿರುವ ಮಾರಕ ಕೊರೊನಾ ವೈರಸ್​ ವಿರುದ್ಧ ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ಸೋಮವಾರ ಘೋಷಣೆ ಕೂಗಿರುವ ವಿಡಿಯೋ ವೈರಲ್​ ಆಗಿದೆ.
ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಒಟ್ಟಾಗಿ ಸೇರಿದ್ದ ಜನಸಮೂಹದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ರಾಜ್ಯ ಸಚಿವ ಅಠವಳೆ ಸಹ ಪಾಲ್ಗೊಂಡರು. ಈ ವೇಳೆ “ಕೊರೊನಾ ಹೋಗು! ಹೋಗು ಕೊರೊನಾ” (ಕೊರೊನಾ ಗೋ! ಗೋ ಕೊರೊನಾ!) ಎಂದು ಘೋಷಣೆ ಕೂಗಿದರು.
ದೇಶಾದ್ಯಂತ ಹರಡುತ್ತಿರುವ ಮಾರಣಾಂತಿಕ ಕೊರೊನಾ ವೈರಸ್​ ಅನ್ನು ತಗ್ಗಿಸಲು ಕೇಂದ್ರ ಸರ್ಕಾರದ ತಯಾರಿಗೆ ಜನರ ಸಾಮೂಹಿಕ ಘೋಷಣೆಯು ಕೂಡ ನೆರವಾಯಿತು. ದೇಶದಲ್ಲಿ ಕೊರೊನಾ ವೈರಸ್​ ಹೆಚ್ಚು ಭೀಕರತೆ ಸೃಷ್ಟಿಸದಿರಲು ಈಗಾಗಲೇ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ.
ಚೀನಾದ ವುಹಾನ್​ ನಗರದಲ್ಲಿ ಸ್ಫೋಟಗೊಂಡ ಕೊರೊನಾ ವೈರಸ್​ ಈಗಾಗಲೇ ಜಾಗತಿಕವಾಗಿ 4000 ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದುಕೊಂಡಿದೆ. ಭಾರತದಲ್ಲಿಯೂ 50 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಜನತೆಗೆ ನಿರಂತರವಾಗಿ ತಿಳಿಹೇಳುತ್ತಿದೆ.(ಏಜೆನ್ಸೀಸ್​)

ಕೇರಳದಲ್ಲಿ ಮತ್ತೆ ಆರು ಜನರಲ್ಲಿ ಕೊರೊನಾ ಪತ್ತೆ: 7ನೇ ತರಗತಿಯವರೆಗಿನ ಮಕ್ಕಳಿಗೂ ರಜೆ, ಸಾರ್ವಜನಿಕ ಸಭೆಗಳು ರದ್ದು

ವಾರಾಣಸಿಯ ವಿಶ್ವನಾಥನನ್ನೂ ಬಿಟ್ಟಿಲ್ಲ ಕೊರೊನಾ ವೈರಸ್​: ಮಾಸ್ಕ್​ ತೊಟ್ಟು ದರ್ಶನ ನೀಡುತ್ತಿರುವ ದೇವರು

ಕೊರೊನಾ ಪೀಡಿತ ಇರಾನ್​ನಿಂದ ಭಾರತಕ್ಕೆ ಬಂದಿಳಿದ 58 ಸ್ವದೇಶಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eighteen =
Remember me
