ಪಣಜಿ:ಕೊವಿಡ್​-19 ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಆಯುಷ್​ ಇಲಾಖೆ ಸಚಿವ ಶ್ರೀಪಾದ್​ ನಾಯ್ಕ್​ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ.
ಶ್ರೀಪಾದ್​ ನಾಯ್ಕ್​ ಅವರ ರಕ್ತದಲ್ಲಿ ಆಮ್ಲಜನಕ ಶುದ್ಧತ್ವ ಮಟ್ಟ ಇಂದು ಕುಸಿದಿದೆ. ಇಂದು ಸಂಜೆ ದೆಹಲಿಯ ಏಮ್ಸ್​ ಮತ್ತು ಕಮಾಂಡ್​ ಆಸ್ಪತ್ರೆಯ ತಜ್ಞ ವೈದ್ಯರು ಗೋವಾಕ್ಕೆ ತೆರಳಿದ್ದು, ಸಚಿವರ ಆರೋಗ್ಯದ ಸಂಪೂರ್ಣ ವರದಿ ಪಡೆಯಲಿದ್ದಾರೆ. ಹಾಗೇ ಚಿಕಿತ್ಸೆ ನೀಡಲಿದ್ದಾರೆ ಎಂದೂ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:ನಾಯಕತ್ವ ಹೊಣೆ ಹೊರಲು ರೆಡಿಯಾಗಿರುವ ರಾಹುಲ್​ಗೆ ಮಾದರಿ ನಾಯಕರು ಯಾರು ಗೊತ್ತೆ..?
ದೆಹಲಿಯಿಂದ ಆಗಮಿಸಿರುವ ವೈದ್ಯರ ತಂಡ ಸೂಚಿಸಿದರೆ ನಾಯ್ಕ್​ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೇ ಸ್ಥಳಾಂತರ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆಗಸ್ಟ್​ 12ರಂದು ಶ್ರೀಪಾದ್​ ನಾಯ್ಕ್​ ಅವರು ಗೋವಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮಧ್ಯಾಹ್ನದಿಂದ ಅವರ ಆರೋಗ್ಯದಲ್ಲಿ ಏರಿಳಿತವುಂಟಾಗಿದೆ. (ಏಜೆನ್ಸೀಸ್​)
ಕುಸಿದು ಬಿದ್ದ 5 ಅಂತಸ್ತಿನ ವಸತಿ ಕಟ್ಟಡ; ಅವಶೇಷಗಳಡಿ 70ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 15 =
Remember me
