ನವದೆಹಲಿ:ನಟಿ ದೀಪಿಕಾ ಪಡುಕೋಣೆ ದೇಶ ಒಡೆಯುವವರ ಜತೆ ನಿಂತಿದ್ದಾರೆ. ಹಾಗಾದರೆ ಅವರ ರಾಜಕೀಯ ನಿಲುವೇನು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೀಪಿಕಾ ಅವರ ರಾಜಕೀಯ ಸಂಬಂಧ ಏನು? ಏಕೆಂದರೆ ಜೆಎನ್​ಯು ವಿದ್ಯಾರ್ಥಿಗಳ ಜತೆ ಅವರು ಭಾಗವಹಿಸಿದ್ದರ ಸುದ್ದಿ ತಿಳಿದವರಿಗೆ ಸ್ಪಷ್ಟತೆ ಬೇಕಿದೆ. ಭಾರತ ದೇಶ ತುಂಡಾಗಬೇಕು ಎಂದವರ ಜತೆ ನಿಲ್ಲುವ ಸ್ವಾತಂತ್ರ್ಯ ನಟಿ ದೀಪಿಕಾ ಅವರಿಗಿದೆ ಎಂದರು.
ನಾನು ಅವರ ಹಕ್ಕನ್ನು ವಿರೋಧಿಸುವುದಿಲ್ಲ. 2011ರಲ್ಲಿ ಅವರು ಕಾಂಗ್ರೆಸ್​ನ್ನು ಬೆಂಬಲಿಸಿದ್ದರು. ಇದು ಯಾರಿಗಾದರೂ ಅಚ್ಚರಿಯಾಗಿದ್ದರೆ. ಕಾಂಗ್ರೆಸ್​ಗೆ ಬೆಂಬಲಿಸಿದ್ದ ಸುದ್ದಿ ಅವರಿಗೆ ತಿಳಿದಿರಲಿಕ್ಕಿಲ್ಲ ಎಂದರು.
ಅಸ್ಸಾಂ ರಾಜ್ಯದ ಸಚಿವ ಹಿಮಂತ್​ ಬಿಸ್ವಾಸ್​ ಶರ್ಮಾ, ದೀಪಿಕಾ ಅವರು ತಮ್ಮ ಚಪಾಕ್​ ಸಿನಿಮಾದ ಪ್ರಚಾರಕ್ಕಾಗಿ ಹೋಗಿದ್ದರು. ಸಿನಿಮಾ ನಟ-ನಟಿಯರಿಗೆ ಜನರಿದ್ದಲ್ಲಿಗೆ ಹೋಗುವುದು, ಸಮಸ್ಯೆಗಳನ್ನು ಸೃಷ್ಟಿಸುವುದು ಹವ್ಯಾಸವಾಗಿರುತ್ತದೆ ಎಂದು ವ್ಯಂಗ್ಯವಾಡಿದರು.
ಕಳೆದ ಮಂಗಳವಾರ ನಟಿ ದೀಪಿಕಾ ಪಡುಕೋಣೆ ಜೆಎನ್​ಯು ವಿವಿಗೆ ಭೇಟಿ ಕೊಟ್ಟಿದ್ದರು. 15 ನಿಮಿಷಗಳ ಕಾಲ ಅಲ್ಲಿನ ಸಭೆಯಲ್ಲಿ ಭಾಗವಹಿಸಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 17 =
Remember me
