ತಿರುವನಂತಪುರಂ:ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ‘ಭಾರತ ಮಾತೆ’ ಎಂದು ಕರೆದ ಕೇಂದ್ರ ಸಚಿವ ಸುರೇಶ್ ಗೋಪಿ ಅವರು, ಕೇರಳ ಮುಖ್ಯಮಂತ್ರಿ ದಿವಂಗತ ಕೆ.ಕರುಣಾಕರನ್ ಅವರನ್ನು ‘ಧೈರ್ಯಶಾಲಿ ಆಡಳಿತಗಾರ’ ಎಂದು ಬಣ್ಣಿಸಿದ್ದಾರೆ.
ಇದನ್ನು ಓದಿ:ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳುವ ಮಾತೇ ಇಲ್ಲ; ಉದ್ಧವ್​ ಠಾಕ್ರೆ ಹೇಳಿದ್ದು ಯಾರಿಗೆ?
ಪುಂಕುನ್ನಂನಲ್ಲಿರುವ ಕರುಣಾಕರನ್ ಅವರ ಸ್ಮಾರಕ ‘ಮುರಳಿ ಮಂದಿರಂ’ಗೆ ಭೇಟಿ ನೀಡಿದ್ದ ಅವರು ಕರುಣಾಕರನ್ ಮತ್ತು ಮಾರ್ಕ್ಸ್‌ವಾದಿ ಹಿರಿಯ ಇಕೆ ನಾಯನಾರ್ ಅವರನ್ನು ತಮ್ಮ ‘ರಾಜಕೀಯ ಗುರುಗಳು’ ಎಂದು ಬಣ್ಣಿಸಿದ್ದಾರೆ. ಗುರುವಿಗೆ ನಮನ ಸಲ್ಲಿಸಲು ಮಾತ್ರ ಇಲ್ಲಿಗೆ ಬಂದಿದ್ದೇನೆ. ಈ ಭೇಟಿಯನ್ನು ರಾಜಕೀಯದೊಂದಿಗೆ ಜೋಡಿಸಬೇಡಿ ಎಂದಿದ್ದಾರೆ.
ಇಂದಿರಾಗಾಂಧಿ ಅವರನ್ನು ‘ಭಾರತದಿಂದೆ ಮಾತೆ’ (ಭಾರತ ಮಾತೆ) ಎಂದು ಮತ್ತು ಕೆ. ಕರುಣಾಕರನ್ ಅವರನ್ನು ‘ಕೇರಳದ ಕಾಂಗ್ರೆಸ್ ಪಕ್ಷದ ಪಿತಾಮಹ’ ಎಂದು ಪರಿಗಣಿಸಿರುವುದಾಗಿ ಸುರೇಶ್ ಗೋಪಿ ಸ್ಪಷ್ಟಪಡಿಸಿದರು. ಕರುಣಾಕರನ್ ಅವರನ್ನು ಕೇರಳದಲ್ಲಿ ಕಾಂಗ್ರೆಸ್ ಪಿತಾಮಹ ಎಂದು ಕರೆಯುವ ಮೂಲಕ ಅವರು ಈ ದಕ್ಷಿಣ ರಾಜ್ಯದಲ್ಲಿ ಪಕ್ಷದ ಸಂಸ್ಥಾಪಕರು ಅಥವಾ ಸಹ ಸಂಸ್ಥಾಪಕರಿಗೆ ಅಗೌರವ ತೋರುತ್ತಿಲ್ಲ. ಹಿರಿಯ ಕಾಂಗ್ರೆಸ್ ನಾಯಕನ ಆಡಳಿತ ಸಾಮರ್ಥ್ಯವನ್ನು ಶ್ಲಾಘಿಸಿ, ಅವರನ್ನು ಅವರ ಪೀಳಿಗೆಯ ‘ಧೈರ್ಯಶಾಲಿ ಆಡಳಿತಗಾರ’ ಎಂದು ಕರೆದಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಈ ಚುನಾವಣೆಯಲ್ಲಿ ಕರುಣಾಕರನ್ ಪುತ್ರ ಹಾಗೂ ಕಾಂಗ್ರೆಸ್ ನಾಯಕ ಕೆ.ಮುರಳೀಧರನ್ ಅವರನ್ನು ಸೋಲಿಸಿದ್ದಾರೆ. (ಏಜೆನ್ಸೀಸ್​​)
ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಎನ್​ಸಿಪಿ ನಾಯಕ ಶರದ್​ ಪವಾರ್​​; ಕಾರಣ ಏನು ಗೊತ್ತಾ?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:nine + eight =
Remember me
