ಬೆಂಗಳೂರು:ಅಂದಾಜು ಎರಡು ತಿಂಗಳ ಬಳಿಕ ದೇಶಿಯ ವಿಮಾನ ಸಂಚಾರ ಸೋಮವಾರದಿಂದ ಪುರಾರಂಭಗೊಂಡಿದೆ. ದೆಹಲಿಯಿಂದ ಬೆಂಗಳೂರುಗೆ ಹೊರಟ ಮೊದಲ ವಿಮಾನದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಬೆಂಗಳೂರಿಗೆ ಆಗಮಿಸಿದರು.
ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ನೇರವಾಗಿ ತಮ್ಮ ಅಧಿಕೃತ ಕಾರನ್ನು ಏರಿದ ಅವರು ಮನೆಗೆ ಹೋದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ತಾವು ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಔಷಧ ಖಾತೆಯ ಸಚಿವರಾಗಿದ್ದು, ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್​ ನಿಯಮದಿಂದ ವಿನಾಯ್ತಿ ಇರುವುದಾಗಿ ಹೇಳಿದರು.
ಆದರೆ, ಕರ್ನಾಟಕ ಸರ್ಕಾರದ ನಿಯಮದ ಪ್ರಕಾರ ಮಹಾರಾಷ್ಟ್ರ, ರಾಜಸ್ಥಾನ, ದೆಹಲಿ, ಗುಜರಾತ್​, ತಮಿಳುನಾಡು, ಮತ್ತು ಮಧ್ಯಪ್ರದೇಶದಂಥ ಕೆಂಪು ವಲಯದಿಂದ ಬರುವ ವಿಮಾನದ ಪ್ರಯಾಣಿಕರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್​ ಕಡ್ಡಾಯವಾಗಿದೆ. ಈ ನಿಯಮ ಎಲ್ಲರಿಗೂ ಅನ್ವಯ ಎಂದು ಹೇಳಲಾಗಿತ್ತು. ಆದರೆ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತ್ರ ಈ ನಿಯಮವನ್ನು ಉಲ್ಲಂಘಿಸಿ ಮನೆಗೆ ಹೋಗಿದ್ದರ ಬಗ್ಗೆ ಅಚ್ಚರಿ ಹಾಗೂ ಟೀಕೆ ವ್ಯಕ್ತವಾಗುತ್ತಿದೆ.
ದಿಲ್ಲಿಯಿಂದ ಬೆಂಗಳೂರಿಗೆ ಒಬ್ಬನೇ ಬಂದ ಐದರ ಪೋರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 10 =
Remember me
