ನವದೆಹಲಿ: ಕೃಷಿ ಭೂಮಿ ಗುತ್ತಿಗೆಗೆ ನೀಡುವುದು, ಗುತ್ತಿಗೆ ಕೃಷಿ(contract farming)ಗೆ ಸಂಬಂಧಿಸಿದ ಕೇಂದ್ರದ ಮೂರು ಮಾದರಿ ಕಾನೂನುಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2020ರ ಬಜೆಟ್​ನಲ್ಲಿ ಈ ವಿಷಯ ಉಲ್ಲೇಖವಾಗಿದ್ದು, ಬಂಜರು ಅಥವಾ ಪಾಳು ಬಿದ್ದ ಜಮೀನಿನಲ್ಲಿ ಸೌರ ಘಟಕಗಳನ್ನು ಅಳವಡಿಸುವುದಕ್ಕೆ ಕೃಷಿಕರಿಗೆ ಅವಕಾಶ ನೀಡಲಾಗುತ್ತದೆ. ಮತ್ತು ಆ ವಿದ್ಯುತನ್ನು ಪವರ್​ಗ್ರಿಡ್​ಗೆ ಜೋಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ದೇಶದ 20 ಲಕ್ಷ ರೈತರಿಗೆ ಅವರದ್ದೇ ಆದ ಸೋಲಾರ್ ಪಂಪ್​​ ಸ್ಥಾಪಿಸುವುದಕ್ಕೆ ಸರ್ಕಾರ ಹಣಕಾಸು ನೆರವು ನೀಡಲಿದೆ. ಇದಲ್ಲದೆ, ಬರಪೀಡಿತ 100 ಜಿಲ್ಲೆಗಳಲ್ಲಿ ಸಮಗ್ರ ಕ್ರಮಗಳ ಪ್ರಸ್ತಾವನೆಯನ್ನೂ ಸರ್ಕಾರ ಸಿದ್ಧಪಡಿಸಿಕೊಂಡಿದೆ. ಗೊಬ್ಬರದ ಸಮರ್ಪಕ ಬಳಕೆ ಮತ್ತು ಕಡಿಮೆ ನೀರಿನ ಬಳಕೆ ಹಾಗೂ ರಾಸಾಯನಿಕ ಗೊಬ್ಬರಗಳ ಸಮತೋಲನದ ಬಳಕೆ ಕುರಿತಂತೆ ರೈತರಿಗೆ ನೆರವಾಗಲು ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಸಮತೋಲನದ ರಾಸಾಯನಿಕ ಗೊಬ್ಬರ ಬಳಕೆಯ ಮೂಲಕ ಅದನ್ನೇ ಅವಲಂಬಿಸಿದ್ದ ಕ್ಷೇತ್ರದಲ್ಲಿ ಬದಲಾವಣೆ ತರುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ ಎಂದರು.
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ವೇರ್​ಹೌಸ್ ಕಾರ್ಪೊರೇಷನ್ ಆಫ್ ಇಂಡಿಯಾಗಳು ತಮ್ಮದೇ ಜಾಗದಲ್ಲಿ ಇನ್ನಷ್ಟು ಉಗ್ರಾಣಗಳನ್ನು ನಿರ್ಮಿಸಲಿವೆ. ದೇಶಾದ್ಯಂತ ಇರುವ 162 ಮಿಲಿಯನ್ ಕೃಷಿ ಉಗ್ರಾಣಗಳ ಜಿಯೋ ಟ್ಯಾಬ್​ ಮತ್ತು ಮ್ಯಾಪ್ ಮಾಡುವ ಕೆಲಸವನ್ನು ನಬಾರ್ಡ್ ಮಾಡಲಿದೆ ಎಂದು ಸಚಿವರು ಹೇಳಿದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
