ನವದೆಹಲಿ:ಕೊವಿಡ್​-19 ಸಾಂಕ್ರಾಮಿಕ ನಿಯಂತ್ರಣವನ್ನು ಯಶಸ್ವಿಯಾಗಿ ನಿಭಾಯಿಸಿದ ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರಿಗೆ ವಿಶ್ವ ಸಂಸ್ಥೆ ಮಂಗಳವಾರ ಗೌರವ ಸಲ್ಲಿಸಿದೆ.
ವಿಶ್ವಸಂಸ್ಥೆ ಜೂ.23ರಂದು ಸಾರ್ವಜನಿಕ ಸೇವಾ ದಿನವನ್ನು ಆಚರಿಸಿದ್ದು, ಅದರಲ್ಲಿ ಮಾತನಾಡಲು ಭಾರತದಿಂದ ಕೆ.ಕೆ.ಶೈಲಜಾ ಅವರಿಗೆ ಆಹ್ವಾನ ನೀಡಿತ್ತು. ಭಾರತದಲ್ಲಿ ಮೊದಲ ಕೊವಿಡ್​ ಪ್ರಕರಣ ಪತ್ತೆಯಾಗಿದ್ದು ಕೇರಳದಲ್ಲಾದರೂ ಕರೊನಾ ನಿಯಂತ್ರಣದ ಕ್ರಮಗಳಲ್ಲಿ ಇಡೀ ದೇಶಕ್ಕೇ ಆ ರಾಜ್ಯ ಮಾದರಿಯಾಗಿದೆ. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ನೇತೃತ್ವದಲ್ಲಿ ಸಾಂಕ್ರಾಮಿಕ ರೋಗದ ಪ್ರಸರಣವನ್ನು ಯಶಸ್ವಿಯಾಗಿ ತಡೆಗಟ್ಟಲಾಗುತ್ತಿದೆ.
ಅದನ್ನು ಗುರುತಿಸಿದ್ದ ವಿಶ್ವ ಸಂಸ್ಥೆ ಶೈಲಜಾ ಅವರನ್ನು ಸಾರ್ವಜನಿಕ ಸೇವಾ ದಿನಕ್ಕೆ ಸ್ಪೀಕರ್ ಆಗಿ ಆಹ್ವಾನಿಸಿತ್ತು. ಈ ವೆಬಿನಾರ್ ಸಮಾರಂಭದಲ್ಲಿ ಮಾತನಾಡಿದ ಶೈಲಜಾ ಅವರು, ಕೇರಳದಲ್ಲಿ ಕರೊನಾ ನಿಯಂತ್ರಣಕ್ಕೆ ತಮ್ಮ ರಾಜ್ಯದಲ್ಲಿ ಅಳವಡಿಸಿಕೊಂಡ ಕ್ರಮಗಳ ಬಗ್ಗೆ ಹೇಳಿದ್ದಾರೆ. ನಂತರ ವಿಶ್ವಸಂಸ್ಥೆಯ ಪ್ರಮುಖರು ಅವರನ್ನು ಗೌರವಿಸಿದ್ದಾರೆ.ಇದನ್ನೂ ಓದಿ:ಕಾದು ಕಾದು ಸುಸ್ತಾಗಿದ್ದ ಫ್ಯಾನ್ಸ್​​ಗೆ ಸಖತ್​ ಸರ್ಪ್ರೈಸ್​ ಕೊಡಲು ಗಣೇಶ್​ ರೆಡಿ..
ವಿಶ್ವ ಸಂಸ್ಥೆಯ ಸಾರ್ವಜನಿಕ ಸೇವಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಭಾರತದಿಂದ ಆಯ್ಕೆಯಾದ ಕೇರಳದ ಆರೋಗ್ಯ ಸಚಿವೆ ಶೈಲಜಾ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಈ ವರ್ಚ್ಯುವಲ್​ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು.ಇದನ್ನೂ ಓದಿ:ಟ್ರಂಪಣ್ಣಾ… ಎಚ್‌1ಬಿ ವೀಸಾ ರದ್ದುಗೊಳಿಸಿದ್ರೆ ನಿಮ್‌ ಹೆಂಡ್ತಿ ಗತಿಯೇನಣ್ಣಾ…?
ಈ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಸಾಮನ್ಯ ಸಭೆಯ ಅಧ್ಯಕ್ಷ ಟಿಜ್ಜಾನಿ ಮುಹಮ್ಮದ್-ಬಂಡೆ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು. (ಏಜೆನ್ಸೀಸ್​)
ಚೀನಾ ನಿರ್ಮಿತ ವಿದ್ಯುತ್ ಮೀಟರ್ ಬಹಿಷ್ಕರಿಸಿದ ಯೋಗಿ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 12 =
Remember me
