ನವದೆಹಲಿ:ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಶುಲ್ಕವನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ಶಿಫಾರಸು ಮಾಡಿದೆ. ಐಸಿಯು ಹಾಸಿಗೆಗಳು ಮತ್ತು ಆಸ್ಪತ್ರೆಯ ಒಟ್ಟಾರೆ ಖರ್ಚನ್ನು ಸುಮಾರು ಅರ್ಧ ಕಡಿಮೆಗೊಳಿಸುವಂತೆ ತಿಳಿಸಲಾಗಿದೆ. ಪ್ರಸ್ತುತ ಐಸೋಲೇಷನ್ ಹಾಸಿಗೆಗಳಿಗೆ 24-25 ಸಾವಿರ ರೂ., ವೆಂಟಿಲೇಟರ್ ರಹಿತ ಐಸಿಯುಗೆ 34-43 ಸಾವಿರ ರೂ., ವೆಂಟಿಲೇಟರ್ ಸಹಿತ ಐಸಿಯುಗೆ 44-54 ಸಾವಿರ ರೂ. ಶುಲ್ಕ ವಿಧಿಸಲಾಗುತ್ತಿದೆ. ಸಮಿತಿಯ ಶಿಫಾರಸ್ಸಿನ ಮೇರೆಗೆ ಅದನ್ನು 9-10 ಸಾವಿರ, 13-50 ಸಾವಿರ, 15-18 ಸಾವಿರಕ್ಕೆ ಇಳಿಸಲಾಗುವುದು. ಮೊದಲು ದೆಹಲಿಯಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ ಎನ್ನಲಾಗಿದೆ.
ದೆಹಲಿ ಆರೋಗ್ಯ ಸಚಿವರ ಸ್ಥಿತಿ ಗಂಭೀರ:ಕರೊನಾಗೆ ತುತ್ತಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಸ್ಥಿತಿ ಗಂಭೀರವಾಗಿದೆ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪ್ಲಾಸ್ಮಾ ಥೆರಫಿ ನೀಡುವುದಾಗಿ ವೈದ್ಯರು ತಿಳಿಸಿದ್ದಾರೆ. ಸತ್ಯೇಂದ್ರ ಜೈನ್ ಅವರಿಗೆ ಜ್ವರ ಹೆಚ್ಚುತ್ತಿದೆ. ಉಸಿರಾಟದಲ್ಲಿ ತೊಂದರೆ ಉಂಟಾಗಿದೆ. ನ್ಯುಮೋನಿಯಾ ಕೂಡ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಟಲಿ ಚರಂಡಿಯಲ್ಲಿ ಪತ್ತೆಯಾಗಿತ್ತು ಕರೊನಾ:ಚೀನಾದಲ್ಲಿ ಕಳೆದ ವರ್ಷ ನವೆಂಬರ್ 17ರಂದು ಮೊದಲು ಪತ್ತೆಯಾದ ಕರೊನಾ ವೈರಸ್ ಡಿಸೆಂಬರ್ ವೇಳೆಗೆ ಇಟಲಿ ಕೆಲ ನಗರಗಳ ಚರಂಡಿ ನೀರಿನಲ್ಲಿ ಕಾಣಿಸಿಕೊಂಡಿತ್ತು ಎಂದು ಇಟಲಿಯ ರಾಷ್ಟ್ರೀಯ ತ್ಯಾಜ್ಯ ನೀರಿನ ಆಯೋಗದ ವಿಜ್ಞಾನಿಗಳು ತಿಳಿಸಿದ್ದಾರೆ. ಚೀನಾದಲ್ಲಿ ಕರೊನಾ ತೀವ್ರತೆ ಪಡೆದುಕೊಳ್ಳುವ ಮೊದಲೇ ಅಂದರೆ ಡಿಸೆಂಬರ್ 19ರಂದು ಇಟಲಿಯ ಮಿಲಾನ್ ಮತ್ತು ಟುರಿನ್ ನಗರಗಳ ಚರಂಡಿ ನೀರಿನಲ್ಲಿ ಸೋಂಕು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಅಕ್ಟೋಬರ್​ನಿಂದ ಜನವರಿವರೆಗಿನ ಚರಂಡಿ ನೀರನ್ನು ಸಂಗ್ರಹ ಮಾಡಿಟ್ಟುಕೊಳ್ಳಲಾಗಿದ್ದು, ಅದರ ಪರೀಕ್ಷೆ ಮಾಡಿರುವ ವಿಜ್ಞಾನಿಗಳು ಈ ಮಾಹಿತಿ ನೀಡಿದ್ದಾರೆ.
ದೇಶದಾದ್ಯಂತ ಒಂದೇ ದರ:ಎಲ್ಲ ರಾಜ್ಯಗಳಲ್ಲೂ ಕರೊನಾ ಪರೀಕ್ಷೆಗೆ ಒಂದೇ ಶುಲ್ಕ ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಕೆಲವು ರಾಜ್ಯಗಳಲ್ಲಿ 2,200 ರೂಪಾಯಿ ಶುಲ್ಕ ವಿಧಿಸಲಾಗುತ್ತಿದ್ದರೆ ಕೆಲ ರಾಜ್ಯಗಳಲ್ಲಿ 4,500 ರೂಪಾಯಿ ತೆಗೆದುಕೊಳ್ಳಲಾಗುತ್ತಿದೆ. ಈ ರೀತಿಯ ಅಸಮಾನತೆ ಸರಿಯಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಎಲ್ಲ ರಾಜ್ಯದಲ್ಲಿ ಗರಿಷ್ಠ ದರವನ್ನು ಕೇಂದ್ರ ಸರ್ಕಾರವೇ ನಿಗದಿ ಮಾಡಲಿ. ಗರಿಷ್ಠ ದರದೊಳಗೆ ಎಷ್ಟು ಶುಲ್ಕ ವಿಧಿಸಬೇಕು ಎನ್ನುವುದನ್ನು ರಾಜ್ಯ ಸರ್ಕಾರಗಳು ನಿರ್ಧರಿಸಲಿ ಎಂದು ಕೋರ್ಟ್ ಹೇಳಿದೆ.

ತ.ನಾಡಿನ ಕೆಲವೆಡೆ ಲಾಕ್​ಡೌನ್:ತಮಿಳುನಾಡಿನ ಚೆನ್ನೈ, ಕಾಂಚಿಪುರಂ, ತಿರುವಳ್ಳೂರ್ ಮತ್ತು ಚಂಗಲ್ಪಟ್ಟುವಿನಲ್ಲಿ ಶುಕ್ರವಾರದಿಂದ ಲಾಕ್​ಡೌನ್ ಆರಂಭವಾಗಿದೆ. 12 ದಿನಗಳ ಕಾಲ ಕಠಿಣ ಲಾಕ್​ಡೌನ್ ಜಾರಿಯಲ್ಲಿರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಚೀನಾ ಮಾರುಕಟ್ಟೆಯಲ್ಲೇ ಹೆಚ್ಚು ಕರೊನಾ ವೈರಸ್:ಚೀನಾದ ವನ್ಯಜೀವಿ ಮಾರುಕಟ್ಟೆಯಿಂದ ಆರಂಭವಾಗಿದ್ದ ಕರೊನಾ ಸಮುದ್ರ ಆಹಾರವಿರುವ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಹರಡಲಾರಂಭಿಸಿದೆ. ಬೀಜಿಂಗ್​ನ ಕ್ಸಿನ್​ಫಾಡಿ ಮಾರುಕಟ್ಟೆಯಲ್ಲಿ ಸೋಂಕು ಎರಡನೇ ಅಲೆ ಆರಂಭಿಸಿದೆ. ಸಮುದ್ರಾಹಾರವನ್ನು ಐಸ್​ನಲ್ಲಿ ಸಂಗ್ರಹಿಸಿಡುವ ಕಾರಣ ಕಡಿಮೆ ಉಷ್ಣಾಂಶವಿರುತ್ತದೆ. ಹಾಗಾಗಿ ಸೋಂಕು ವೇಗವಾಗಿ ಹರಡುತ್ತಿರಬಹುದು ಎಂದು ಚೀನಾ ವಿಜ್ಞಾನಿಗಳು ತಿಳಿಸಿದ್ದಾರೆ. ಚೀನಾದಲ್ಲಿ ಗುರುವಾರ 37 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 25 ಪ್ರಕರಣಗಳು ಬೀಜಿಂಗ್​ನದ್ದೇ ಆಗಿವೆ. ಹೊರದೇಶದಿಂದ ಬಂದಿರುವ 4 ಪ್ರಕರಣಗಳನ್ನು ಬಿಟ್ಟು ಬೇರೆಲ್ಲ ಪ್ರಕರಣಗಳು ಸ್ಥಳೀಯವಾಗಿ ಪಸರಿಸಿದ್ದಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಜಗನ್ನಾಥ ರಥೋತ್ಸವನಡೆಸಲು ಒತ್ತಾಯ:ಪುರಿ ಜಗನ್ನಾಥ ಸ್ವಾಮಿ ರಥೋತ್ಸವವನ್ನು ನಡೆಸಲು ಅನುಮತಿ ನೀಡಬೇಕೆಂದು ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮತ್ತು ಕೆಲ ಭಕ್ತರು ಸುಪ್ರೀಂ ಕೋರ್ಟ್​ಗೆ ಒತ್ತಾಯಿಸಿದ್ದಾರೆ. ರಥೋತ್ಸವ ರದ್ದು ಮಾಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಮರುಪರಿಶೀಲಿಸಬೇಕು. ಕೆಲವೇ ಸಿಬ್ಬಂದಿ ಸಮ್ಮುಖದಲ್ಲಿ ಜಾತ್ರೆ ನಡೆಸಲು ಅನುಮತಿ ನೀಡಬೇಕು. ಭಕ್ತಾದಿಗಳಿಗೆ ದೂರದರ್ಶನ ಮೂಲಕ ರಥೋತ್ಸವ ದರ್ಶನ ಮಾಡಿಸಬಹುದು ಎಂದು ಅವರು ಹೇಳಿದ್ದಾರೆ.

ಹೊಸ ಸೋಂಕು ಪ್ರಕರಣ ಏರಿಕೆ:ದೇಶದಲ್ಲಿ ಕರೊನಾ ಪ್ರತಿನಿತ್ಯ ಹೊಸ ದಾಖಲೆಗಳನ್ನು ಬರೆಯಲಾರಂಭಿಸಿದ್ದು, ಗುರುವಾರ 13,827 ಪ್ರಕರಣಗಳು ಪತ್ತೆಯಾಗಿದೆ. ಇದುವರೆಗಿನ ಏಕದಿನ ಏರಿಕೆಯಲ್ಲಿ ಇದು ದಾಖಲೆಯಾಗಿದೆ. ಏಪ್ರಿಲ್​ನಲ್ಲಿ ದಿನಕ್ಕೆ ಸರಾಸರಿ 1,500 ಪ್ರಕರಣಗಳು ಪತ್ತೆಯಾಗುತ್ತಿತ್ತು. ಇದೀಗ ಪ್ರತಿದಿನ 13 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಇಬ್ಬರು ಮೃತ:ಕರೊನಾ ಸೋಂಕಿತ ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಇಬ್ಬರು ವ್ಯಕ್ತಿಗಳು ಅಸ್ವಸ್ಥರಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ. ಘಟನೆಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಅಂತ್ಯಸಂಸ್ಕಾರದ ಸಮಯದಲ್ಲಿ ಎಲ್ಲರೂ ಪಿಪಿಇ ಕಿಟ್ ಧರಿಸಿದ್ದರು. ಮಧ್ಯಾಹ್ನದ 1.30ರ ಸಮಯಕ್ಕೆ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಬಿಸಿಲಲ್ಲಿ ಕಿಟ್ ಧರಿಸಿ ನಿಂತಿದ್ದರಿಂದ ಡಿಹೈಡ್ರೇಟ್ ಆಗಿದ್ದರು. ವೈದ್ಯಕೀಯ ಇಲಾಖೆಯವರು ಸರಿಯಾದ ಸಮಯಕ್ಕೆ ಅಂತ್ಯಸಂಸ್ಕಾರ ಮಾಡಿಲ್ಲ ಎಂದು ಮೃತರ ಕುಟುಂಬಸ್ಥರು ದೂರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
