ನವದೆಹಲಿ:ದೇಶಾದ್ಯಂತ ಮತ್ತೊಂದು ಸುತ್ತಿನ ಲಾಕ್​ಡೌನ್​ ಘೋಷಣೆಯಾಗಿದೆ. ಇದು ರೆಡ್​ ಜೋನ್​ನಲ್ಲಿ ಕಟ್ಟುನಿಟ್ಟಾಗಿ ಜಾರಿಯಾದರೆ, ಉಳಿದ ವಲಯಗಳಲ್ಲಿ ಕೊಂಚಮಟ್ಟಿಗಿನ ಸಡಿಲಿಕೆ ನೀಡಲಾಗಿದೆ. ಆದರೆ, ಶೈಕ್ಷಣಿಕ ಚಟುವಟಿಕೆಗಳನ್ನಂತೂ ಸದ್ಯಕ್ಕೆ ಎಲ್ಲಿಯೂ ನಡೆಸೋಕೆ ಆಗಲ್ಲ ಎನ್ನುವುದಂತೂ ಸತ್ಯ.
ಪದವಿ ಹಾಗೂ ಸ್ನಾತಕೋತ್ತರ ಕಾಲೇಜು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವಂತೆ ಶೈಕ್ಷಣಿಕ ವೇಳಾಪಟ್ಟಿಯನ್ನು ಈಗಾಗಲೇ ಯುಜಿಸಿ ಬಿಡುಗಡೆ ಮಾಡಿದ್ದು, ಜುಲೈನಲ್ಲಿ ಪರೀಕ್ಷೆ ನಡೆಸುವಂತೆ ಸೂಚಿಸಿದೆ. ಆಗಸ್ಟ್​ನಲ್ಲಿ ಪ್ರವೇಶಪ್ರಕ್ರಿಯೆಗಳನ್ನು ಶುರು ಮಾಡಿ, ಸೆಪ್ಟೆಂಬರ್​ನಲ್ಲಿ ಹೊಸ ತರಗತಿಗಳನ್ನು ಆರಂಭಿಸುವಂತೆ ಸೂಚಿಸಿದೆ.
ಈ ನಡುವೆ, ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿಯೇ ಪರೀಕ್ಷೆ ನಡೆಸಲು ದೆಹಲಿಯ ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳು ನಿರ್ಧರಿಸಿವೆ. ಈ ನಿರ್ಧಾರವನ್ನು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಹಾಗೂ ಡಿಸಿಎಂ ಮನೀಷ್​ ಸಿಸೋಡಿಯಾ ಅವರಿಗೆ ತಿಳಿಸಿವೆ.ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿ ಬಗ್ಗೆ ಪರಾಮರ್ಶೆ ನಡೆಸಲು ಕರೆಯಲಾಗಿದ್ದ ಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ನಷ್ಟವಾಗಿವೆ. ಇದನ್ನು ಸರಿದೂಗಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಅಲ್ಲದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿರುವುದರಿಂದ ಆನ್​ಲೈನ್​ ಪರೀಕ್ಷೆ ನಡೆಸಲಾಗುವುದು ಎಂದು ವಿಶ್ವವಿದ್ಯಾಲಯಗಳ ಕುಲಪತಿಗಳು ಸರ್ಕಾರಕ್ಕೆ ತಿಳಿಸಿದ್ದಾರೆ.
ಕಾಲೇಜುಗಳಲ್ಲಿ ನೂತನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪ್ರಕ್ರಿಯೆ, ಬಾಕಿವುಳಿದಿರುವ ಪರೀಕ್ಷೆಗಳನ್ನು ನಡೆಸುವುದು ಹಾಗೂ ಆ ತರಗತಿಗಳ ಪುನರಾರಂಭ ಮತ್ತು ಈಗಾಗಲೇ ಅಂತಿಮ ವರ್ಷದಲ್ಲಿದ್ದು, ಕೆಲ ಕಂಪನಿಗಳಿಂದ ಉದ್ಯೋಗಾವಕಾಶ ಪಡೆದಿರುವ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಚರ್ಚೆ ನಡೆಸಲಾಗಿದೆ. ಏಕೆಂದರೆ, ಪರೀಕ್ಷೆ ಮುಗಿಸಿ ಅಂಕಪಟ್ಟಿ, ಪ್ರಮಾಣ ಪತ್ರ ನೀಡದಿದ್ದರೆ ಅವರು ಕೆಲಸ ಕಳೆದುಕೊಳ್ಳುವ ಆತಂಕವಿದೆ. ಹೀಗಾಗಿ ಅಂಥವರಿಗೆ ಪ್ರಾತಿನಿಧಿಕ ಪದವಿ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ಇಂಥ ಕ್ರಮ ರಾಜ್ಯದ ಕಾಲೇಜುಗಳಲ್ಲೂ ಜಾರಿಯಾಗುತ್ತಾ ಎಂದು ಕಾದು ನೋಡಬೇಕಿದೆ.
ನಿಷ್ಪ್ರಯೋಜಕವೆಂದು ಗುಜರಿ ಸೇರಿದ್ದ ಔಷಧ ಕರೊನಾಗೆ ರಾಮಬಾಣ? ಬಳಸಿ ಎಂದು ಭಾರತೀಯ ತಜ್ಞರು ಹೇಳುತ್ತಿರೋದೇಕೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + twenty =
Remember me
