ನೋಯ್ಡಾ:21 ವರ್ಷದ ವಿದ್ಯಾರ್ಥಿನಿಯನ್ನು ಕ್ಯಾಂಪಸ್‌ನಲ್ಲೇ ಸಹಪಾಠಿಯೊಬ್ಬ ಗುಂಡಿಕ್ಕಿ ಕೊಂದು, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಕೊಂಡಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಶಿವನಾಡರ್ ವಿಶ್ವವಿದ್ಯಾನಿಲಯದ ಕ್ಯಾಂಪಸ್​ನಲ್ಲಿ ಈ ಘಟನೆ ನಡೆದಿದ್ದು,ಕಲಾವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದ ಅನುಜ್​ ಸಿಂಗ್​ ಹಾಗೂ ನೇಹಾ ಚೌರಾಸಿಯಾ ಮೃತ ದುರ್ದೈವಿಗಳಾಗಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಸಿಎಂ ಆಯ್ಕೆ ಹಿನ್ನೆಲೆ ಸಂಭ್ರಮಾಚರಣೆ
ಕೊಲೆಯ ಆಘಾತಕಾರಿ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ದೃಶ್ಯದಲ್ಲಿ ಯುವಕ ಮತ್ತು ಯುವತಿ ಕ್ಯಾಂಪಸ್‌ನ ಡೈನಿಂಗ್ ಹಾಲ್‌ನ ಹೊರಗೆ ಪರಸ್ಪರ ಮಾತನಾಡುತ್ತಿದ್ದಾಗ, ಯುವಕ ಬ್ಯಾಗ್‌ನಿಂದ ಪಿಸ್ತೂಲ್ ಅನ್ನು ಹೊರತೆಗೆದು ಅವಳ ಮೇಲೆ ಗುಂಡು ಹಾರಿಸುತ್ತಾನೆ. ಅವಳು ನಂತರ ಕುಸಿದು ಬೀಳುವ ಮೂಲಕ ಅವ​ನನ್ನು ತಡೆಯಲು ಪ್ರಯತ್ನಿಸುತ್ತಾಳೆ. ನಂತರ ಯುವಕ ಮತ್ತೆ, ಅಕೆಯ ಎದೆ ಮತ್ತು ಹೊಟ್ಟೆಗೆ ಕನಿಷ್ಠ ಎರಡು ಬಾರಿ ಗುಂಡು ಹಾರಿಸಿ ತಕ್ಷಣವೇ ಸ್ಥಳದಿಂದ ಹೊರಟು ಹೋಗುತ್ತಾನೆ.
https://twitter.com/pminu/status/1659197654323326977?ref_src=twsrc%5Etfw%7Ctwcamp%5Etweetembed%7Ctwterm%5E1659197654323326977%7Ctwgr%5E047b37fd8bf66bdfaa583ff289ef186d5909c722%7Ctwcon%5Es1_&ref_url=https%3A%2F%2Fwww.timesnownews.com%2Fmirror-now%2Fcrime%2Fchilling-video-of-student-killing-female-classmate-at-greater-noida-university-surfaces-article-100344733
ಪ್ರತ್ಯಕ್ಷದರ್ಶಿಗಳ ಪ್ರಕಾರ, ಅನುಜ್ ಮತ್ತು ನೇಹಾ ಡೈನಿಂಗ್ ಹಾಲ್‌ನ ಹೊರಗೆ ಸಂಭಾಷಣೆ ನಡೆಸುತ್ತಿರುವ ವೇಳೆ ಅವರು ಪರಸ್ಪರ ತಬ್ಬಿಕೊಂಡರು. ಈ ವೇಳೆ ಏನೋ ಮಾತಿನ ಚಕಮಕಿ ಉಂಟಾಗಿ ಆತ ನೇಹಾಳನ್ನು ಕೊಂದು, ತನ್ನ ಹಾಸ್ಟೆಲ್ ಕೋಣೆಯೊಳಗೆ ಹೋಗಿ ತಾನೂ ಗುಂಡು ಹಾರಿಸಿಕೊಂಡಿದ್ದಾನೆ ಎಂದಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 18 =
Remember me
