ಮುಂಬೈ:ಇಂದು ಕರ್ನಾಟಕದಲ್ಲಿ ಬಹಳಷ್ಟು ಜನರ ಮೊಬೈಲ್​​ಫೋನ್​ಗೆ ಒಂದು ತುರ್ತು ಅಲರ್ಟ್ ಮೆಸೇಜ್ ಬಂದಿದೆ. ಇದೀಗ ಇನ್ನೊಂದು ಹೈ ಅಲರ್ಟ್ ಘೋಷಣೆ ಆಗಿದೆ. ಅದೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ.. ವಿದ್ಯಾರ್ಥಿಗಳ ಮೇಲೆ ಅಪರಿಚಿತರು ಅಲರ್ಜಿ ಉಂಟು ಮಾಡುವಂಥ ವಿಚಿತ್ರ ದ್ರವವೊಂದನ್ನು ಸಿಂಪಡಣೆ ಮಾಡಿರುವುದರಿಂದ ಈ ಹೈ ಅಲರ್ಟ್​ ನೀಡಲಾಗಿದೆ.
ಅಂದಹಾಗೆ ಮಹಾರಾಷ್ಟ್ರದ ಪುಣೆ ಸಮೀಪದ ಅಂಬೆಗಾಂವ್​​ನ ಗಾಯ್ಮುಖ್​ನಿಂದ ಭೋರ್ವಾಡಿ ರಸ್ತೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಕೆಲವು ಅಪರಿಚಿತರು ಅಲರ್ಜಿ ಉಂಟು ಮಾಡುವಂಥ ವಿಚಿತ್ರ ದ್ರವವೊಂದನ್ನು ಸ್ಪ್ರೇ ಮಾಡಿದ್ದಾರೆ. ವಾರಕ್ಕೆರಡು ಸಲ ಎಂಬಂತೆ ಇಂಥ ಘಟನೆಗಳು ನಡೆದಿವೆ.
ಇದನ್ನೂ ಓದಿ:ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?
ಇಂಥ ದ್ರವ ಮೈಮೇಲೆ ಬೀಳುತ್ತಿದ್ದಂತೆ ತುರಿಕೆ, ದದ್ದು ಉಂಟಾಗಿ ಅಲರ್ಜಿಯಂಥ ಲಕ್ಷಣಗಳು ಗೋಚರಿಸಿವೆ. ಇದರಿಂದ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಅವರ ಪಾಲಕರೂ ಆತಂಕಗೊಂಡಿದ್ದಾರೆ. ಈ ಸಂಬಂಧ ಮಂಚಾರ್ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದಾರೆ.
ಪೊಲೀಸರು ಇಂಥ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ತನಿಖೆ ಆರಂಭಿಸಿದ್ದಾರೆ. ಸದ್ಯ ಮಕ್ಕಳೊಂದಿಗೆ ಪಾಲಕರೂ ಶಿಕ್ಷಣ ಸಂಸ್ಥೆಗಳ ವರೆಗೆ ಹೋಗಿ ಬರಲಾರಂಭಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಅಪರಿಚಿತರು ಈ ರೀತಿ ಮಾಡುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಸದ್ಯ ಮಕ್ಕಳು ಗುಂಪಾಗಿ ಶಾಲೆಗೆ ತೆರಳುವಂತೆ ಪೊಲೀಸರು ಕಿವಿಮಾತು ಹೇಳಿದ್ದು, ಹೈ ಅಲರ್ಟ್​ನಲ್ಲಿ ಇರುವಂತೆಯೂ ತಿಳಿಸಿದ್ದಾರೆ.
ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ವಿವಾದ; ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ

ಇದು ನಿಜವಾದ ‘ಬೆಡ್​ರೂಮ್’!; ಬೆಂಗಳೂರಿನಲ್ಲಿದು ಎಲ್ಲಿದೆ? ಸುದ್ದಿ ಆಗುತ್ತಿರುವುದಾದರೂ ಯಾಕೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen + eight =
Remember me
