ನವದೆಹಲಿ:ಗೃಹ ಸಚಿವಾಲಯ ಅನ್​ಲಾಕ್ 4.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಶಾಲೆ ಮತ್ತು ಕಾಲೇಜುಗಳ ಪುನಾರಂಭದ ಬಗ್ಗೆ ಕೆಲವು ಸುದ್ದಿಗಳಿವೆ.ಬಿಡುಗಡೆಯಾದ ಅಧಿಕೃತ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 21 ರ ನಂತರ ವಿಶೇಷ ಸಂದರ್ಭಗಳಿಗಾಗಿ ಮಾತ್ರ, ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಶಾಲೆಗಳನ್ನು ತೆರೆಯಬಹುದು. ಆದರೆ ಅನ್ಲಾಕ್ 4.0 ಮಾರ್ಗಸೂಚಿಗಳ ಪ್ರಕಾರ, ಸೆಪ್ಟೆಂಬರ್ 30 ರವರೆಗೆ ಶಾಲೆಗಳು ಮತ್ತು ಕಾಲೇಜುಗಳಿಗೆ ನಿಯಮಿತ ತರಗತಿಗಳನ್ನು ನಡೆಸುವಂತಿಲ್ಲ.
ಇದನ್ನೂ ಓದಿ:4 ತಿಂಗಳಲ್ಲಿ 61 ಗರ್ಭಿಣಿಯರು, 877 ಶಿಶುಗಳ ಮರಣ…; ಆತಂಕಕಾರಿ ವರದಿ
ಸೆಪ್ಟೆಂಬರ್ 21 ರ ನಂತರ ಶಾಲೆಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ತೆರೆಯಬಹುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ 50 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಆನ್‌ಲೈನ್ ಬೋಧನೆ / ಟೆಲಿ-ಕೌನ್ಸೆಲಿಂಗ್ ಕೆಲಸಕ್ಕಾಗಿ ಶಾಲೆಗೆ ಕರೆಯಬಹುದು. ಅಲ್ಲದೆ, 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು, ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ಸ್ವಯಂಪ್ರೇರಿತವಾಗಿ ಶಾಲೆಗಳಿಗೆ ಹಾಜರಾಗಬಹುದು.
ಇದನ್ನೂ ಓದಿ:ಪುನರಾರಂಭದವರೆಗೆ ಶಾಲೆಗಳು ವಾರ್ಷಿಕ, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ; ದೆಹಲಿ ಹೈಕೋರ್ಟ್​ ಮಹತ್ವದ ಆದೇಶ
ಕಾಲೇಜುಗಳಿಗೆ ಸಂಬಂಧಿಸಿದಂತೆ, ಪ್ರಯೋಗಾಲಯ ಮತ್ತು ಪ್ರಾಯೋಗಿಕ ಕೆಲಸದ ಅಗತ್ಯವಿರುವ ತಾಂತ್ರಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾತ್ರ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ. ಆದಾಗ್ಯೂ, ಕಂಟೇನ್ಮೆಂಟ್ ವಲಯ​​ಗಳಲ್ಲಿ ಸೆಪ್ಟೆಂಬರ್ 30 ರವರೆಗೆ ಕಟ್ಟುನಿಟ್ಟಾದ ಲಾಕ್‌ಡೌನ್ ಮುಂದುವರಿಯುತ್ತದೆ.
ಇನ್ನೂ ಆಸ್ಪತ್ರೆಯಲ್ಲೇ ಇರುವ ಗೃಹ ಸಚಿವ ಅಮಿತ್​ ಷಾ ಆರೋಗ್ಯ ಸ್ಥಿತಿ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − three =
Remember me
