ನವದೆಹಲಿ:ಕರೊನಾ ಸೋಂಕು ಹರಡದಂತೆ ತಡೆಯಲು ಲಾಕ್​ಡೌನ್​ ವಿಧಿಸಿದ ಬಳಿಕ ಹಂತ ಹಂತವಾಗಿ ಅನ್​ಲಾಕ್ ಮಾಡಲಾಗುತ್ತಿದ್ದು 5ನೇ ಹಂತದ ಅನ್​ಲಾಕ್​ ಅಕ್ಟೋಬರ್ 1ರಿಂದ ಶುರುವಾಗಲಿದೆ. ನಾಲ್ಕನೇ ಹಂತದ ಅನ್​ಲಾಕ್ ಈ ತಿಂಗಳು ಚಾಲ್ತಿಯಲ್ಲಿದೆ. ಮುಂದಿನ ತಿಂಗಳ ಆರಂಭದಿಂದ ಐದನೆ ಹಂತದ ಅನ್​ಲಾಕ್ ಶುರುವಾಗಲಿದ್ದು, ವಿವಿಧ ರೀತಿಯ ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧ ಸಡಿಲಗೊಳಿಸುವ ನಿರೀಕ್ಷೆ ಇದೆ.
ಆರ್ಥಿಕ ಚಟುವಟಿಕೆಗಳ ಪೈಕಿ ಮಾಲ್​, ಸಲೂನ್​, ರೆಸ್ಟೋರೆಂಟ್​, ಜಿಮ್​ಗಳ ಮೇಲಿನ ನಿರ್ಬಂಧ ಈಗಾಗಲೇ ಸಡಿಲಿಸಲಾಗಿದೆ. ಆದರೂ, ಕೋವಿಡ್ 19 ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದೆ. ಇದೇ ನಿರ್ಬಂಧದೊಂದಿಗೆ ಇನ್ನಷ್ಟು ವಾಣಿಜ್ಯ, ಆರ್ಥಿಕ ಚಟುವಟಿಕೆಗಳನ್ನು ಮಾಡುವುದಕ್ಕೆ ಕೇಂದ್ರ ಅನುಮತಿ ನೀಡಲಿದೆ. ಇದರಲ್ಲಿ ಸಿನಿಮಾ ಹಾಲ್​ಗಳು, ಥಿಯೆಟರ್​ಗಳು ಮಲ್ಟಿಪ್ಲೆಕ್ಸ್​ಗಳ ಚಟುವಟಿಕೆಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಕೃಷಿಕರಿಗೆ ಅನ್ಯಾಯ ಆಗಲು ಬಿಡಲ್ಲ, ರೈತ ಮುಖಂಡರೇ ಚರ್ಚೆಗೆ ಬನ್ನಿ: ಸಿಎಂ ಯಡಿಯೂರಪ್ಪ
ಇದಕ್ಕೂ ಮೊದಲು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮನವಿ ಮೇರೆಗೆ ಕೇಂದ್ರ ಸರ್ಕಾರ ಸೆ.21ರಿಂದ ಬಯಲು ರಂಗ ಮಂದಿರಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಹಾಲ್​ಗಳು, ಥಿಯೆಟರ್​ಗಳು ಅಕ್ಟೋಬರ್ 1ರಿಂದ ಷೋ ತೋರಿಸಲು ಸಜ್ಜಾಗುತ್ತಿವೆ. ಪ್ರವಾಸೋದ್ಯಮ ಕ್ಷೇತ್ರದ ಚಟುವಟಿಕೆಗೂ ಅವಕಾಶ ನೀಡುವ ಸಾಧ್ಯತೆ ಇದೆ. ಶಾಲಾ ಕಾಲೇಜುಗಳ ಪುನಾರಂಭವಾಗಬಹುದೆಂಬ ನಿರೀಕ್ಷೆ ಇದೆ. ಆದರೆ ಕೋವಿಡ್ 19 ನಿಯಮ ಪಾಲಿಸಬೇಕಾದ್ದು ಕಡ್ಡಾಯ. (ಏಜೆನ್ಸೀಸ್)
ಕೋವಿಡ್ 19 ಕಾರಣಕ್ಕೆ ಸಿವಿಲ್ ಸರ್ವೀಸ್ ಎಕ್ಸಾಂ ಮುಂದೂಡಲಾಗದು: ಸುಪ್ರೀಂಗೆ ಯುಪಿಎಸ್​ಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
