ಮುಂಬೈ:ಇತ್ತೀಚೆಗಷ್ಟೇ ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದ ಗೋವಾಫೆಸ್ಟ್​- 2024 ರಲ್ಲಿ ಮಾತನಾಡಿದ ಔಟ್​ರಿಚ್​ ನೇಪಾಳ ಸಂಸ್ಥೆಯ ಸಂಸ್ಥಾಪಕ ಮತ್ತು ನೇಪಾಳದ ಜಾಹೀರಾತು ಸಂಘದ ಮೊದಲ ಉಪಾಧ್ಯಕ್ಷ ಉಜಯ್ ಶಖ್ಯ, ನೇಪಾಳದಲ್ಲಿ ಬೆಳೆಯುತ್ತಿರುವ ಉದ್ಯಮ ಕ್ಷೇತ್ರ ಮತ್ತು ಬಂಡವಾಳ ಹೂಡಲು ಇರುವ ವಿಫುಲ ಅವಕಾಶವನ್ನು ವಿವರಿಸುವ ಮೂಲಕ ಉದ್ಯಮಗಳನ್ನು ಸ್ಥಾಪಿಸಲು ಮುಕ್ತ ಆಹ್ವಾನವನ್ನು ನೀಡಿದರು.
ಗೋವಾಫೆಸ್ಟ್-2024 ಈವೆಂಟ್​ ಮೇ 29, 30 ಮತ್ತು 31 ರಂದು ಮುಂಬೈನ ಪೊವೈನಲ್ಲಿರುವ ವೆಸ್ಟಿನ್ ಹೋಟೆಲ್‌ನಲ್ಲಿ ನಡೆಯಿತು. ಈ ಈವೆಂಟ್ ತನ್ನ 17ನೇ ಆವೃತ್ತಿಯಲ್ಲಿ ‘ಹೊಂದಾಣಿಕೆಯ ಯುಗ’ ಎಂಬ ಥೀಮ್​ನಲ್ಲಿ ಮೂಡಿಬಂತು. ಈ ವೇಳೆ ಉಜಯ್ ಶಖ್ಯ ಅವರು “ಅನ್‌ಲಾಕಿಂಗ್ ಮಾರ್ಕೆಟ್ ಪೊಟೆನ್ಶಿಯಲ್: ಓಪನ್​ ಯುವರ್​ ಐಸ್​ ಅಂಡ್​ ಹಾರ್ಟ್​ ಟು ನೇಪಾಳ” ಕುರಿತ ವಿಷಯವನ್ನು ಪ್ರಸ್ತುತ ಪಡಿಸಿದರು.
ನಿಮಗೆ ನೇಪಾಳ ಎಂದರೆ ಏನು ಗೊತ್ತು? ಎಂಬ ಪ್ರಶ್ನೆಯ ಮೂಲಕ ತಮ್ಮ ಮಾತು ಆರಂಭಿಸಿದ ಶಖ್ಯ, ಹಿಂದಿನ ನೇಪಾಳಕ್ಕೂ ಮತ್ತು ಈಗಿನ ನೇಪಾಳಕ್ಕೂ ಇರುವ ವ್ಯತ್ಯಾಸವನ್ನು ಒತ್ತಿಹೇಳಿದರು. ನೇಪಾಳ ಅಂದರೆ ಹಿಮಾಲಯ, ಮೌಂಟ್ ಎವರೆಸ್ಟ್, ಭಗವಾನ್ ಬುದ್ಧ, ಪಶುಪತಿನಾಥ ದೇವಾಲಯ ಮತ್ತು ಬಾಲಿವುಡ್ ನಟಿ ಮನಿಶಾ ಕೊಯಿರಾಲಾ ಮುಂತಾದ ಸಾಮಾನ್ಯ ವಿಚಾರಗಳು ಕಣ್ಣಮುಂದೆ ಬರುತ್ತವೆ. ಆದರೆ, ಆಧುನಿಕ ನೇಪಾಳ ಇವುಗಳಿಗಿಂತಲೂ ಹೆಚ್ಚು ಭಿನ್ನವಾಗಿದೆ ಎಂದು ಒತ್ತಿ ಹೇಳಿದರು. ಇಂದಿನ ನೇಪಾಳದ ಗುರುತು ವೇಗವಾಗಿ ವಿಕಸನಗೊಳ್ಳುತ್ತಿದೆ. ಸಂಪ್ರದಾಯ ಮತ್ತು ಆಧುನಿಕತೆಯನ್ನು ಸಂಯೋಜಿಸುತ್ತದೆ. ಇದು ವೈವಿಧ್ಯಮಯ ಸಂಸ್ಕೃತಿಗಳು, ಭಾಷೆಗಳು ಮತ್ತು ಜನಾಂಗೀಯತೆಗಳನ್ನು ಹೊಂದಿದೆ. ಪರ್ವತಗಳ ನಾಡು ಬೌದ್ಧಧರ್ಮದಿಂದ ಪ್ರಭಾವಿತವಾಗಿದೆ. ಆದರೆ, ಅದರ ಬಯಲು ಪ್ರದೇಶಗಳು ಭಾರತೀಯ ಹಿಂದೂ ಧರ್ಮದೊಂದಿಗೆ ಸಾಂಸ್ಕೃತಿಕ ಸಂಬಂಧಗಳನ್ನು ಹಂಚಿಕೊಳ್ಳುತ್ತವೆ. ಕಠ್ಮಂಡು ಮತ್ತು ಪೋಖರಾದಂತಹ ನಗರಗಳು ಬೌದ್ಧ ಮತ್ತು ಹಿಂದೂ ಸಂಪ್ರದಾಯಗಳನ್ನು ಸಾಮರಸ್ಯದಿಂದ ಸಂಯೋಜಿಸುತ್ತವೆ ಎಂದು ಹೇಳಿದರು.
ಇಂದಿನ ನೇಪಾಳವು ರೋಮಾಂಚಕ ಹಾಗೂ ವೈವಿಧ್ಯಮಯ ದೇಶವಾಗಿದೆ. ಫ್ಯಾಶನ್ ಡಿಸೈನರ್ ಪ್ರಬಲ್ ಗುರುಂಗ್, ಮಾಸ್ಟರ್‌ಚೆಫ್ ಯುಕೆ ವಿಜೇತ ಸಂತೋಷ್ ಶಾ, ಇತ್ತೀಚೆಗೆ ಕಾನ್ಸ್​ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನಡೆದ ನಟಿ ಸುರಕ್ಷ್ಯಾ ಪಂತ್ ಮುಂತಾದ ಪ್ರಸಿದ್ಧ ವ್ಯಕ್ತಿಗಳನ್ನು ನೇಪಾಳ ಹೊಂದಿದೆ. ಇಂದಿನ ನೇಪಾಳವು ಅಪಾರ ಮಾರುಕಟ್ಟೆ ಸಾಮರ್ಥ್ಯದೊಂದಿಗೆ ತನ್ನ ಬೆಳವಣಿಗೆಯ ಭರವಸೆಯ ಲಕ್ಷಣಗಳನ್ನು ಜಗತ್ತಿಗೆ ತೋರಿಸುತ್ತಿದೆ. 30 ಮಿಲಿಯನ್ ಜನಸಂಖ್ಯೆಯಲ್ಲಿ, ಶೇ. 72 ರಷ್ಟು ದುಡಿಯುವ ವಯಸ್ಸಿನವರಾಗಿದ್ದಾರೆ. ಇದು ಮಧ್ಯಮ ವರ್ಗದ ಆದಾಯದಲ್ಲಿ ಹೆಚ್ಚಳವನ್ನು ಸೂಚಿಸುತ್ತದೆ ಮತ್ತು ಅವರ ಕುಟುಂಬಗಳ ಕಲ್ಯಾಣದ ಮೇಲೆ ಕೇಂದ್ರೀಕರಿಸಿದೆ. ಪ್ರಮುಖ ಕಂಪನಿಗಳಾದ ಹ್ಯುಂಡೈ, ಸ್ಯಾಮ್‌ಸಂಗ್ ಮತ್ತು ಭಾರತದ ಎಲ್ಲಾ ಪ್ರಮುಖ ಎಫ್‌ಎಂಸಿಜಿಗಳು ನೇಪಾಳದಲ್ಲಿ ಹೂಡಿಕೆ ಮಾಡುತ್ತಿವೆ. ಈ ಅವಕಾಶವನ್ನು ನೋಡಿದ ಮೇಲೆ ಅನೇಕ ಅನಿವಾಸಿ-ನೇಪಾಳಿಗಳು (NRNs) ತಮ್ಮ ತಾಯ್ನಾಡಿಗೆ ಮರಳುತ್ತಿದ್ದಾರೆ ಎಂದು ನೇಪಾಳವನ್ನು ಕೊಂಡಾಡಿದರು.
ಮಾರ್ಕೆಟಿಂಗ್ ಮತ್ತು ಬ್ರ್ಯಾಂಡ್ ದೃಷ್ಟಿಕೋನದಿಂದ ನೇಪಾಳಿ ಯುವಕರು ಪ್ರಮುಖ ಗುರಿಯಾಗಿದ್ದಾರೆ. ನೇಪಾಳದ ಜನಸಂಖ್ಯೆಯ ಸುಮಾರು ನಾಲ್ಕನೇ ಮೂರು ಭಾಗದಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇಂದು ಹಲವಾರು ನೇಪಾಳಿ ಬ್ರ್ಯಾಂಡ್‌ಗಳ ಯಶಸ್ಸಿಗೆ ಯುವಕರ ಸರಿಯಾದ ಸ್ಥಾನೀಕರಣ ಮತ್ತು ಯುವಕರ ಕಡೆಗಿನ ಮಾರ್ಕೆಟಿಂಗ್ ಕಾರಣ ಎಂದರು. ನೇಪಾಳಿ ಬಿಯರ್ ಬ್ರಾಂಡ್ ಅರ್ನಾದಂತಹ ಹಲವಾರು ಉದಾಹರಣೆಗಳನ್ನು ಶಖ್ಯ ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು. ಯುವಜನರನ್ನು ಗುರಿಯಾಗಿಸಿಕೊಂಡಿದ್ದ ಕಾರ್ಲ್ಸ್‌ಬರ್ಗ್‌ನಂತಹ ವಿದೇಶಿ ಬ್ರ್ಯಾಂಡ್‌ಗಳು ಪ್ರಾಬಲ್ಯ ಹೊಂದಿರುವ ಮಾರುಕಟ್ಟೆಯನ್ನು ಅರ್ನಾ ಬ್ರ್ಯಾಂಡ್​ ಸಂಪೂರ್ಣ ಅಡ್ಡಿಪಡಿಸಿತು ಎಂದರು.
ಈ ಯಶಸ್ಸಿನ ಕತೆಗಳಿಂದ ಕಲಿತು, ಜಾಗತಿಕ ಮತ್ತು ದೇಶೀಯ ಹಲವಾರು ಬ್ರ್ಯಾಂಡ್‌ಗಳು ತಮ್ಮದೇ ಆದ ಪ್ರಚಾರಕ್ಕಾಗಿ ವಿಶೇಷ ಗಮನ ಹರಿಸುತ್ತಿವೆ. ನಾನು ಬಳಸಿದ ಕೆಲವು ಅತ್ಯಂತ ಯಶಸ್ವಿ ಕಾರ್ಯತಂತ್ರಗಳೆಂದರೆ, ನೇಪಾಳೀಕರಣವನ್ನು ಸಾಧಿಸುವುದು, ನೇಪಾಳಿ ನಟರನ್ನು ಬಳಸುವುದು, ಪ್ರಸ್ತುತ ಕತೆಗಳನ್ನು ರಚಿಸುವುದು ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಬಳಸುವುದು. ಮೌಂಟೇನ್ ಡ್ಯೂ, ಸೆಂಟರ್‌ಫ್ರೂಟ್, ಕೋಕಾ-ಕೋಲಾ, ಎನ್‌ಸೆಲ್ ಮತ್ತು ಪೆಪ್ಸಿಯಂತಹ ಬ್ರ್ಯಾಂಡ್‌ಗಳು ಸಹ ಈ ಕಾರ್ಯತಂತ್ರಗಳಿಂದ ಲಾಭ ಪಡೆದಿವೆ ಎಂದು ಶಖ್ಯ ತಿಳಿಸಿದರು.
ಕೊನೆಯಲ್ಲಿ ನಿಮ್ಮೆಲ್ಲರಿಗೂ ನೇಪಾಳ ಎಂದರೆ ಈಗ ಏನು ಗೊತ್ತಾಯ್ತು? ಎಂದು ಸಭಿಕರನ್ನು ಕೇಳುವ ಮೂಲಕ ಶಖ್ಯ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು. ಈ ಮಾಸ್ಟರ್‌ಕ್ಲಾಸ್ ನೇಪಾಳದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆ ಸಾಮರ್ಥ್ಯದ ಬಗ್ಗೆ ತಿಳುವಳಿಕೆ ನೀಡುವಲ್ಲಿ ಹೆಚ್ಚು ಪರಿಣಾಮಕಾರಿಯಾಯಿತು.
ಟಿ20 ವಿಶ್ವಕಪ್​ ಗೆಲ್ಲಬೇಕಾದ್ರೆ ರೋಹಿತ್ ಮೊದಲು ಈ ಕೆಲ್ಸ ಮಾಡ್ಬೇಕು: ಮಹತ್ವದ ಸಲಹೆ ಕೊಟ್ಟ ಇರ್ಫಾನ್​ ಪಠಾಣ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
