ನವದೆಹಲಿ:20 ವರ್ಷದ ಯುವತಿಯೊಬ್ಬಳು ನವಜಾತ ಶಿಶುವಿಗೆ ಜನ್ಮನೀಡಿ, ನಂತರ ಆ ಮಗುವನ್ನು ಶೌಚಾಲಯದಿಂದ ಹೊರಗೆ ಎಸೆದಿರುವಂತಹ ಅಮಾನುಷ ಘಟನೆಯೊಂದು ದೆಹಲಿಯ ಕೊಂಡ್ಲಿ ಎಂಬಲ್ಲಿ ನಡೆದಿದೆ. ಇದೀಗ ತಪ್ಪಿತಸ್ಥ ಯುವತಿಯನ್ನು ಪೊಲೀಸರು ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಸದ್ಯ ಪ್ರಕರಣದ ದಾಖಲಿಸಿಕೊಂಡು ವಿಚಾರಣೆ ನಡೆಸಿರುವ ಪೊಲೀಸರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಪೂರ್ವ ದೆಹಲಿಯ ಕೊಂಡ್ಲಿಯಲ್ಲಿರುವ ಜೈ ಅಂಬೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಳು. ಯುವತಿ ಮಗುವಿಗೆ ಜನ್ಮ ನೀಡಿದ ಸ್ವಲ್ಪ ಸಮಯದಲ್ಲೇ ಶೌಚಾಲಯದ ಕಿಟಕಿಯಿಂದ ಗಂಡು ಮಗುವನ್ನು ಹೊರಗೆ ಎಸೆದಿದ್ದಾಳೆ.
ಅಪಾರ್ಟ್​ಮೆಂಟ್​ ವಾಸಿಗಳಿಗೆ ವಠಾರದಲ್ಲಿ ನವಜಾತ ಶಿಶುವಿನ ದೇಹ ಹಾಗೂ ರಕ್ತದ ಕಲೆಗಳು ಕಂಡಿವೆ. ಕೂಡಲೇ ನಿವಾಸಿಗಳು ಯುವತಿಯ ಮನೆಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ ಕಸದ ಬುಟ್ಟಿಯಲ್ಲಿ ರಕ್ತದ ಕಲೆಯ ಕುರುಹುಗಳು ಇರುವುದು ಪತ್ತೆಯಾಗಿದೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು, ತಪಾಸಣೆ ನಡೆಸಿ ಯುವತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಗುವಿನ ಜನ್ಮ ನೀಡಿರುವ ಯುವತಿ ಅವಿವಾಹಿತಳಾಗಿದ್ದಳು. ಹೀಗಾಗಿ ಮಗುವನ್ನು ಸಾಯಿಸಲು ಮುಂದಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರ ವಿಚಾರಣೆಯ ನಂತರ ಯುವತಿ ಗರ್ಭದರಿಸಲು ಯಾರು ಕಾರಣ ಎಂಬುದು ಬಹಿರಂಗವಾಗಬೇಕಿದೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
