ನವದೆಹಲಿ:ಕರೊನಾ ಸೋಂಕು ವ್ಯಾಪಿಸುತ್ತಿರುವ ನಡುವೆಯೇ ಈಗ ಹೆಚ್ಚಾಗಿ ಕೇಳಿಬರುತ್ತಿರುವ ಮತ್ತೊಂದು ವಿಷಯವೆಂದರೆ ಸಿಟಿ ಸ್ಕ್ಯಾನ್​ನದ್ದು. ಕರೊನಾ ಸೋಂಕು ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಸಿಟಿ ಸ್ಕ್ಯಾನ್​ ಕೂಡ ವೈದ್ಯರು ಸಲಹೆ ಮಾಡುತ್ತಿದ್ದಾರೆ. ಆದರೆ ಅದನ್ನು ಅತಿ ಅಗತ್ಯ ಎನಿಸದ ಹೊರತು ಮಾಡಿಸಿಕೊಳ್ಳುವುದು ಒಳಿತಲ್ಲ. ಹಾಗೆ ಪದೇಪದೆ ಸಿಟಿ ಸ್ಯ್ಕಾನ್​ಗೆ ಒಳಗಾದರೆ ಮತ್ತೊಂದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​ (ಎಐಐಎಂಎಸ್​) ನಿರ್ದೇಶಕ ಡಾ.ರಣ್​ದೀಪ್ ಗುಲೇರಿಯಾ ಇಂಥದ್ದೊಂದು ಎಚ್ಚರಿಕೆಯನ್ನು ನೀಡಿದ್ದಾರೆ. ತುಂಬ ಮಂದಿ ಅಗತ್ಯ ಇರದಿದ್ದರೂ ಕರೊನಾ ಸೋಂಕು ಪತ್ತೆ ಹಚ್ಚಿಕೊಳ್ಳಲು ಸಿಟಿ ಸ್ಕ್ಯಾನ್ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವರು ಸಿಟಿ ಸ್ಕ್ಯಾನ್​ಗೆ ಬರೆಯಿರಿ ಎಂದು ವೈದ್ಯರಿಗೇ ಹೇಳುತ್ತಿದ್ದಾರೆ. ಆದರೆ ಹೀಗೆ ಅನಗತ್ಯವಾಗಿ ಸಿಟಿ ಸ್ಕ್ಯಾನ್​ಗೆ ಒಳಗಾಗುತ್ತಿರುವುದು ಮುಂದೆ ದೊಡ್ಡ ಅಪಾಯವನ್ನೇ ತಂದೊಡ್ಡಲಿದೆ ಎಂದು ಅವರು ಕಿವಿಮಾತು ಹೇಳಿದ್ದಾರೆ.
ಕರೊನಾ ಸೋಂಕಿತ ಎಲ್ಲರಿಗೂ ಸಿಟಿ ಸ್ಕ್ಯಾನ್​ ಅಗತ್ಯ ಇರುವುದಿಲ್ಲ. ರೋಗ ಲಕ್ಷಣ ಸಣ್ಣ ಪ್ರಮಾಣದಲ್ಲಿ ಇರುವಾಗ ಸಿಟಿ ಸ್ಕ್ಯಾನ್​ ಅಗತ್ಯವೇ ಇಲ್ಲ. ರೋಗಲಕ್ಷಣ ಸಾಧಾರಣಕ್ಕಿಂತ ಹೆಚ್ಚಾದಾಗ ಅಥವಾ ಆಸ್ಪತ್ರೆಗೆ ಸೇರುವಂಥ ಪರಿಸ್ಥಿತಿ ಸೃಷ್ಟಿಯಾದಾಗ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಬಹುದು. ಆಗಲೂ ಮೊದಲ ಆಯ್ಕೆ ಚೆಸ್ಟ್​ ಎಕ್ಸ್​-ರೇ ಆಗಿರಬೇಕು. ಅದರಲ್ಲೂ ಸರಿ ಅನಿಸದಿದ್ದಾಗ ಮಾತ್ರ ಸಿಟಿ ಸ್ಕ್ಯಾನ್​ ಮಾಡಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ‌ ಮತ್ತೊಂದು ಎಡವಟ್ಟು; ನಾಪತ್ತೆಯಾಗಿದ್ದ ಸೋಂಕಿತನ ಮೃತದೇಹ ಆಸ್ಪತ್ರೆ ಶವಾಗಾರದಲ್ಲೇ ಪತ್ತೆ!
ದುರಂತವೆಂದರೆ ಅಸಿಂಪ್ಟಮ್ಯಾಟಿಕ್ ಸೋಂಕಿತರೂ ಸಿಟಿ ಸ್ಕ್ಯಾನ್​ ಮಾಡಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಸಿಟಿ ಸ್ಕ್ಯಾನ್ ಮಾಡಿಸಿಕೊಂಡರೆ 300ರಿಂದ 400 ಎಕ್ಸ್​ರೇಯಿಂದ ಹೊರಹೊಮ್ಮುವಷ್ಟು ರೇಡಿಯೇಷನ್​ ದೇಹಕ್ಕೆ ತಗಲುತ್ತದೆ. ಹೀಗೆ ಪದೇಪದೆ ಸಿಟಿ ಸ್ಕ್ಯಾನ್ ಮಾಡಿಸಿಕೊಂಡರೆ, ಅದರಲ್ಲೂ ಯುವಪೀಳಿಗೆಯವರು ಮುಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆ ಅಧಿಕವಿರುತ್ತದೆ ಎಂದು ಅವರು ಕಿವಿಮಾತು ಹೇಳಿದ್ದಾರೆ. ಅದೇ ರೀತಿ ಸಿಆರ್​ಪಿ, ಡಿ-ಡಿಮ್ಮರ್​ ಮುಂತಾದ ಬಯೋಮಾರ್ಕರ್ಸ್ ಪರೀಕ್ಷೆಗೂ ಅತಿ ಅಗತ್ಯವೆನಿಸದೆ ಒಳಪಡಬಾರದು. ಸೋಂಕಿನ ಲಕ್ಷಣಗಳು ಇಲ್ಲದಿದ್ದಾಗ ಅಥವಾ ಸಣ್ಣ ಪ್ರಮಾಣಲ್ಲಿದ್ದಾಗ ಈ ಟೆಸ್ಟ್​ಗಳ ಅಗತ್ಯ ಇರುವುದಿಲ್ಲ. ಇವು ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದಿದ್ದಾರೆ. ಹಾಗೆಯೇ ಸೋಂಕಿನ ಆರಂಭಿಕ ಹಂತದಲ್ಲೇ ಸ್ಟಿರಾಯ್ಡ್ಸ್​ ತೆಗೆದುಕೊಳ್ಳುವುದು ಕೂಡ ಆರೋಗ್ಯಕ್ಕೆ ಹಾನಿಕರ ಎಂದಿದ್ದಾರೆ.
ದೀಪಿಕಾ ಅಪ್ಪ-ಅಮ್ಮ, ತಂಗಿಗೂ ಕರೊನಾ ಸೋಂಕು; ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಆಸ್ಪತ್ರೆಯಲ್ಲಿ…

‘ಆಕ್ಸಿಜನ್ ಲೆವೆಲ್ 74, ಯಾವ ಆಸ್ಪತ್ರೆಯಲ್ಲೂ ಕರೆ ಸ್ವೀಕರಿಸ್ತಿಲ್ಲ.. ಪ್ಲೀಸ್ ಹೆಲ್ಪ್​ ಮಾಡಿ’: ಭಾರತದಲ್ಲಿರುವ ತಂದೆಗಾಗಿ ಅಮೆರಿಕದಲ್ಲಿರುವ ಪುತ್ರಿಯ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 4 =
Remember me
