ನವದೆಹಲಿ:ಕರೊನಾ ವೈರಸ್ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬೇಡಿ. ಎಲ್ಲರೂ ತಮಗೆ ತಾವೇ ಸಂಯಮ ವಹಿಸಿಕೊಂಡು ಸೋಂಕು ನಿಯಂತ್ರಣಕ್ಕೆ ಸಹಕರಿಸಿ ಎಂದು ಪ್ರಧಾನಿ ಮೋದಿಯವರು ಈಗಾಗಲೇ ದೇಶದ ಜನರಿಗೆ ಕರೆ ನೀಡಿದ್ದಾರೆ.
ಹಾಗೇ ಕರೊನಾ ನಿಯಂತ್ರಣದ ಬಗ್ಗೆ ಅರಿವು ಮೂಡುವ ದೃಷ್ಟಿಯಿಂದ ಭಾನುವಾರ ಮಾರ್ಚ್​ 22ರಂದು ಮುಂಜಾನೆ 7ರಿಂದ ರಾತ್ರಿ 9ರವರೆಗೆ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ದೇಶದ ಎಲ್ಲ ಜನರೂ ಪಾಲಿಸಿ ಎಂದೂ ಮನವಿ ಮಾಡಿದ್ದಾರೆ.
ಶನಿವಾರ ಮತ್ತೊಮ್ಮೆ ಕರೊನಾ ವೈರಸ್ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕರೊನಾ ವೈರಸ್​ನಿಂದ ನಿಮ್ಮನ್ನು ನೀವು ರಕ್ಷಿಸಿಕೊಂಡು, ನಿಮ್ಮ ಕುಟುಂಬವನ್ನೂ ಕಾಪಾಡಿಕೊಳ್ಳಲು ಸ್ವಯಂ ಕ್ರಮ ತೆಗೆದುಕೊಳ್ಳಿ. ಆರೋಗ್ಯ ಇಲಾಖೆ, ಸರ್ಕಾರಗಳು ನೀಡಿರುವ ಸೂಚನೆಗಳನ್ನು ಪಾಲಿಸಿ. ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ, ಎಲ್ಲಿಗೂ ಪ್ರಯಾಣ ಮಾಡಬೇಡಿ ಎಂದು ಜನರನ್ನು ಒತ್ತಾಯಿಸಿದ್ದಾರೆ.
‘ಕರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಆದರೆ ಭಯ ಪಡಬೇಡಿ’ ಎಂಬ ಮಾತನ್ನು ಎಂದಿಗೂ ಮರೆಯಬೇಡಿ. ನೀವು ಒಂದು ದಿನ ನಿಮ್ಮ ಮನೆಯಲ್ಲಿ ಉಳಿಯುವುದಷ್ಟೇ ಮುಖ್ಯವಲ್ಲ. ಕರೊನಾ ವೈರಸ್​ ನಿಯಂತ್ರಣವಾಗಬೇಕೆಂದರೆ ನೀವು ನಿಮ್ಮ ಊರು, ಪಟ್ಟಣ ಬಿಟ್ಟು ಹೊರಗೆ ಹೋಗಬಾರದು ಎಂದು ಮೋದಿಯವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮನೆಯಿಂದ ಹೊರಗೆ ಬರಬೇಡಿ ಎಂಬ ಸರ್ಕಾರದ ಸಲಹೆಯನ್ನು ಪಾಲಿಸಿ. ನಮ್ಮ ವೈದ್ಯರು, ಆರೋಗ್ಯ ಇಲಾಖೆಗಳು ನೀಡುವ ಸಲಹೆಯನ್ನು ಪಾಲಿಸುವ ಸಮಯ ಇದು. ಯಾರಿಗಾದರೂ ಮನೆಯಲ್ಲೇ ಕ್ವಾರಂಟೈನ್​ನಲ್ಲಿ ಇರಿ ಎಂದು ವೈದ್ಯರು ಸೂಚಿಸಿದ್ದರೆ, ದಯವಿಟ್ಟು ಅದನ್ನು ಕೇಳಿ. ಯಾರೂ ಮನೆಯಿಂದ ಹೊರಗೆ ಬರಬೇಡಿ. ಹೀಗೆ ಮಾಡುವುದರಿಂದ ನೀವು ನಿಮ್ಮ ಕುಟುಂಬ, ಸ್ನೇಹಿತರನ್ನು ರಕ್ಷಿಸಬಹುದು ಎಂದು ಮೋದಿ ಹೇಳಿದ್ದಾರೆ. (ಏಜೆನ್ಸೀಸ್​)
ಜನತಾ ಕರ್ಫ್ಯೂ ಎಂದರೇನು? ಇದು ಹೇಗಿರುತ್ತದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − three =
Remember me
