ನ್ಯೂಯಾರ್ಕ್:ವಿಶ್ವಸಂಸ್ಥೆಯ ಭದ್ರತಾ ಮಂಡಳಿ ದುರ್ಬಲ ಅಂಗವಾಗಿದೆ. ಮಂಡಳಿಯ ಪ್ರಾತಿನಿಧಿಕ ಸ್ವರೂಪದಲ್ಲಿನ ಸಮಸ್ಯೆಯೇ ಇದಕ್ಕೆ ಕಾರಣ ಎಂದು ಭಾರತ ಅಭಿಪ್ರಾಯಪಟ್ಟಿದೆ. ವಿಶ್ವಸಂಸ್ಥೆಯ 75ನೇ ಮಹಾಧಿವೇಶನದಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತ್ರಿಮೂರ್ತಿ, ಭದ್ರತಾ ಮಂಡಳಿಯ ಅಸೂಕ್ತ ಪ್ರಾತಿನಿಧ್ಯದಿಂದಾಗಿ ಅದು ವಿಶ್ವಾಸಾರ್ಹತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಜಾಗತಿಕ ಸಂಸ್ಥೆಯ ಅಂತರ್​ಸರ್ಕಾರಿ ಮಾತುಕತೆಗಳು (ಐಜಿಎನ್) ವಿಶ್ವವಿದ್ಯಾಲಯದ ಚರ್ಚಾ ವೇದಿಕೆಯ ಮಟ್ಟಕ್ಕೆ ಇಳಿದಿದೆ. ಇದೊಂದು ಔಪಚಾರಿಕ ವೇದಿಕೆ ಮಾತ್ರವಲ್ಲದೆ ಯಾವುದೇ ನಿಯಮಗಳು ಇಲ್ಲದಿರುವುದರಿಂದ ಯಾವುದೇ ಪ್ರಗತಿ ಆಗಿಲ್ಲ ಎಂದು ದೂರಿದರು.
ಮೊಸಳೆ ಕಣ್ಣೀರು :ಸಣ್ಣ ಹಾಗೂ ಮಧ್ಯಮ ಪ್ರಮಾಣದ ದೇಶಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ದೊಡ್ಡ ದೇಶಗಳು ಆ ರಾಷ್ಟ್ರಗಳ ಬಗ್ಗೆ ಸ್ವಲ್ಪವೂ ಸೌಜನ್ಯ ತೋರಿಸುತ್ತಿಲ್ಲ. ಐಜಿಎನ್ ವೇದಿಕೆಯ ದಾಖಲೆಗಳನ್ನು ಕೂಡ ನಿರ್ವಹಿಸದಿರುವುದರಿಂದ ಮುಂದಿನ ವರ್ಷ ಮತ್ತೆ ಹೊಸದಾಗಿ ಎನ್ನುವಂತೆ ಕೆಲಸ ಆರಂಭಿಸಬೇಕಾಗುತ್ತದೆ ಎಂದು ತ್ರಿಮೂರ್ತಿ ಕಿಡಿ ಕಾರಿದರು.
ಇದನ್ನೂ ಓದಿ:ಐಪಿಎಲ್‌ಗೆ ಆತಿಥ್ಯ ವಹಿಸಿದ್ದಕ್ಕಾಗಿ ಯುಎಇಗೆ ಬಿಸಿಸಿಐ ಪಾವತಿಸಿರುವ ಮೊತ್ತವೆಷ್ಟು ಗೊತ್ತೇ?
ಭದ್ರತಾ ಮಂಡಳಿಯಲ್ಲಿ ಆಫ್ರಿಕಾದ ಪ್ರಾತಿನಿಧ್ಯಕ್ಕೆ ಮಾತ್ರವೇ ಆಗ್ರಹಿಸುವುದರಲ್ಲಿ ಅರ್ಥವಿಲ್ಲ. ಆಫ್ರಿಕಾ, ಲ್ಯಾಟಿನ್ ಅಮೆರಿಕ ಹಾಗೂ ಇತರರ ಸಹಿತ ಮಂಡಳಿಯಲ್ಲಿ ಇರಲು ಅರ್ಹತೆಯಿರುವ ಎಲ್ಲರ ಪ್ರಾತಿನಿಧ್ಯಕ್ಕಾಗಿ ಹೋರಾಡುವುದು ಅಗತ್ಯ ಎಂದು ಪ್ರತಿಪಾದಿಸಿದರು. ಪಾಕ್ ಬಗ್ಗೆ ಪ್ರತಿಕ್ರಿಯಿಸಲು ನಕಾರ: ಭಾರತದ ಬಗ್ಗೆ ಪಾಕಿಸ್ತಾನ ಇತ್ತೀಚೆಗೆ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಲು ತ್ರಿಮೂರ್ತಿ ನಿರಾಕರಿಸಿದರು. ‘ಇದೊಂದು ಗಂಭೀರ ಚರ್ಚೆಯ ವೇದಿಕೆಯಾಗಿದೆ. ಚಿಲ್ಲರೆ ಆರೋಪಗಳನ್ನು ರ್ಚಚಿಸಲು ಇರುವಂಥದ್ದಲ್ಲ’ ಎಂದಷ್ಟೆ ಹೇಳಿ ಪಾಕಿಸ್ತಾನ ಮುಖಭಂಗ ಅನುಭವಿಸುವಂತೆ ಮಾಡಿದರು.
ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆಯೇ ಈ ಸಲ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
