ವಾರಾಣಸಿ:ಹಿಂದುಗಳ ಪವಿತ್ರ ಕ್ಷೇತ್ರ ವಾರಾಣಸಿಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭರಪೂರ ಸಿದ್ಧತೆಗಳು ದೇಗುಲಗಳ ನಗರಿಯಲ್ಲಿ ನಡೆದಿದೆ. ‘ದಿವ್ಯ ಕಾಶಿ, ಭವ್ಯ ಕಾಶಿ’ ಕಾರ್ಯಕ್ರಮ ದೇಶದ 51 ಸಾವಿರ ಪ್ರದೇಶಗಳಲ್ಲಿ ನೇರವಾಗಿ ಪ್ರಸಾರ ಆಗಲಿದ್ದು, ಉತ್ತರ ಪ್ರದೇಶದ ಎಲ್ಲ ಪ್ರಮುಖ ಶಿವಾಲಯ ಮತ್ತು ಆಶ್ರಮಗಳಲ್ಲಿ ಎಲ್​ಇಡಿ ಪರದೆಯನ್ನು ಬಿಜೆಪಿ ಸ್ಥಳೀಯ ಘಟಕಗಳು ವ್ಯವಸ್ಥೆ ಮಾಡಿವೆ.
3 ಸಾವಿರ ಸ್ವಾಮೀಜಿಗಳು ಭಾಗಿ: ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು, ಹಿಂದು ಅಲ್ಲದೆ ಅನ್ಯ ಧರ್ಮಗಳ ಮೂರು ಸಾವಿರ ಸ್ವಾಮೀಜಿಗಳು, ಎರಡು ಸಾವಿರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅತ್ಯಂತ ಮಹತ್ವದ ಕಾರ್ಯಕ್ರಮ ಇದಾಗಿರುವ ಕಾರಣ ಉತ್ತರ ಪ್ರದೇಶದ ಪೊಲೀಸ್ ಅಲ್ಲದೆ, ಅರೆ ಸೇನಾಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಡ್ರೋನ್ ಮೂಲಕ ನಿಗಾ ಇರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರವನ್ನು ವ್ಯಾಟಿಕನ್ ಸಿಟಿ (ರೋಮನ್ ಕ್ಯಾಥೋಲಿಕ್ ಚರ್ಚ್ ಕೇಂದ್ರ ಸ್ಥಾನ) ಮತ್ತು ಮೆಕ್ಕಾ(ಇಸ್ಲಾಂನ ಶ್ರದ್ಧಾ ಕೇಂದ್ರಸ್ಥಾನ) ಕ್ಕೆ ಸರಿಸಮವೆನಿಸುವಂತೆ ಅಭಿವೃದ್ಧಿಪಡಿಸಲಾಗುವುದು. ಈ ಕ್ಷೇತ್ರ ಹಿಂದುತ್ವದ ಪ್ರತೀಕವಾಗಿ ಉದಯಿಸಲಿದೆ.
|ರವೀಂದ್ರ ನಾರಾಯಣ ಸಿಂಗ್ವಿಶ್ವ ಹಿಂದು ಪರಿಷದ್ ಅಧ್ಯಕ್ಷ
ಝುಗಮಗಿಸುತ್ತಿದೆ ದೇಗುಲಗಳ ನಗರಿ:ಕಾಶಿಯ ಪ್ರತಿಯೊಂದು ರಸ್ತೆಯನ್ನೂ ಸಿಂಗರಿಸಲಾಗಿದ್ದು, ವಿಶ್ವನಾಥ ದೇಗುಲಕ್ಕೆ ಸಾಗುವ ರಸ್ತೆಗಳಲ್ಲಿರುವ ಕಟ್ಟಡಗಳಿಗೆ ತೆಳು ಗುಲಾಬಿ ಬಣ್ಣವನ್ನು ಬಳಿಯಲಾಗಿದೆ. ದ್ವಾದಶ ಜ್ಯೋತಿರ್ಲಿಂಗಗಳನ್ನು ವಿದ್ಯುತ್ ದೀಪಾಲಂಕಾರ ದಲ್ಲಿ ಮೂಡಿಸಲಾಗಿದೆ. ಮೋದಿಯವರ ಆಳೆತ್ತರದ ಫ್ಲೆಕ್ಸ್ ಗಳು ರಾರಾಜಿಸಿವೆ. ಹೋಟೆಲ್, ಮಳಿಗೆಗಳ ಮಾಲೀಕರು ಮತ್ತು ಉದ್ಯಮಿಗಳು ಸ್ವಇಚ್ಛೆಯಿಂದ ತಮ್ಮ ಕಟ್ಟಡಗಳನ್ನು, ವೃತ್ತಗಳನ್ನು ಸಿಂಗರಿಸಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೆ ಪೇಜಾವರ ಶ್ರೀ:ಕಾಶಿಯಲ್ಲಿ ಡಿ.13ರಂದು ನಡೆಯಲಿರುವ ಕಾರಿಡಾರ್ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶದ ಪ್ರಮುಖ ಸಾಧು- ಸಂತರನ್ನು ಆಹ್ವಾನಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಡಿ.7ರಂದು ಪೇಜಾವರ ಶ್ರೀಗಳಿಗೆ ದೂರವಾಣಿ ಕರೆ ಮಾಡಿ ಯೋಗಿ ಆಮಂತ್ರಣ ನೀಡಿದ್ದಾರೆ. ಶ್ರೀಗಳು ಭಾನುವಾರ ರಾತ್ರಿ ಮಂಗಳೂರಿನಿಂದ ಮುಂಬೈಗೆ ತೆರಳಿದ್ದು ಸೋಮವಾರ ಕಾಶಿಗೆ ತೆರಳಲಿದ್ದಾರೆ ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.
ದೋಣಿ ವಿಹಾರ ಗಂಗಾರತಿಯಲ್ಲಿ ಮೋದಿ ಭಾಗಿ:ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿಯವರು ‘ಕ್ರೂಸ್ ಬೈಠಕ್’ (ದೋಣಿ ವಿಹಾರ) ಮತ್ತು ಗಂಗಾರತಿಯಲ್ಲಿ ಭಾಗಿಯಾಗಲಿದ್ದಾರೆ. ದೋಣಿ ವಿಹಾರದಲ್ಲಿ ಕಾಶಿಯ ಪ್ರಮುಖ ಘಾಟ್​ಗಳ ದರ್ಶನವನ್ನು ಅವರು ಮಾಡಲಿದ್ದಾರೆ. ಜತೆಗೆ ಸಿಎಂ ಮತ್ತು ಉಪಮುಖ್ಯಮಂತ್ರಿಗಳ ಜತೆ ಅನೌಪಚಾರಿಕ ಮಾತುಕತೆಯನ್ನೂ ನಡೆಸಲಿದ್ದಾರೆ. ಘಾಟ್​ಗಳಲ್ಲಿ ಐದು ಲಕ್ಷ ದೀಪಗಳನ್ನು ಹಚ್ಚಲು ವ್ಯವಸ್ಥೆ ಮಾಡಲಾಗಿದೆ ಎಂದು ವಾರಾಣಸಿಯ ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ಹೇಳಿದ್ದಾರೆ. ಪ್ರಧಾನಿಯವರು ಸೋಮವಾರ ಬೆಳಗ್ಗೆ ಬನಾರಸ್ ಏರ್​ಪೋರ್ಟ್​ಗೆ ಬರಲಿದ್ದಾರೆ. ಅಲ್ಲಿಂದ ಅವರು ಸಂಸ್ಕೃತ ವಿಶ್ವವಿದ್ಯಾಲಯದ ಆವರಣಕ್ಕೆ ಹಲಿಕಾಪ್ಟರ್​ನಲ್ಲಿ ಆಗಮಿಸಲಿದ್ದು, ಮೊದಲು ಕಾಲಭೈರವ ಸ್ವಾಮಿ ದರ್ಶನವನ್ನು ಪಡೆಯಲಿದ್ದಾರೆ. ಈಘಾಟ್​ನಿಂದ ಕಾಶಿ ವಿಶ್ವನಾಥ ಕಾರಿಡಾರ್​ನಲ್ಲಿ ನಡೆದುಕೊಂಡು, ಸಾಧು-ಸಂತರನ್ನು ಭೇಟಿಯಾಗಿ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. ಈ ಸಮಾರಂಭ ಎರಡು-ಮೂರು ತಾಸು ನಡೆಯುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಪ್ರಧಾನಿಯವರು ಸೋಮವಾರ ವಾರಾಣಸಿಯ ಡಿಎಲ್​ಡಬ್ಲ್ಯೂ ಅತಿಥಿಗೃಹದಲ್ಲಿ ತಂಗಲಿದ್ದು, ಮರು ದಿನ ಸಿಎಂ ಮತ್ತು ಉಪಮುಖ್ಯಮಂತ್ರಿಗಳ ಜತೆ ಅಧಿಕೃತ ಸಭೆ ನಡೆಸಲಿದ್ದಾರೆ. ನಂತರ ಉಮ್ರಾಹ್​ನಲ್ಲಿನ ಕಾರ್ಯಕ್ರಮಕ್ಕೆ ತೆರಳುವರು ಎಂದು ಶರ್ಮಾ ತಿಳಿಸಿದ್ದಾರೆ.
ವಿವಾಹ ನೋಂದಣಿಯಂತೆ ಮತಾಂತರಕ್ಕೂ ನೋಂದಣಿ; ಒಮ್ಮೆ ಮತಾಂತರವಾದರೆ ಇವೆಲ್ಲ ಬದಲಾಗಲಿವೆ!?

ಅಮೆರಿಕದ ಇತಿಹಾಸದಲ್ಲೇ ಭಯಂಕರ ಸುಂಟರಗಾಳಿ!; 70ಕ್ಕೂ ಅಧಿಕ ಜನರ ಸಾವು, ಮೃತರ ಸಂಖ್ಯೆ 100 ದಾಟುವ ಸಾಧ್ಯತೆ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
