ಮುಂಬೈ: ಇಪ್ಪತ್ತೈದು ವರ್ಷದ ಅವಿವಾಹಿತ ಯುವತಿಯೊಬ್ಬಳು ಮಗುವಿಗೆ ಜನ್ಮನೀಡಿದ್ದು, ಆ ನವಜಾತ ಶಿಶುವನ್ನು ತನ್ನ ಫ್ಲ್ಯಾಟ್​ನ ಆರನೇ ಮಹಡಿಯಿಂದ ಕೆಳಕ್ಕೆಸೆದ ದುರಂತ ಘಟನೆ ಘಾಟ್​ಕೋಪರ್​ ಈಸ್ಟ್​ನಲ್ಲಿ ನಡೆದಿದೆ. ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಅಸ್ವಸ್ಥಳಾಗಿರುವ ಆಕೆಯನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಾಟ್​ಕೋಪರ್ ಈಸ್ಟ್​ನ ಗೌರಿಶಂಕರ್ ವಾಡಿಯಲ್ಲಿರುವ ಈ ಅಪಾರ್ಟ್​ಮೆಂಟ್ ಸಮೀಪ ರಕ್ತಸಿಕ್ತ ಶಿಶುವಿನ ಶವ ಬಿದ್ದುಕೊಂಡಿರುವ ಬಗ್ಗೆ ಹಾಲು ಹಾಕುವ ಹುಡುಗ ಬಿಲ್ಡಿಂಗ್ ಸೆಕ್ಯುರಿಟಿಗೆ ತಿಳಿಸಿದ್ದ. ಇದು ಆಗಸ್ಟ್​ 4ರಂದು ನಡೆದ ಘಟನೆಯಾಗಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ ವೇಳೆ, ಅಪಾರ್ಟ್​ಮೆಂಟ್​ನಲ್ಲಿ ಗರ್ಭಿಣಿಯರು ಯಾರು ಎಂಬುದು ಪತ್ತೆಹಚ್ಚಲಾಗಿರಲಿಲ್ಲ.
ಇದನ್ನೂ ಓದಿ:ಸಚಿನ್​ಗೆ ನನ್ನ ಬಗ್ಗೆ ನಂಬಿಕೆ ಇದೆ; ಬಿಜೆಪಿ ಅವರು ಅವರ ಹಾದಿ ತಪ್ಪಿಸಿ ಸರ್ಕಾರ ಕೆಡವಲು ಯತ್ನಿಸಿತು
ಐದು ತಿಂಗಳ ಕಾಲ ಲಾಕ್​ಡೌನ್ ಇದ್ದ ಕಾರಣ ಪರಸ್ಪರ ಯಾರೂ ಸಂಪರ್ಕದಲ್ಲಿ ಇರಲಿಲ್ಲ. ಪ್ರತಿಯೊಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ಈ ಯುವತಿ ಅಸ್ವಸ್ಥಳಾಗಿದ್ದುದು ಗಮನಕ್ಕೆ ಬಂತು. ವಿಚಾರಣೆಗೊಳಪಡಿಸಿದಾಗ ಮಗುವನ್ನು ಬಿಸಾಕಿದ ವಿಚಾರ ಬಹಿರಂಗವಾಯಿತು. ಕೂಡಲೇ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಟ್ರಂಪ್ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ವೈಟ್​ಹೌಸ್ ಹೊರಗೆ ಶೂಟೌಟ್​
ಮಗುವಿನ ಶವದ ಪೋಸ್ಟ್​ ಮಾರ್ಟಂ ರಿಪೋರ್ಟ್ ಬಂದಿದ್ದು, ಜನಿಸುವಾಗ ಮಗು ಜೀವಂತ ಇತ್ತು. ಬಳಿಕ ತಲೆಗಾದ ಗಾಯದಿಂದಾಗಿ ಮೃತಪಟ್ಟಿದೆ ಎಂಬ ಅಂಶ ಉಲ್ಲೇಖವಿದೆ. ಈ ಪ್ರಕರಣದಲ್ಲಿ ಮಗುವಿನ ತಾಯಿಗೆ ಎರಡು ವರ್ಷ ಸೆರೆವಾಸ ಅಥವಾ ದಂಡದೊಂದಿಗೆ 2 ವರ್ಷ ಸೆರೆವಾಸ ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
https://www.vijayavani.net/thief-accidentally-slits-his-own-throat-while-robbing-bank-dies/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 16 =
Remember me
