ಮುಂಬೈ:ಸೋಶಿಯಲ್​ ಮೀಡಿಯಾ ಸ್ಟಾರ್​ ಉರ್ಫಿ ಜಾವೇದ್ ವಿಶಿಷ್ಟ ಡ್ರೆಸ್ಸಿಂಗ್ ಶೈಲಿಗೆ ಹೆಚ್ಚು ಸುದ್ದಿ ಆಗುತ್ತಾರೆ. ಕೆಲ ಪ್ರೊಡಕ್ಷನ್ ಹೌಸ್‌ಗಳು ತುಂಬಾ ಕೆಟ್ಟದಾಗಿ ನಡೆಸಿಕೊಂಡಿವೆ ಎಂದು ತಮ್ಮ ಅನುಭವವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ಉರ್ಫಿ, ಕಿರುತೆರೆ ಉದ್ಯಮದಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಕೇಳಿದಾಗ- ನೀವು ನಾಯಕ ನಟಿಯಲ್ಲದಿದ್ದರೆ, ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಅವರು ನಿಮ್ಮನ್ನು ಚೆನ್ನಾಗಿ ನಡೆಸಿಕೊಳ್ಳುವುದಿಲ್ಲ. ನಾನು ಶೋನಲ್ಲಿ ಸೈಡ್ ಕ್ಯಾರೆಕ್ಟರ್ ಆಗಿದ್ದೆ. ಆಗ ನನಗೆ ತೊಂದರೆಗಳು ಎದುರಾದವು. ಕೆಲ ಸೆಟ್ಸ್‌ಗಳಲ್ಲಿ ಸಣ್ಣ ವಿಚಾರಕ್ಕೂ ದೊಡ್ಡದಾಗಿ ಬೈಯ್ಯುತ್ತಾರೆ. ನಾಯಿಗಳ ಹಾಗೆ ನಡೆಸಿಕೊಳ್ಳುತ್ತಾರೆ. ಕೆಲ ಪ್ರೊಡಕ್ಷನ್ ಹೌಸ್‌ಗಳು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತವೆ ಎಂದಿದ್ದಾರೆ.

ಕಿರುತೆರೆ ಉದ್ಯಮದಲ್ಲಿ ನೀವು ಮಾಡಿದ ಕೆಲಸಕ್ಕೆ ಹಣವನ್ನು ನೀಡುವುದು ಮಾಡುವುದು ವಿಳಂಬ ಮಾಡುತ್ತಾರೆ ಮತ್ತು ಕೆಲವೊಮ್ಮೆ ಅದನ್ನು ಕಡಿತಗೊಳಿಸುತ್ತಾರೆ, ಸಾಕಷ್ಟು ಅಳಿಸುತ್ತಾರೆ ಎಂದು ಹೇಳಿದ್ದಾರೆ.

ಉರ್ಫಿ ಜಾವೇದ್ ತನ್ನ ವಿಶಿಷ್ಟ ಡ್ರೆಸ್ಸಿಂಗ್ ಶೈಲಿಯ ಕಾರಣದಿಂದಲೇ ಕಳೆದ ಕೆಲವು ವರ್ಷಗಳಿಂದ ದೊಡ್ಡ ಹೆಸರನ್ನು ಗಳಿಸಿದ್ದಾಳೆ. ಬಿಗ್ ಬಾಸ್ OTTಯಲ್ಲಿ ಭಾಗವಹಿಸಿದ್ದ ಉರ್ಫಿ, ಬೋಲ್ಡ್ ಡ್ರೆಸ್ಸಿಂಗ್​ಗೆ ಹೆಸರುವಾಸಿಯಾಗಿದ್ದಾಳೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
