ಲಖನೌ:ದುಡ್ಡಿಗಾಗಿ ಜನ ಯಾವ ಮಟ್ಟಕ್ಕೆ ಹೋಗುತ್ತಾರೆ ಎಂಬ ವಿಚಾರವನ್ನೂ ನಾವು ಪ್ರತಿನಿತ್ಯ ನೋಡಿರುತ್ತೇವೆ, ಕೇಳಿರುತ್ತೇವೆ. ಅದೇ ರೀತಿ ಕೆಲವೊಮ್ಮೆ ಅತಿರೇಕ ಎಂಬಂತೆ ಸತ್ತವರ ಹೆಸರಿನಲ್ಲಿಯೂ ಜನ ಹಣ ಪಡೆದಯುತ್ತಿರುವ ಅನೇಕ ಪ್ರಕರಣಗಳನ್ನೂ ನಾವು ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ಓದಿರುತ್ತೇವೆ.
ಇದೀಗ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಸತ್ತ ವ್ಯಕ್ತಿಯ ಪತ್ನಿ ತಾನೇ ಎಂದು ಹೇಳಿಕೊಂಡು ಪಿಂಚಣಿ ಸ್ವೀಕರಿಸುವ ಮೂಲಕ ಸರ್ಕಾರಕ್ಕೆ ವಂಚಸಿರುವ ಘಟನೆ ಉತ್ತರಪ್ರದೇಶದ ಇಟವಾ ಜಿಲ್ಲೆಯ ಆಲಿಗಂಜ್​ ಪ್ರದೇಶದಲ್ಲಿ ನಡೆದಿದೆ.
ಕಂದಾಯ ಇಲಾಖೆಯಲ್ಲಿ ಕ್ಲರ್ಕ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ವಜಾಹತ್​ ಉಲ್ಲಾ ಖಾನ್​ ಜನವರಿ 02, 2013ರಂದು ವಿಧಿವಶರಾಗಿದ್ದರು. ಅವರ ಪತ್ನಿ ಸಬಿಯಾ ಬೇಗಮ್​ ಸಹ ಮದುವೆಯಾದ ಕೆಲ ವರ್ಷಗಳಲ್ಲೇ ನಿಧನರಾಗಿದ್ದರು. ಬಂದ ಅವಕಾಶವನ್ನೂ ಸದುಪಯೋಗಪಡಿಸಿಕೊಂಡ ಇವರ ಪುತ್ರಿ ಮೊಹ್ಸಿನಾ ಪರ್ವೇಜ್​​(36) ತಾನು ವಜಾಹತ್​ ಉಲ್ಲಾ ಖಾನ್ ಅವರ ಧರ್ಮಪತ್ನಿ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾಳೆ. ಬಳಿಕ ಪಿಂಚಣಿ ಸೌಲಭ್ಯಕ್ಕೆ ಬೇಕಾದ ವ್ಯವಸ್ಥೆಗಳನ್ನೂ ಮಾಡಿಕೊಂಡು ಹಣವನ್ನು ಪಡೆಯಲು ಶುರು ಮಾಡಿದ್ದಾಳೆ.
ಇದನ್ನೂ ಓದಿ:VIDEO| ಭಯೋತ್ಪಾದನೆ ನಿಗ್ರಹ ಅಣಕು ಕಾರ್ಯಾಚರಣೆ ಮಾಡುತ್ತಿದ್ದ ಪೊಲೀಸರ ಮೇಲೆ ಹಲ್ಲೆ
2017ರಲ್ಲಿ ಮೊಹ್ಸಿನಾಗೆ ಪರ್ವೇಜ್ ಎಂಬುವವರ ಜೊತೆ ಮದುವೆಯಾಗಿದ್ದು, ತಾನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪಿಂಚಣಿ ಪಡೆಯುತ್ತಿರುವ ವಿಚಾರವನ್ನೂ ತನ್ನ ಪತಿ ಬಳಿಯೂ ಹೇಳಿಕೊಂಡಿದ್ದಾಳೆ. ಇತ್ತೀಚಿಗೆ ದಂಪತಿಗಳು ಬೇರ್ಪಟ್ಟ ಕಾರಣ ಆಕೆಯ ಪತಿ ವಿಚಾರವನ್ನೂ ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆಗೆ ತಿಳಿಸಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿ ಮೊಹ್ಸಿನಾ ಸುಳ್ಳು ದಾಖಲೆ ಸಲ್ಲಿಸಿ ಕಳೆದ 10 ವರ್ಷಗಳಲ್ಲಿ 12 ಲಕ್ಷ ರೂಪಾಯಿ ಪಿಂಚಣಿ ಪಡೆದಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ಆಕೆಯ ವಿರುದ್ಧ ಭಾರತೀಯ ದಂಡ ಸಂಹಿತೆ(IPC Section) 409, 420, 467, 468, 471 ಅಡಿ ಚಾರ್ಜ್​ಶೀಟ್​ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸರ್ಕಾರಕ್ಕೆ ವಂಚನೆ ಎಸಗಲು ಮೊಹ್ಸಿನಾಗೆ ಸಹಕರಿಸಿದ ಕಳಂಕಿತ ಅಧಿಕಾರಿಗಳ ವಿರುದ್ಧವೂ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
