ಉನ್ನಾವೋ:ಮಹಿಳೆ ಮತ್ತು ಯುವಕನನ್ನು ಒಟ್ಟಿಗೆ ಕಟ್ಟಿಹಾಕಿ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಈ ಘಟನೆ ಮಾಲುಖೇದಾದಲ್ಲಿ ನಡೆದಿದೆ. ಗ್ರಾಮಸ್ಥರು ರೆಕಾರ್ಡ್​ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋ ನೆಟ್ಟಿಗರು ಹಲ್ಲೆ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಷ್ಟೊಂದು ಅಮಾನವೀಯವಾಗಿ ನಡೆದುಕೊಳ್ಳುತ್ತಾರಾ? ನೀವೇನು ಮನುಷ್ಯರಾ? ರಾಕ್ಷಸರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿಗೆ ಬೆಂಬಲ ಘೋಷಣೆ: ಋಣದ ಲೆಕ್ಕಾಚಾರ ಉಲ್ಟಾ, ಕೊಟ್ಟ ಮಾತು ತಪ್ಪಿದ್ರಾ ಸುಮಕ್ಕ?
ವಿಡಿಯೋದಲ್ಲಿ ಏನಿದೆ?ಕೋಪಗೊಂಡ ಗ್ರಾಮಸ್ಥರು ನೆಲದ ಮೇಲೆ ಮಲಗಿರುವ ಪ್ರಜ್ಞಾಹೀನ ಜೋಡಿಯನ್ನು (ಸುರೇಶ್ ಮತ್ತು ಸೀಮಾ) ನಿಂದಿಸುವುದನ್ನು ವಿಡಿಯೋದಲ್ಲಿ ಕೇಳಬಹುದು. ಒಬ್ಬರನ್ನೊಬ್ಬರು ತಬ್ಬಿಕೊಂಡಿರುವಂತೆ ಜೋಡಿಯನ್ನು ಒಟ್ಟಿಗೆ ಕಟ್ಟಲಾಗಿದೆ. ಒಬ್ಬರ ಮೇಲೆ ಒಬ್ಬರು ಇರುವಾಗ ವ್ಯಕ್ತಿಯೊಬ್ಬ ಬಂದು ಇಬ್ಬರನ್ನು ಪಕ್ಕಕ್ಕೆ ದೂಡುತ್ತಾನೆ ಮತ್ತು ಮಹಿಳೆಯ ಮುಖದ ಮೇಲಿದ್ದ ಕೂದಲನ್ನು ಪಕ್ಕಕ್ಕೆ ಸರಿಸುವುದು ವಿಡಿಯೋದಲ್ಲಿದೆ.
उन्नाव में प्रेमी-प्रेमिका को इलाक़े के लोगों द्वारा दी गई तालिबानी सजा का वीडियो वायरल। प्रेमी प्रेमिका को बांधकर ग्रामीणों ने पीटा।pic.twitter.com/6nDqJkRTQh
— SANJAY TRIPATHI (@sanjayjourno)March 10, 2023

ಗ್ರಾಮಸ್ಥರ ಪ್ರಕಾರ ಮಹಿಳೆಯು ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಆಕೆ ಅವಿವಾಹಿತ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಮಾರ್ಚ್ 9ರ ರಾತ್ರಿ ಮಹಿಳೆ ಮತ್ತು ಪುರುಷನನ್ನು ಆಕೆಯ ಸಂಬಂಧಿಕರು ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದಾರೆ. ಕೋಪಗೊಂಡ ಗ್ರಾಮಸ್ಥರು ಇಬ್ಬರನ್ನೂ ಕಟ್ಟಿಹಾಕಿದ್ದಾರೆ. ಮಾಹಿತಿ ಪಡೆದ ಉನ್ನಾವೋ ಪೊಲೀಸರು ಸ್ಥಳಕ್ಕೆ ಧಾವಿಸಿ ಪುರುಷ ಮತ್ತು ಮಹಿಳೆಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ:ನಿಮ್ಮ ಮದುವೆ ಬಗ್ಗೆ ಹೇಳಿ… ಸಿನಿಮಾ ವೇದಿಕೆಯಲ್ಲಿ ನಟ ನರೇಶ್​ ಕೊಟ್ಟ ಉತ್ತರ ಹೀಗಿತ್ತು….
ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಿಒ ಬಿಘಾಪುರ ತಿಳಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.(ಏಜೆನ್ಸೀಸ್​)
थाना बारासगवर क्षेत्रांतर्गत ग्राम मल्हुवा में युवक व महिला के साथ महिला के परिजनों द्वारा की गई मारपीट की घटना के संदर्भ में क्षेत्राधिकारी बीघापुर द्वारा दी गई बाइट ।pic.twitter.com/7vKr0U2Fev
— UNNAO POLICE (@unnaopolice)March 10, 2023

ತೀವ್ರ ಹೃದಯಾಘಾತದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವನಾರಾಯಣ ವಿಧಿವಶ

ಗ್ಯಾಂಗ್​ರೇಪ್​ ಆರೋಪಿಯ ಮನೆಯನ್ನು ಧ್ವಂಸ ಮಾಡಿದ ಮಹಿಳಾ ಪೊಲೀಸ್​ ಅಧಿಕಾರಿಗಳು!

ಪ್ರತಿ ಮನೆ ಮಗಳಾಗಲಿ ಒಲಿಂಪಿಕ್ಸ್ ತಾರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − five =
Remember me
