ಲಖನೌ:ಬಿಜೆಪಿ ನಾಯಕರೊಬ್ಬರುಆ್ಯಂಬುಲೆನ್ಸ್​ಗೆ ಅಡ್ಡಲಾಗಿ ಕಾರು ನಿಲ್ಲಿಸಿ ರೋಗಿಯ ಸಾವಿಗೆ ಕಾರಣವಾಗಿರುವ ಘಟನೆ ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.
ಬಿಜೆಪಿ ನಾಯಕ ಉಮೇಶ್​ ಮಿಶ್ರಾ ತಮ್ಮ ಕಾರನ್ನು ನಡು ರಸ್ತೆಯಲ್ಲಿ ನಿಲ್ಲಿಸಿದ್ದರು ಈ ವೇಳೆ ರೋಗಿ ಒಬ್ಬರನ್ನು ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಬಿಡದ ಕಾರಣ ರೋಗಿ ಪ್ರಾಣ ಬಿಟ್ಟಿದ್ದಾರೆ. ಈ ದುರ್ನಡತೆಯನ್ನು ಪ್ರಶ್ನಿಸಿದ ರೋಗಿಯ ಕುಟುಂಬಸ್ಥರಿಗೆ ಬಿಜೆಪಿ ನಾಯಕ ಧಮ್ಕಿ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಮೃತ ವ್ಯಕ್ತಿ ಸುರೇಶ್​ ಚಂದ್ರ ಅವರಿಗೆ ಎದೆ ನೋವು ಖಾಣಿಸಿಕೊಂಡಿದ್ದ ಕಾರಣ ಅವರನ್ನು ಸೀತಾಪುರದಿಂದ ಲಖನೌಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್​​ಗೆ ಉಮೇಶ್​ ಮಿಶ್ರಾ ಕಾರು ಅಡ್ಡಲಾಗಿ ನಿಲ್ಲಿಸಲಾಗಿತ್ತು. 30 ನಿಮಿಗಳಿಗೂ ಹೆಚ್ಚಿನ ಕಾಲ ಆ್ಯಂಬುಲೆನ್ಸ್​ ತೆರಳಲು ದಾರಿ ಮಾಡದ ಕಾರಣ ರೋಗಿ ಕೊನೆಯುಸಿರೆಳೆದಿದ್ದಾರೆ.
#रसूखदार…#BJPसे मिश्रिख ब्लाक प्रमुख रामकिंकर पांडे के भाई हैं. मरीज को ले जाने वाले एंबुलेंस के आगे अपनी गाड़ी पार्किंग कर दी। विरोध हुआ तो सामने वालों को बोल रहे हैं ….. बना दूंगा.😢pic.twitter.com/X97ZOAaZN7
ಇದನ್ನೂ ಓದಿ:ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ; ರಾಜ್ಯದ 865 ಹಳ್ಳಿಗಳಿಗೆ ಆರೋಗ್ಯ ಯೋಜನೆ ವಿಸ್ತರಿಸಿದ ಮಹಾ ಸರ್ಕಾರ
ಬಿಜೆಪಿ ನಾಯಕ ಹಿಂತಿರುಗಿದ ನಂತರ ಕುಟುಂಬಸ್ಥರು ಉಮೇಶ್​ ಮಿಶ್ರಾ ಜೊತೆ ವಾಗ್ವಾದ ನಡೆದಿದ್ದು ಈ ವೇಳೆ ತಪ್ಪಿತಸ್ಥನು ಜಿಲ್ಲಾ ಮ್ಯಾಜಿಸ್ಟ್ರೇಟ್​ ಹಾಗೂ ಪೊಲೀಸ್​ ವರಿಷ್ಠಾಧಿಕಾರಿ ತನ್ನ ನಿರ್ದೇಶನದ ಮೇಲೆ ಕೆಲಸ ಮಾಡುತ್ತಾರೆ. ಪೊಲೀಸ್​ ಕೇಸ್​ಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಉಪಸ್ಥಿತರಿದ್ದರು ಯಾವುದೇ ಕ್ರಮವನ್ನು ಜರುಗಿಸದಿರುವುದು ತೀವ್ರ ಟೀಕೆಗೆ ಗುರಿಯಾಗಿದೆ ಮತ್ತು ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + fifteen =
Remember me
