ಉತ್ತರ ಪ್ರದೇಶ:ಯುವತಿಯೊಬ್ಬಳು ಮದುವೆಯಾದ ಒಂದೇ ವಾರದಲ್ಲಿ ಗಂಡನನ್ನು ಬಿಟ್ಟು ಪ್ರಿಯರನೊಂದಿಗೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಹೆಂಡತಿಯನ್ನು ಹುಡುಕಿ ಕೊಡುವಂತೆ ಗಂಡ ತರ್ಕುಲ್ವಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಮದುವೆಯಾದ ಮೊದಲ ಒಂದೆರಡು ದಿನಗಳಲ್ಲಿ ಗಂಡ ಹೆಂಡತಿ ಅನ್ಯೋನ್ಯವಾಗಿಯೇ ಇದ್ದರು. ಆದರೆ ಆಕೆಯ ಪ್ರಿಯಕರ ಇರುವುದು ಮಾತ್ರ ಗಂಡನ ಅರಿವಿಗೆ ಬಂದಿರಲಿಲ್ಲ. ಹೀಗಾಗಿ ಹೆಂಡತಿಯನ್ನು ಸಂಪೂರ್ಣವಾಗಿ ನಂಬಿದ್ದ. ಆದರೆ ಗಂಡ ಕೆಲಸ ಮುಗಿಸಿ ಮನೆಗೆ ಹಿಂತಿರುವಾಗ ಅಚ್ಚರಿ ಕಾದಿತ್ತು. ಎಷ್ಟೇ ಹುಡಕಾಡಿದರೂ ಹೆಂಡತಿ ಮಾತ್ರ ಮನೆಯಲ್ಲಿ ಇರಲಿಲ್ಲ.
ಹೊತ್ತು ಕಳೆದರೂ ಮನೆಯಲ್ಲಿ ಹೆಂಡತಿ ಕಾಣದೇ ಇದ್ದಾಗ ಆಘಾತಕ್ಕೊಳಗಾಗಿದ್ದಾನೆ. ಆಕೆಗೆ ಏನಾದರು ಆಪತ್ತು ಸಂಭಂವಿಸಬಹುದು ಎಂದು ತೀವ್ರವಾಗಿ ಹುಡುಕಾಡಿದ್ದಾನೆ. ಆಕೆಯ ಪಾಲಕರಿಗೂ ಕರೆ ಮಾಡಿ ವಿಚಾರಿಸಿದ್ದಾನೆ. ಹೆಂಡತಿ ಎಲ್ಲೂ ಇಲ್ಲ ಎಂದು ಗೊತ್ತಾಗುತ್ತಿದ್ದಂತೆ ತನ್ನ ಮನೆಯಲ್ಲಿದ್ದ ಚಿನ್ನಾಭರಣೆ ಕಾಣೆಯಾಗಿರುವುದ ಅರಿವಿಗೆ ಬಂದಿದೆ.
ಮನೆಯ ಕಪಾಟಿನಲ್ಲಿದ್ದ ಚಿನ್ನ ಹಾಗೂ ನಗದು ಕಾಣೆಯಾಗಿರುವುದನ್ನು ಅರಿತ ಗಂಡನಿಗೆ, ಹೆಂಡತಿ ತನ್ನನ್ನು ಬಿಟ್ಟು ಪರಾರಿಯಾಗಿರುವುದು ಗೊತ್ತಾಗಿದೆ. ಬಳಿಕ ಹೆಂಡತಿಯ ಊರಿನಲ್ಲಿ ವಿಚಾರಿಸಿದಾಗ ಆಕೆಗೆ ಬೇರೊಬ್ಬ ಪುರಷನೊಂದಿಗೆ ಸಂಬಂಧವಿದ್ದು, ಆತನೊಂದಿಗೆ ಓಡಿ ಹೋಗಿರುವುದು ಗೊತ್ತಾಗಿದೆ. ಇದೀಗ ಆತ ಹೆಂಡತಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ತಲೆಮರೆಸಿಕೊಂಡಿರುವ ತಪ್ಪಿತಸ್ಥರ ಪತ್ತೆಗೆ ಇದೀಗ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × one =
Remember me
