ಮುಜಾಫರ್​ನಗರ್​ (ಉತ್ತರ ಪ್ರದೇಶ):ವೇಗವಾಗಿ ಬಂದ ಕಾರು ಮದುವೆ ಮೆರವಣಿಗೆಯತ್ತ ನುಗ್ಗಿದರಿಂದ ವರನ ಸೋದರಸಂಬಂಧಿ ಸ್ಥಳದಲ್ಲೇ ಮೃತಪಟ್ಟು, 12 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?: ವಧು ಸನ್​ರೂಫ್​ ಕಾರಿನಲ್ಲಿ ಡ್ಯಾನ್ಸ್​ ಮಾಡುತ್ತಾ ಮದುವೆ ಮಂಟಪಕ್ಕೆ ತೆರಳುತ್ತಿರುತ್ತಾಳೆ. ಕುಟುಂಬದ ಇತರೆ ಸದಸ್ಯರು ಕಾರಿನ ಸುತ್ತ ಕುಣಿಯುತ್ತಾ ಮೆರವಣಿಗೆಯಲ್ಲಿ ಸಾಗುತ್ತಿರುತ್ತಾರೆ. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬರುವ ಕಾರು ಮೆರವಣಿಗೆಯತ್ತ ನುಗ್ಗುತ್ತದೆ.
ಇದನ್ನೂ ಓದಿರಿ:ಮದುವೆಯಾಗಲು ಇಷ್ಟವಿಲ್ಲದ್ದಕ್ಕೆ ನೇಣು ಹಾಕಿಕೊಂಡಳು; ಐಒಸಿ ಇಂಜಿನಿಯರ್ ಆತ್ಮಹತ್ಯೆ
ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಘಟನೆ ಬುಧವಾರ ನಡೆದಿದ್ದು, ವಿಡಿಯೋ ಭಾರಿ ವೈರಲ್​ ಆಗುತ್ತಿದೆ. ಮೃತಪಟ್ಟ ವ್ಯಕ್ತಿಯನ್ನು ವರನ ಸೋದರಸಂಬಂಧಿ ಪ್ರಮೋದ್​ ಕುಮಾರ್​ (42) ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
ಘಟನೆ ಬಗ್ಗೆ ಮಾತನಾಡಿದ ವರ ಅಂಕುಲ್​ ಕುಮಾರ್​, ನಾವು ಪಾರ್ಕಿಂಗ್​ ಬಳಿ ನಿಂತಿದ್ದೆವು. ವಧುವಿನ ಕಾರು ಇನ್ನೇನು ಬಾಂಕ್ವೆಟ್​ ಹಾಲ್​ ಪ್ರವೇಶಿಸಬೇಕಿತ್ತು. ಅಷ್ಟರಲ್ಲೇ ವೇಗವಾಗಿ ಬಂದ ಕಾರು ಜನರತ್ತ ನುಗ್ಗಿತು. ಪರಿಣಾಮ ನನ್ನ ಸೋದರಸಂಬಂಧಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಚಾಲಕನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಮುಜಾಫರ್​ನಗರ್​ (ಉತ್ತರ ಪ್ರದೇಶ): ವೇಗವಾಗಿ ಬಂದ ಕಾರು ಮದುವೆ ಮೆರವಣಿಗೆಯತ್ತ ನುಗ್ಗಿದರಿಂದ ವರನ ಸೋದರಸಂಬಂಧಿ ಸ್ಥಳದಲ್ಲೇ ಮೃತಪಟ್ಟು, 12 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ನಡೆದಿದೆ.#Car#WeddingProcession#UttarPradesh#Groom#Bridregroompic.twitter.com/I7LJFtbKfW
— Vijayavani (@VVani4U)February 18, 2021

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
