ಲಕ್ನೋ:ಉಮೇಶ್​ ಪಾಲ್​ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಗ್ಯಾಂಗ್​ಸ್ಟಾರ್​ ಅತೀಕ್​ ಅಹ್ಮದ್​ ಪುತ್ರ ಅಸಾದ್​ ಅಹ್ಮದ್​ ಹಾಗೂ ಶಾರ್ಪ ಶೂಟರ್​ ಗುಲಾಮ್​ ಮೊಹಮ್ಮದ್​ನನ್ನು ಉತ್ತರಪ್ರದೇಶ ಪೊಲೀಸರು ಹಾಗೂ STF ಜಂಟಿ ಕಾರ್ಯಾಚರಣೆ ಮೂಲಕ ಹೊಡೆದುರುಳಿಸಿದ್ದಾರೆ.
ಇನ್ನು ಅತೀಕ್​ ಪುತ್ರ ಹಾಗೂ ಆತನ ಸಹಚರನ ಎನ್​ಕೌಂಟರ್​ ಕುರಿತು ಪರ ವಿರೋಧ ಚರ್ಚೆ ನಡೆಯುತ್ತಿದ್ದು ಕೆಲವರು ಪೊಲಿಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರೆ. ಕೆಲವರು ಇದು ನಕಲಿ ಎನ್​ಕೌಂಟರ್​ ಎಂದು ಹೇಳಿದ್ದಾರೆ.
ಇನ್ನು ಫೆಬ್ರವರಿ ತಿಂಗಳಲ್ಲಿ ನಡೆದ ಉತ್ತರಪ್ರದೇಶ ಬಜೆಟ್​ ಅಧಿವೇಶನದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಅಣಗಳಲ್ಲಿ ವೈರಲ್​ ಆಗಿದ್ದು ಮಾಫಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ವಿಪಕ್ಷ ನಾಯಕ ಅಖಿಲೇಶ್​ ಯಾದವ್​ಗೆ ಹೇಳುತ್ತಿರುವುದು ಕಂಡು ಬರುತ್ತದೆ.
Every word is turning out to be true…Yogi ji Roxxx ❤️❤️pic.twitter.com/55wE4QiWn2

ಆರೋಪಿ ಸ್ಥಾನದಲ್ಲಿರುವ ಅತೀಕ್​ ಅಹ್ಮದ್​ ಈ ಹಿಂದೆ ಸಮಾಜವಾದಿ ಪಕ್ಷದವರು ಎಂದು ಮರೆಯಬಾರದು. ನಾವು ಮಾಫಿಯಾದವರ ಬೆನ್ನು ಮೂಲೆ ಮುರಿಯುತ್ತಿದ್ದೇವೆ ಅಷ್ಟೇ. ಆ ವ್ಯಕ್ತಿ ಉತ್ತರಪ್ರದೇಶದಲ್ಲಿ ಮಾಫಿಯಾಗೆ ಒಂದು ತರಹದ ಗಾಡ್​​ಫಾದರ್​ ಇದ್ದ ಹಾಗೆ ಅವರ ರಕ್ತದಲ್ಲಿಯೇ ಅಪರಾಧವಿದೆ. ನಾವು ಮಾಫಿಯಾವನ್ನು ಬುಡ ಸಮೇತ ಕಿತ್ತುಹಾಕುವುದರಲ್ಲಿ ಬೇರೆ ಮಾತಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ:VIDEO| ಕಳ್ಳತನ ಶಂಕೆ; ಮ್ಯಾನೇಜರ್​ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಂದ ಮಾಲೀಕ
ಇನ್ನು ಅತೀಕ್​ ಅಹ್ಮದ್​ ಪುತ್ರ ಅಸಾದ್​ ಹತ್ಯೆ ಕುರಿತು ಪರ ವಿರೋಧ ಚರ್ಚೆಯಾಗುತ್ತಿದ್ದು ಕೆಲವರು ಪೊಲೀಸರ ನಡೆಯನ್ನು ಶ್ಲಾಘಿಸಿದರೆ ಇನ್ನು ಕೆಲವರು ಇದು ನಕಲಿ ಎಂದು ಆರೋಪಿಸಿದ್ದಾರೆ.
ಇನ್ನು ಅಸಾದ್​ ಎನ್ಕೌಂಟರ್​ ಕುರಿತು ಪ್ರತಿಕ್ರಿಯಿಸಿರುವ ಉಮೇಶ್​ ಪಾಲ್​ ಪತ್ನಿ ಮತ್ತು ತಾಯಿ ತಮ್ಮ ಪತಿ ಹಾಗೂ ಮಗನ ಸಾವಿಗೆ ನ್ಯಾಯ ದೊರೆತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ವಿಪಕ್ಷ ನಾಯಕ ಅಖಿಲೇಶ್​ ಯಾದವ್​ ಇದು ನಕಲಿ ಎನ್​ಕೌಂಟರ್​ ಆಗಿದ್ದು ಆಡಳಿತ ಪಕ್ಷವು ಜನತೆಯ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ಎಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
झूठे एनकाउंटर करके भाजपा सरकार सच्चे मुद्दों से ध्यान भटकाना चाह रही है। भाजपाई न्यायालय में विश्वास ही नहीं करते हैं। आजके व हालिया एनकाउंटरों की भी गहन जाँच-पड़ताल हो व दोषियों को छोड़ा न जाए। सही-गलत के फ़ैसलों का अधिकार सत्ता का नहीं होता है।भाजपा भाईचारे के ख़िलाफ़ है।
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + twenty =
Remember me
