ಲಖನೌ:ಕಳೆದ ವರ್ಷದಂತೆ ಈ ವರ್ಷವು ಕೂಡ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಾಬಂಧನ ಪ್ರಯುಕ್ತ ಆ ರಾಜ್ಯದ ಎಲ್ಲಾ ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.
ಆಗಸ್ಟ್ 22 ರಂದು ಆಚರಿಸುವ ರಕ್ಷಾಬಂಧನ ಎನ್ನುವುದು ಸಹೋದರ-ಸಹೋದರಿಯರ ಭಾಂದವ್ಯದ ಹಬ್ಬ. ಈ ದಿನ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (upsrtc) ಯಾವುದೇ ಬಸ್‌ಗಳಲ್ಲಿ ಆ ರಾಜ್ಯದ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾಗಿದೆ. ಈ ಕೊಡುಗೆ ಆ. 21ರ ಮಧ್ಯರಾತ್ರಿಯಿಂದ 22ರ ಮಧ್ಯರಾತ್ರಿಯವರೆಗೆ ಇರಲಿದೆ. ಉಚಿತ ಪ್ರಯಾಣದ ವೇಳೆ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕರೊನಾ ಮಹಾಮಾರಿ 3ನೇ ರೂಪ ತೋರುತ್ತಿದ್ದು, ಈ ಕಾರಣದಿಂದಾಗಿ ಯಾರೂ ಕೂಡ ಅದ್ದೂರಿಯಾಗಿ ಸಂಭ್ರಮಾಚರಣೆ ಮಾಡುವ ಬದಲು ಮನೆಯಲ್ಲಿಯೇ ಸರಳವಾಗಿ ಆಚರಿಸಿ ಎಂದು ಸಿಎಂ ಮನವಿ ಮಾಡಿದ್ದಾರೆ.(ಏಜೆನ್ಸೀಸ್)
ಏರ್​ಲಿಫ್ಟ್ ಮೂಲಕ ಅಫ್ಘಾನ್​​ನಿಂದ ಭಾರತಕ್ಕೆ ಬಂದ ‘ಸ್ನೈಫರ್ ಡಾಗ್ಸ್’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 9 =
Remember me
