ಲಖನೌ:ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಯೂಟ್ಯೂಬರ್‌ಗಳು ಮತ್ತು ರೀಲ್ಸ್​ ಮಾಡುವವರನ್ನು ಬೆಂಬಲಿಸುವ ಘೋಷಣೆ ಮಾಡಿದೆ.
ಇದನ್ನೂ ಓದಿ:ಸೆ9ಕ್ಕೆ ಜಿಎಸ್ಟಿ ಕೌನ್ಸಿಲ್ ಸಭೆ..ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಯಾಗಲಿದೆಯೇ? ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು..
ಸರ್ಕಾರವು ಹೊಸ ಸಾಮಾಜಿಕ ಮಾಧ್ಯಮ ನೀತಿಯನ್ನು ಜಾರಿಗೊಳಿಸಿದ್ದು, ಹಣಕಾಸಿನ ಉತ್ತೇಜನ ನೀಡಲು ಉದ್ದೇಶಿಸಿದೆ. ಯೂಟ್ಯೂಬರ್‌ ಪ್ರಭಾವಿಗಳಿಗೆ 8 ಲಕ್ಷ ರೂ., ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್​ಗಳಿಗೆ 5 ಲಕ್ಷ ರೂ. ನೀಡಲು ಉದ್ದೇಶಿಸಲಾಗಿದೆ. ಆದರೆ ಇದಕ್ಕೆ ಸರ್ಕಾರ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಸರ್ಕಾರದ ಪರ ಮತ್ತು ಸಾರ್ವಜನಿಕರ ಹಿತಾಸಕ್ತಿಗಾಗಿ ಸಾಮಾಜಿಕ ಮಾಧ್ಯಮಲ್ಲಿ ಪ್ರಚಾರ ಮಾಡಬೇಕಾಗುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಜನರ ಕಲ್ಯಾಣ, ಪ್ರಯೋಜನಕಾರಿ ಯೋಜನೆಗಳು ಮತ್ತು ಸಾಧನೆಗಳ ಮಾಹಿತಿಯನ್ನು ಸಾಮಾಜಿಕ ವೇದಿಕೆಯಲ್ಲಿ ಪೋಸ್ಟ್​ಗಳಳನ್ನು ಹಂಚಿಕೊಳ್ಳಬೇಕು. ವಿಷಯ, ವೀಡಿಯೋ, ಟ್ವೀಟ್‌ಗಳು, ಪೋಸ್ಟ್‌ಗಳು ಮತ್ತು ರೀಲ್‌ಗಳನ್ನು ಹಂಚಿಕೊಳ್ಳಲು ನೀತಿಯು ಅನುಮತಿಸುತ್ತದೆ.
ರಾಷ್ಟ್ರ ವಿರೋಧಿ ಪೋಸ್ಟ್‌ಗಳಿಗೆ ಶಿಕ್ಷೆ:ಮಾಹಿತಿ ಪ್ರಚಾರಕ್ಕೆ ಜನಪ್ರಿಯ ವೇದಿಕೆಗಳಾದ ಫೇಸ್​ಬುಕ್​, ಇನ್​ಸ್ಟಾಗ್ರಾಮ್​ ಮತ್ತು ಯೂಟೂಬ್​ ಅನ್ನು ನಿಯೋಜಿಸಲಾಗುವುದು. ಇದರ ಜೊತೆಗೆ, ತಪ್ಪು ಮಾಹಿತಿ ಅಂದರೆ, ಆಕ್ಷೇಪಾರ್ಹ ಪೋಸ್ಟ್‌ಗಳು ಅಥವಾ ಮೇಲ್ನೋಟಕ್ಕೆ ‘ರಾಷ್ಟ್ರವಿರೋಧಿ’ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದರೆ ಅಪರಾಧಿಗೆ ಮೂರು ವರ್ಷಗಳವರೆಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸುವ ಬಗ್ಗೆಯೂ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಇದರಲ್ಲಿ ಪ್ರಭಾವಿಗಳು, ಖಾತೆದಾರರು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಮಾಲೀಕರಿಗೆ ಪಾವತಿ ನಿರ್ಬಂಧಗಳನ್ನು ಸಹ ನಿರ್ದಿಷ್ಟಪಡಿಸುತ್ತದೆ. ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಕ್ರಮವಾಗಿ 5 ಲಕ್ಷ ರೂ., 4 ಲಕ್ಷ ರೂ ಮತ್ತು 3 ಲಕ್ಷ ರೂ. ಗಳ ಗರಿಷ್ಠ ಮಾಸಿಕ ಪಾವತಿಸಲಾಗುತ್ತದೆ.
ಅದೇ ರೀತಿ ಯೂಟ್ಯೂಬರ್‌ಗಳಿಗೆ ವೀಡಿಯೋ, ಕಿರುಚಿತ್ರಗಳು ಮತ್ತು ಪಾಡ್‌ಕಾಸ್ಟ್‌ಗಳಿಗೆ ಕ್ರಮವಾಗಿ 8 ಲಕ್ಷ ರೂ., 7 ಲಕ್ಷ ರೂ., 6 ಲಕ್ಷ ರೂ., ಮತ್ತು 4 ಲಕ್ಷ ರೂ. ಪಾವತಿ ಸಲಾಗುತ್ತದೆ. ಸರ್ಕಾರದ ಈ ನಿರ್ಧಾರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಸ್ವಾಗತಿಸಿದ್ದಾರೆ.
ಯುಪಿಯಲ್ಲಿ ಡಿಜಿಟಲ್ ಮೀಡಿಯಾ ನೀತಿ: ಯೂಟ್ಯೂಬರ್‌ಗಳಿಗೆ 8 ಲಕ್ಷ, ರೀಲ್ಸ್​ಗೆ 5 ಲಕ್ಷ ನೆರವು..ರಾಷ್ಟ್ರವಿರೋಧಿ ಪೋಸ್ಟ್‌ಗೆ ಶಿಕ್ಷೆ ಏನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
