ಆಗ್ರಾ:ಸೆಟ್​ ಟಾಪ್​ ಬಾಕ್ಸ್​ ರೀಚಾರ್ಜ್​ ಮಾಡುವ ನೆಪದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ 38 ವರ್ಷದ ದಂತ ವೈದ್ಯೆಯನ್ನು ಹಾಡಹಗಲಲ್ಲೇ ಕೊಲೆ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಡಾ. ನಿಶಾ ಸಿಂಘಾಲ್​ ಕೊಲೆಯಾದ ದಂತ ವೈದ್ಯೆ.​ ಚಾಕುವಿನಿಂದ ದಾಳಿ ಮಾಡಿದ ದುಷ್ಕರ್ಮಿ ನಿಶಾ ಅವರ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಇದೇ ವೇಳೆ ನಿಶಾ ಅವರ 8 ಮತ್ತು 4 ವರ್ಷದ ಇಬ್ಬರು ಮಕ್ಕಳು ಮನೆಯ ಮತ್ತೊಂದು ಕೋಣೆಯಲ್ಲಿದ್ದರು. ತಾಯಿಯ ಕೊಲೆಯಾದಾಗ ಮನೆಯಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ಸಹ ಅವರಿಗೆ ಇರಲಿಲ್ಲ. ಬಳಿಕ ದುಷ್ಕರ್ಮಿ ಮಕ್ಕಳ ಮೇಲೂ ಹಲ್ಲೆ ಮಾಡಿದ್ದಾನೆ. ಆದರೆ, ಅದೃಷ್ಟವಶಾತ್​ ಅವರು ಬದುಕುಳಿದಿದ್ದಾರೆ.
ನಿಶಾ ಅವರ ಪತಿ ಅಜಯ್​ ಸಿಂಘಾಲ್​ ಓರ್ವ ಸರ್ಜನ್​ ಆಗಿದ್ದು, ಘಟನೆ ವೇಳೆ ಅವರು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಆಧರಿಸಿ, ಆರೋಪಿಯನ್ನು ಶನಿವಾರ ಬೆಳಗ್ಗೆ ಬಂಧಿಸಲಾಗಿದೆ.
ಇದನ್ನೂ ಓದಿ:5 ವರ್ಷ ನಿಗೂಢವಾಗಿದ್ದ ಯುವತಿ ನಾಪತ್ತೆ ಪ್ರಕರಣ ರಹಸ್ಯ ಬಯಲು: ಕೊಲೆಗಾರ ಪತಿ ಸಿಕ್ಕಿ ಬಿದ್ದಿದ್ದೆ ರೋಚಕ!
ಕೇಬಲ್​ ಟಿವಿ ಟೆಕ್ನಿಶಿಯನ್ ಹೆಸರೇಳಿಕೊಂಡು ಆರೋಪಿಯು ನಿಶಾ ಅವರ ಮನೆಗೆ ನುಗ್ಗಿದ್ದಾನೆ.​ ಬಳಿಕ ಮನೆಯಲ್ಲಿ ಕಳ್ಳತನ ಮಾಡಲು ಹುಡುಕಾಡಿದ್ದಾನೆ. ನಿಶಾರನ್ನು ಕೊಲೆ ಮಾಡಿ ಅವರ ಮಕ್ಕಳ ಮೇಲೆ ಹಲ್ಲೆ ಮಾಡಿದ ಬಳಿಕವೂ ಸುಮಾರು ಒಂದು ಗಂಟೆವರೆಗೂ ಆರೋಪಿ ಮನೆಯನ್ನು ಶೋಧಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ್ರಾದ ಜನನಿಬಿಡ ಪ್ರದೇಶದಲ್ಲಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿರುವ ಘಟನೆಯಿಂದ ಇಡೀ ರಾಜ್ಯ ಬೆಚ್ಚಿಬಿದ್ದಿದೆ. ಉತ್ತರ ಪ್ರದೇಶ ಸರ್ಕಾರ ಭ್ರಷ್ಟ ಅಧಿಕಾರಿಗಳ ಸಮರ್ಥನೆ ಮತ್ತು ಪ್ರತಿಪಕ್ಷ ನಾಯಕರ ವಿರುದ್ಧ ಸುಳ್ಳು ದಾಖಲೆ ಸೃಷ್ಟಿಸುವಲ್ಲಿ ಬಿಜಿಯಾಗಿದೆ. ಟಿವಿ ಜಾಹಿರಾತುಗಳ ಮೇಲೆ ಗಮನಹರಿಸದೇ, ಅಪರಾಧ ಚಟುವಟಿಕೆ ತಗ್ಗಿಸುವ ಕಡೆ ಗಮನಹರಿಸಿ ಎಂದು ಸಮಾಜವಾಗಿ ಪಕ್ಷದ ಮುಖ್ಯಸ್ಥ ಟ್ವೀಟ್​ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ.(ಏಜೆನ್ಸೀಸ್​)
ಈ ಗುಂಪೇನಾದರೂ ರಸ್ತೆಯಲ್ಲಿ ಸಿಕ್ಕಿದರೆ ಮುಗಿಯಿತು ಕಥೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + five =
Remember me
