ನೋಯ್ಡಾ: ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದ ಅಪರಾಧಿ ಕುಖ್ಯಾತ ಪಾತಕಿ ಅಬು ಸಲೇಂನ ಅಕ್ರಮ ಆಸ್ತಿಗಳ ವಹಿವಾಟು ನೋಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಸ್ಪೆಷಲ್ ಟಾಸ್ಕ್​ ಫೋರ್ಸ್(ಎಸ್​ಟಿಎಫ್​) ತಂಡ ಬಂಧಿಸಿದೆ.
ಬಂಧಿತನನ್ನು ಗಜೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ಕುಖ್ಯಾತ ಗ್ಯಾಂಗ್​ಸ್ಟರ್​ ಖಾನ್ ಮುಬಾರಕ್​ನ ಆಪ್ತ ಕೂಡ ಆಗಿದ್ದ. ಗಜೇಂದ್ರ ಸಿಂಗ್​ನ್ನು ಎಸ್​ಟಿಎಫ್​ ತಂಡ ಮುಂಬೈನಲ್ಲಿ ಬುಧವಾರ ತಡರಾತ್ರಿ ಬಂಧಿಸಿದೆ. ಈತ ದೆಹಲಿಯ ಎನ್​ಸಿಟಿ ಪ್ರದೇಶದಲ್ಲಿ ಅಬುಸಲೇಂನ ಅಕ್ರಮ ಆಸ್ತಿಗಳ ವಹಿವಾಟು ನೋಡಿಕೊಳ್ಳುತ್ತಿದ್ದ ಎಂದು ಎಎಸ್​ಪಿ ರಾಜಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಇದನ್ನೂ ಓದಿ:10 ವರ್ಷದ ಬಾಲಕ 30 ಸೆಕೆಂಡ್​ಗಳಲ್ಲಿ ಎಗರಿಸಿದ್ದು ಎಷ್ಟು ಲಕ್ಷ ರೂ. ಗೊತ್ತಾ?
2014ರಲ್ಲಿ ಈತ ದೆಹಲಿ ಮೂಲ ವ್ಯಾಪಾರಿಯಿಂದ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ವಹಿವಾಟಿನಲ್ಲಿ 1.8 ಕೋಟಿ ರೂಪಾಯಿ ಪಡೆದುಕೊಂಡು ವಂಚಿಸಿದ್ದ. ಹಣ ವಾಪಸ್ ಕೇಳಿದ್ದ ವ್ಯಾಪಾರಿಯ ಮೇಲೆ ನೋಯ್ಡಾದ ಸೆಕ್ಟರ್ 18ರಲ್ಲಿ ಖಾನ್ ಮುಬಾರಕ್​ನ ಕಡೆಯವರು ಗುಂಡು ಹಾರಿಸಿದ್ದರು. ಕಾರಿನಲ್ಲಿದ್ದ ವ್ಯಾಪಾರಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಆ ಸಂದರ್ಭದಲ್ಲಿ ಶೂಟರ್​ಗಳಿಗೆ ಮಿಶ್ರಾ 10 ಲಕ್ಷ ರೂಪಾಯಿ ಪಾವತಿಸಿದ್ದ. ಹಣದ ವಹಿವಾಟಿನ ರಹಸ್ಯ ತನಿಖಾ ಸಂಸ್ಥೆಗೆ ಗೊತ್ತಾಗಿತ್ತು. ಈ ಜಾಡನ್ನು ಬೆನ್ನತ್ತಿದಾಗ ಗಜೇಂದ್ರ ಸಿಂಗ್​ನ ಉಳಿದ ವಿಚಾರಗಳು ಬಹಿರಂಗವಾದವು. ಆತ ಅಬು ಸಲೇಂ ಮತ್ತು ಖಾನ್ ಮುಬಾರಕ್ ಪರವಾಗಿ ಅವರ ಹಣವನ್ನು ದೆಹಲಿ-ಎನ್​ಸಿಆರ್ ಪ್ರದೇಶಗಳಲ್ಲಿ ವಿವಿಧ ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡಿದ್ದ. ನೋಯ್ಡಾ ಪೊಲೀಸ್ ಠಾಣೆಯಲ್ಲಿ ಸಿಂಗ್​ ವಿರುದ್ಧ ಕೆಲವು ಪ್ರಕರಣಗಳು ಬಾಕಿ ಇದ್ದು, ಈಗ ಅವುಗಳ ಮುಂದಿನ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಎಎಸ್​ಪಿ ಮಿಶ್ರಾ ತಿಳಿಸಿದ್ದಾರೆ. (ಏಜೆನ್ಸೀಸ್)
ಪತ್ರಿಕೆ ಮಾಲೀಕನ ಬಂಧನ: ರಾಶಿ ರಾಶಿ ಮೂಳೆ, ಅಶ್ಲೀಲ ಫೋಟೋ, ಸಿ.ಡಿ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
