ಲಖನೌ :ವಿಶ್ವ ಜನಸಂಖ್ಯಾ ದಿನದ ಸಂದರ್ಭದಲ್ಲಿ ಇಂದು ಉತ್ತರ ಪ್ರದೇಶ ಸರ್ಕಾರವು ತನ್ನ ಹೊಸ ಜನಸಂಖ್ಯಾ ನೀತಿಯನ್ನು ಬಿಡುಗಡೆ ಮಾಡಿತು. ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ 2021 ರಿಂದ 2030 ರವರೆಗೆ ನಿರ್ದಿಷ್ಟ ಸಾಧನೆಯ ಪಥವನ್ನು ರೂಪಿಸಿರುವ ಈ ನೀತಿಯಲ್ಲಿ, 2026 ರೊಳಗೆ ಜನನ ದರವನ್ನು 2.1 ಕ್ಕೆ ಮತ್ತು 2030 ರೊಳಗೆ 1.9 ಕ್ಕೆ ಇಳಿಸುವ ಗುರಿಯನ್ನು ಪ್ರಚುರಪಡಿಸಲಾಗಿದೆ.
ಹಾಲಿ ರಾಜ್ಯದಲ್ಲಿನ ಫರ್ಟಿಲಿಟಿ ರೇಟ್ ಶೇ. 2.7 ಇದ್ದು, ಹೆಚ್ಚುತ್ತಿರುವ ಜನಸಂಖ್ಯೆಯು ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅಡಚಣೆಯಾಗುತ್ತದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. “ಜನಸಂಖ್ಯೆಯ ಏರಿಕೆಯು ಬಡತನಕ್ಕೂ ಸಂಬಂಧಿಸಿದೆ. ಪ್ರತಿಯೊಂದು ಸಮುದಾಯವನ್ನು ಜನಸಂಖ್ಯಾ ನೀತಿ 2021-2030 ರಲ್ಲಿ ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಜನಸಂಖ್ಯೆ ನಿಯಂತ್ರಿಸಲು ಎರಡು ಮಕ್ಕಳ ನೀತಿಯನ್ನು ಅನುಸರಿಸಬೇಕು, ಜೊತೆಗೆ ಎರಡು ಮಕ್ಕಳ ನಡುವೆ ಅಂತರವನ್ನು ಪಾಲಿಸಬೇಕು” ಎಂದಿದ್ದಾರೆ.
ಇದನ್ನೂ ಓದಿ:ಎರಡು ಮಕ್ಕಳು ಹೊಂದಿದವರಿಗೆ ಹೆಚ್ಚಿನ ಇಂಕ್ರಿಮೆಂಟು, ಗೃಹ ಖರೀದಿ ಸೌಕರ್ಯ!
ಯುಪಿ ಸರ್ಕಾರವು ಜನಸಂಖ್ಯಾ ನೀತಿಯನ್ನು ರೂಪಿಸುವ ಕಾರ್ಯವನ್ನು 2018 ರಿಂದ ಕೈಗೆತ್ತಿಕೊಂಡಿದೆ. ಎರಡೇ ಮಕ್ಕಳಿರುವ ದಂಪತಿಗಳಿಗೆ ವಿವಿಧ ಸವಲತ್ತುಗಳನ್ನು ನೀಡುವ ಮತ್ತು ಎರಡಕ್ಕಿಂತ ಹೆಚ್ಚು ಮಕ್ಕಳುಳ್ಳ ಜನರಿಗೆ ಸವಲತ್ತುಗಳನ್ನು ನಿರ್ಬಂಧಿಸುವ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಕೂಡ ರಾಜ್ಯದ ಕಾನೂನು ಆಯೋಗ ಈಗಾಗಲೇ ಸಿದ್ಧಪಡಿಸಿದೆ.
ಜನಸಂಖ್ಯಾ ನಿಯಂತ್ರಣಕ್ಕೆ ಫ್ಯಾಮಿಲಿ ಪ್ಲಾನಿಂಗ್​ ವಿಧಾನಗಳ ಬಗ್ಗೆ ಅರಿವು ಮೂಡಿಸುವುದು, ಡಿಜಿಟಲ್​ ಪ್ರಕ್ರಿಯೆ ಬಳಸಿಕೊಂಡು ಕಡ್ಡಾಯವಾಗಿ ಗರ್ಭಧಾರಣೆ, ಹೆರಿಗೆ, ಜನನ ಮತ್ತು ಮರಣಗಳ ನೋಂದಣಿ ಮಾಡಿಸುವುದು ಮುಂತಾದ ಕ್ರಮಗಳನ್ನು ಈ ನೀತಿ ಒಳಗೊಂಡಿದೆ. ಹಿರಿಯ ನಾಗರೀಕರ ರಕ್ಷಣೆಗೆ ಹೆಚ್ಚಿನ ಸೌಲಭ್ಯಗಳು, 11 ರಿಂದ 19 ವರ್ಷದ ವಯಸ್ಸಿನವರಿಗೆ ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕ ಆಹಾರ ಒದಗಿಸುವುದು ಮತ್ತು ಶಾಲೆಗಳಲ್ಲಿ ಹೆಲ್ತ್​ ಕ್ಲಬ್​ಗಳನ್ನು ಆರಂಭಿಸುವುದು ಈ ನೀತಿಯಲ್ಲಿ ಪ್ರಸ್ತಾಪಗೊಂಡಿರುವ ಇತರ ಕ್ರಮಗಳು.(ಏಜೆನ್ಸೀಸ್)
ವಿಶ್ವವಿಖ್ಯಾತ ದೊಡ್ಡ ಆಲದ ಮರ ವೀಕ್ಷಣೆಗೆ ಪ್ರವಾಸಿಗರ ದಂಡು

ನಟ ರಾಮ್ ಕಪೂರ್ ಹೊಸ ಕಾರು – ಪಾರ್ಶೆ 911 ಕಾರ್ರೆರಾ ಎಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nineteen =
Remember me
