ಲಖನೌ:ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ, ದುಷ್ಕರ್ಮಿಗಳ ಕಿರುಕುಳ ಕಾರಣದಿಂದಾಗಿ ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯ ವಯಸ್ಸು 17. ಶಾಲೆಯನ್ನು ಮುಗಿಸಿ ಮನೆಗೆ ಸೈಕಲ್​ನಲ್ಲಿ ಹಿಂದಿರುಗುವಾಗ ಮೂವರು ದುಷ್ಕರ್ಮಿಗಳು ಆಕೆಯ ದುಪಟ್ಟವನ್ನು ಎಳೆದು ಚುಡಾಯಿಸಲು ಪ್ರಯತ್ನಿಸಿದ್ದಾರೆ. ಆದರೆ, ದುಪಟ್ಟ ಎಳೆದಿದ್ದರಿಂದ ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದು ಕೂಡಲೇ ಆಕೆಯ ಮೇಲೆ ಬೈಕ್​ ಒಂದು ಹರಿದಿದೆ. ಉತ್ತರ ಪ್ರದೇಶದ ಅಂಬೇಡ್ಕರ್​ ನಗರದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ದುಪಟ್ಟ ಎಳೆದ ಕೂಡಲೇ ಸೈಕಲ್​ ನಿಯಂತ್ರಣ ಕಳೆದುಕೊಂಡ ಹುಡುಗಿ ಕೆಳಗೆ ಬೀಳುತ್ತಾಳೆ. ಬಿದ್ದ ಕೂಡಲೇ ದುಷ್ಕರ್ಮಿಗಳಿದ್ದ ಬೈಕ್​ ಆಕೆಯ ಮೇಲೆ ಹರಿದು ಹೋಗುತ್ತದೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಖಚಿತಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ನಂಬರ್ ಪ್ಲೇಟ್ ಬುಕ್ಕಿಂಗ್​ಗೆ ಕಮೀಷನ್ ವಸೂಲಿ!; ಎಚ್ಚೆಸ್ಸಾರ್ಪಿ ಹಾಕಿಸಬೇಕೋ ಬೇಡವೋ ಗೊಂದಲ; ಅರ್ಹತೆ ಇಲ್ಲದ ಕಂಪನಿಗಳಿಗೆ ಟೆಂಡರ್ ಆರೋಪ
ಆರೋಪಿಗಳ ವಿರುದ್ಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಸಂಜೆ 3.30ರ ಸುಮಾರಿಗೆ ಶಾಲೆಯಿಂದ ವಾಪಸ್​ ಬರುವಾಗ ಮೂವರು ಚುಡಾಯಿಸಿದ್ದಾರೆ. ಶಹನವಾಜ್​ ಮತ್ತು ಅರ್ಬಾಜ್​ ಇಬ್ಬರು ಚುಡಾಯಿಸಲು ಯತ್ನಿಸಿದರೆ, ಮತ್ತೊಬ್ಬ ದುಷ್ಕರ್ಮಿ ಫೈಸಲ್​ ಕೆಳಗೆ ಬಿದ್ದ ವಿದ್ಯಾರ್ಥಿನಿ ಮೇಲೆ ಬೈಕ್​ ಹರಿಸಿದ್ದಾನೆ ಎಂದು ವಿದ್ಯಾರ್ಥಿನಿಯ ತಂದೆ ದಾಖಲಿಸಿರುವ ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ.
ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದೂರಿನಲ್ಲಿ ಹೆಸರಿಸಲಾದ ಆರೋಪಿಗಳನ್ನು ಬಂಧಿಸಲಾಗಿದೆ. ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ರೈ ತಿಳಿಸಿದ್ದಾರೆ.(ಏಜೆನ್ಸೀಸ್​)
ಜನಪ್ರಿಯತೆ ಅಭಿವೃದ್ಧಿಯ ಮೋದಿನಾಮಿಕ್ಸ್

ನಂಬರ್ ಪ್ಲೇಟ್ ಬುಕ್ಕಿಂಗ್​ಗೆ ಕಮೀಷನ್ ವಸೂಲಿ!; ಎಚ್ಚೆಸ್ಸಾರ್ಪಿ ಹಾಕಿಸಬೇಕೋ ಬೇಡವೋ ಗೊಂದಲ; ಅರ್ಹತೆ ಇಲ್ಲದ ಕಂಪನಿಗಳಿಗೆ ಟೆಂಡರ್ ಆರೋಪ

ಅಪರಿಚಿತರ ಎದುರು ಇರಲಿ ಎಚ್ಚರ: ಆ ಕ್ಷಣ ಅಂಕಣ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − three =
Remember me
