ಉತ್ತರಪ್ರದೇಶ:ವರದಕ್ಷಿಣೆ, ಭಿನ್ನಾಭಿಪ್ರಾಯ ಸೇರಿದಂತೆ ಕೆಲ ಕಾರಣಗಳಿಂದ ಅಂತಿಮ ಹಂತದಲ್ಲಿ ಕೆಲ ಮದುವೆಗಳು ಅಂತಿಮ ಹಂತದಲ್ಲಿ ಮುರಿದು ಬಿದ್ದ ಸುದ್ದಿ ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ತಾನು ವರಿಸುತ್ತಿರುವ ಹುಡುಗಿ ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಾಳೆ ಎಂಬ ಕಾರಣಕ್ಕೆ ವರ ತನ್ನ ಮದುವೆ ರದ್ದುಗೊಳಿಸಿದ್ದಾನೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ತಿರ್ವಾ ಕೊಟ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಾಸ್ತವದಲ್ಲಿ ನಿರೀಕ್ಷಿಸಿದಷ್ಟು ವರದಕ್ಷಿಣಗೆ ಲಭಿಸಿಲ್ಲ ಎಂಬ ಕಾರಣಕ್ಕೆ ವರ ಮದುವೆ ಬೇಡವೆಂದು ಹೇಳಿದ್ದಾನೆ. ಆದರೆ ಎಲ್ಲರ ಮುಂದೆ ವಧು ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಾಳೆ. ಹೀಗಾಗಿ ವಿವಾಹ ಆಗಲು ಹಿಂದೇಟು ಹಾಕಿದ್ದಾನೆ ಎಂದು ಹುಡುಗಿಯ ತಂದೆ ಆರೋಪಿಸಿದ್ದಾರೆ.
ಇದನ್ನೂ ಓದಿ:ಬಾಗಲಕೋಟೆ | ಸಾಲದ ಹಣ ಹಿಂತಿರುಗಿಸದೆ ಸತಾಯಿಸಿದ ಸ್ನೇಹಿತರು; ಮನನೊಂದು ವಿಷ ಸೇವಿಸಿದ ಪಶುವೈದ್ಯ
ಹುಡುಗನ ಕಡೆಯವರು ವಧುವನ್ನು ತಮ್ಮ ಕುಟುಂಬಕ್ಕೆ ಸೇರ್ಪಡೆಗೊಳಿಸುವ ಶಾಸ್ತ್ರ ನಡೆದ ಬಳಿಕ, ವರ ತನ್ನ ನಿರ್ಧಾರವನ್ನು ಬಹಿರಂಗ ಪಡಿಸಿದ್ದಾನೆ. ವರನ ನಿರ್ಧಾರದಿಂದ ಹುಡುಗಿಯ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ.
ಹುಡುಗಿಯ ತಂದೆ ನೀಡಿದ ದೂರಿನಲ್ಲಿ, ತನ್ನ ಮಗಳು ಸೋನಿಯಳಾ ಮದುವೆ ಬಾಗನ್ವಾ ಗ್ರಾಮದ ರಾಮಶಂಕರ್ ಎಂಬುವರ ಮಗ ಸೋನು ಜೊತೆ ನಿಶ್ಚಯಿಸಲಾಗಿತ್ತು. ಈ ಹಿಂದೆ ವರನಿಗಾಗಿ 60,000 ರೂಪಾಯಿ ಖರ್ಚು ಮಾಡಿದ್ದೇನೆ. ಅಲ್ಲದೆ 15,000 ರೂಪಾಯಿ ಮೌಲ್ಯದ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದೇನೆ. ಇದಾದ ಬಳಿಕ ವರನ ಮನೆಯವರು ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಹೆಚ್ಚಿನ ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ವರನಿಗೆ ತಿಳಿಸಿದ್ದರಿಂದ ದ್ವಿತೀಯ ಪಿಯುಸಿ ಅಂಕದ ನೆಪವೊಂಡಿ ಮದುವೆಗೆ ನಿರಾಕರಿಸಿದ್ದಾನೆ ಎಂದು ಉಲ್ಲೇಖವಾಗಿದೆ.
ಸದ್ಯ ವಿಚಾರಣೆ ನಡೆಸಿರುವ ಪೊಲೀಸರು ಎರಡೂ ಕುಟುಂಬಗಳನ್ನು ಠಾಣೆಗೆ ಕರೆಯಿಸಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − three =
Remember me
