ಬಲಿಯಾ:ಮೂವರು ದುಷ್ಕರ್ಮಿಗಳು ಪತ್ರಕರ್ತರೊಬ್ಬರನ್ನು ಬೆನ್ನಟ್ಟಿ ಹೋಗಿ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಸ್ಥಳೀಯ ಪತ್ರಕರ್ತ ರತನ್​ ಸಿಂಗ್​ (42) ಮೃತ ದುರ್ದೈವಿ. ಆಸ್ತಿ ವಿವಾದವೇ ಕೊಲೆ ಕಾರಣ ಎಂದು ತಿಳಿದುಬಂದಿದ್ದು, ಗುಂಡು ಹಾರಿಸಿ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ರಾಜಧಾನಿ ಲಖನೌದಿಂದ 260 ಕಿ.ಮೀ ದೂರವಿರುವ ಪೂರ್ವ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ರತನ್​ ಸಿಂಗ್​ ಸ್ಥಳೀಯ ಖಾಸಗಿ ನ್ಯೂಸ್​ ಚಾನೆಲ್​ನಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ:ದೇವರ ಕೋಣೆಯಲ್ಲಿತ್ತು ಮಗುವಿನ ಶವ: ತಂದೆ-ತಾಯಿಯಿಂದಲೇ ಕೃತ್ಯ, ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!
ಬಲಿಯಾ ಜಿಲ್ಲೆಯ ನಗರ ಭಾಗದಲ್ಲಿ ಸಿಂಗ್ ನೆಲೆಸಿದ್ದರು.​ ಇವರ ಕುಟುಂಬ ಮಾತ್ರ ಹಳ್ಳಿಯಲ್ಲಿಯೇ ವಾಸಿಸುತ್ತಿತ್ತು. ಅಲ್ಲದೆ, ಆರೋಪಿಯೊಂದಿಗೆ ಕಳೆದ ಕೆಲ ವರ್ಷಗಳಿಂದ ಜಮೀನು ವಿವಾದದಲ್ಲಿ ಸಿಲುಕಿತ್ತು. ವಿವಾದ ಸಂಬಂಧ ಮಾತನಾಡಲು ತಮ್ಮ ಹಳ್ಳಿ ತೆರಳುವಾಗ ಬೆನ್ನಟ್ಟಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಳ್ಳಲು ಸಿಂಗ್​ ಯತ್ನಿಸಿದಾದರೂ ಸಫಲವಾಗದೇ ಗುಂಡಿನ ದಾಳಿಗೆ ಸಿಂಗ್​ ಪ್ರಾಣ ಬಿಟ್ಟಿದ್ದಾರೆ.
ಆರೋಪಿ ಜಮೀನಿನ ಸುತ್ತ ಗೋಡೆಯೊಂದನ್ನು ನಿರ್ಮಿಸಿದ್ದ. ಇದನ್ನು ತಿಳಿದಿದ್ದ ಸಿಂಗ್ ಗೋಡೆಯನ್ನು ತೆರವುಗೊಳಿಸಿದ್ದರು. ಈ ವೇಳೆ ಆರೋಪಿ ಹಾಗೂ ಸಿಂಗ್​​ ನಡುವೆ ಮಾತಿನ ಚಕಮಕಿಯು ನಡೆದಿತ್ತು. ಇದೇ ದ್ವೇಷದಲ್ಲಿ ಸಿಂಗ್​ರನ್ನು ನಿನ್ನೆ ರಾತ್ರಿ ಬೆನ್ನಟ್ಟಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಅಜಾಮ್​ಗಢ ವಲಯದ ಡೆಪ್ಯುಟಿ ಇನ್ಸ್​ಪೆಕ್ಟರ್​ ಜನರಲ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.​(ಏಜೆನ್ಸೀಸ್​)
ಇದನ್ನೂ ಓದಿ:ಜಾಮೀನು ನೀಡಬೇಕಾದರೆ ನನ್ನೊಂದಿಗೆ ಮಲಗು ಎಂದ ಎಸ್​ಐಗೆ ಮಹಿಳೆ ಮಾಡಿದ್ದೇನು?
VIRAL VIDEO: 16 ವರ್ಷದ ಹುಡುಗಿ ಜತೆ ಮಹೇಶ್​ ಭಟ್​ ಮಾಡ್ತಿರೋದೇನು?; ಆಲಿಯಾ​ ತಂದೆ ವಿರುದ್ಧ ಟೀಕೆಯ ಸುರಿಮಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 4 =
Remember me
