ಲಖನೌ:ದೇಶದಲ್ಲಿ ಇಂದು (ಮೇ 20) ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನದ ನಡೆಯುತ್ತಿದ್ದು, ಒಟ್ಟು 49 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಆದರೆ, ಉತ್ತರಪ್ರದೇಶದಲ್ಲಿ 8ಕ್ಕೂ ಹೆಚ್ಚು ಬಾರಿ ಮತ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ರಾಜನ್​ ಸಿಂಗ್​ ಎಂದು ಗುರುತಿಸಲಾಗಿದ್ದು, ಈತ ಮತ ಚಲಾಯಿಸುತ್ತಿರುವ ವಿಡಿಯೋ ಹಾಗೂ ಕೈ ಬೆರಳಿಗೆ ಶಾಹಿ ಹಾಕಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬಳಿಕ ದೂರನ್ನು ದಾಖಲಿಸಿಕೊಂಡು ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
A youngster is recording himself voting 8 times to the BJP candidate. The candidate's name and photo seen on the EVM machine is of Mukesh Rajput, From Farrukhabad Lok Sabha constituency.@ECISVEEP@SpokespersonECI@DMFarrukhabadUPpic.twitter.com/PzN84tKRrX
ಇದನ್ನೂ ಓದಿ:ಅಪಘಾತದಲ್ಲಿ ಇಬ್ಬರನ್ನು ಕೊಂದ ಅಪ್ರಾಪ್ತನಿಗೆ ವಿಚಿತ್ರ ಶಿಕ್ಷೆ; ಆಕ್ಸಿಡೆಂಟ್​ ಬಗ್ಗೆ ಪ್ರಬಂಧ, ಪೊಲೀಸರ ಜತೆ ಕೆಲಸ… ಇದೊಂದು ಶಿಕ್ಷೆನಾ?
ಎರಡು ನಿಮಿಷಗಳ ವಿಡಿಯೋವನ್ನು ನೋಡುವುದಾದರೆ ವ್ಯಕ್ತಿಯು ಫರೂಕಾಬಾದ್​ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಖೇಶ್​ ರಜಪೂತ್​ಗೆ 8ಕ್ಕೂ ಹೆಚ್ಚು ಬಾರಿ ಮತ ಚಲಾಯಿಸುವುದನ್ನು ನೋಡಬಹುದಾಗಿದೆ. ಈ ವಿಡಿಯೋ ವೈರಲ್​ ಆದ ಬಳಿಕ ARO ಪ್ರತೀಶ್​ ತ್ರಿಪಾಠಿ ನೀಡಿದ ದೂರನ್ನು ಆಧರಿಸಿ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ವ್ಯಕ್ತಿ ವಿರುದ್ಧ ಐಪಿಸಿ ಸೆಕ್ಷನ್​ 128, 132, 136, 419ರ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ವಿಡಿಯೋ ಸಂಬಂಧ ತ್ವರಿತ ಮತ್ತು ಪರಿಣಾಮಕಾರಿ ಕ್ರಮವನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ವೇಳೆ ಮತಗಟ್ಟೆಯಲ್ಲಿದ್ದ ಅಧಿಕಾರಿಗಳನ್ನು ಸೇವೆಯನ್ನು ಅಮಾನತುಗೊಳಿಸುವಂತೆ ಆದೇಶಿಸಲಾಗಿದೆ ಎಂದು ಉತ್ತರಪ್ರದೇಶ ರಾಜ್ಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × one =
Remember me
