ಲಖನೌ:ಪೊಲೀಸ್​ ಠಾಣೆಯ ಹೊರಗೆ ಕುಳಿತು ಹುಕ್ಕಾ ಸೇವಿಸಿದ ಯುವಕನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹೌಪುರ್​ ಜಿಲ್ಲೆಯ ಠಾಣೆ ಹೊರಗೆ ಈ ಘಟನೆ ನಡೆದಿದೆ.
ಠಾಣೆಯ ಹತ್ತಿರದಲ್ಲೇ ಹುಕ್ಕಾ ಸೇವಿಸಿದ್ದಲ್ಲದೆ, ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಯುವಕ ತನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ವಿಡಿಯೋ ವೈರಲ್​​ ಆದ ಬೆನ್ನಲ್ಲೇ ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣ ಯುವಕನ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ ಮೇಲೆ ಬಂಧಿಸಲಾಗಿದೆ.
ಯುವಕನೊಬ್ಬ ಉತ್ತರ ಪ್ರದೇಶದ ಹಫೀಜ್​ಪುರ ಪೊಲೀಸ್​ ಠಾಣೆಯ ಹೊರಗಡೆ ಕುಳಿತು ಹುಕ್ಕಾ ಸೇದುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಇಷ್ಟಪಟ್ಟಿದ್ದ ವ್ಯಕ್ತಿ, ತನ್ನೊಂದಿಗೆ ಹುಕ್ಕಾ ತಂದಿದ್ದ ಎನ್ನಲಾಗಿದೆ. ವಿಡಿಯೋ ಚಿತ್ರೀಕರಣ ಮಾಡುವಾಗ ಆ ವ್ಯಕ್ತಿ ತಮ್ಮ ಗಮನಕ್ಕೆ ಬರಲಿಲ್ಲ ಎಂದು ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್‌ನಲ್ಲಿ ರೀಲ್ ಕಾಣಿಸಿಕೊಂಡ ನಂತರ ಯುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)
45 ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ; ಯಾರು, ಎಲ್ಲಿಂದ, ಎಲ್ಲಿಗೆ? ಇಲ್ಲಿದೆ ಮಾಹಿತಿ..

ಪತ್ನಿಯನ್ನು ಕೊಂದು ಶವದೊಂದಿಗೆ ಸಂಭೋಗ: ಪೊಲೀಸರ ಮುಂದೆ ಪತಿ ಆಡಿದ ನಾಟಕ ಬಯಲಾಗಿದ್ದೇ ರೋಚಕ!

ಬನ್ನಿ ರಾಯಚೂರಿಗೆ… ಮಾಜಿ ಸಿಎಂ ಸಿದ್ದುಗೆ ಎರಡು ಎಕರೆ ಜಮೀನು ಆಫರ್​ ನೀಡಿದ ಅಭಿಮಾನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
