ಉತ್ತರಪ್ರದೇಶ:ಹೆಚ್ಚುವರಿಯಾಗಿ 50 ರೂ.ಕೊಡುವಂತೆ ಕೇಳಿದ್ದಕ್ಕೆ ವ್ಯಕ್ತಿ ಓರ್ವ ಬಟ್ಟೆ ಅಂಗಡಿ ಬೆರಳು ಕಚ್ಚಿ ಪರಾರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಆಂಧ್ರಪ್ರದೇಶ: ಚುನಾವಣಾ ಪ್ರಚಾರ ಸಭೆಯಲ್ಲಿ ಕಲ್ಲು ತೂರಾಟ, ಸಿಎಂ ಜಗನ್​ಗೆ ಗಂಭೀರ ಗಾಯ
ವ್ಯಕ್ತಿಯೊಬ್ಬರು ಬಟ್ಟೆ ಅಂಗಡಿಗೆ ಹೋಗಿ ಮಗಳಿಗೆ ಫ್ರಾಕ್ ಒಂದನ್ನು ಖರೀದಿಸಿದ್ದರು. ಮಾಲೀಕ ಶಿವಚಂದ್ರ ಕಾರವಾರಿಯಾ ಅವರಿಗೆ ಹಣ ಕೊಟ್ಟು ಬಟ್ಟೆ ತೆಗೆದುಕೊಂಡು ಹೋಗಿದ್ದರು. ಆದರೆ ಮನೆಗೆ ಹೋಗಿ ಮಗಳಿಗೆ ಫ್ರಾಕ್ ಹಾಕಿದಾಗ ಅದು ಚಿಕ್ಕ ಗಾತ್ರದಲ್ಲಿರುವುದು ಗೊತ್ತಾಗಿದೆ.
ಮರುದಿನ, ದೊಡ್ಡ ಗಾತ್ರದ ಫ್ರಾಕ್​ ಖರೀದಿಸಬೇಕು ಎಂದು ಮತ್ತೆ ಅದೇ ಬಟ್ಟೆ ಅಂಗಡಿಗೆ ಬಂದಿದ್ದಾರೆ. ನಂತರ ದೊಡ್ಡ ಫ್ರಾಕ್​ ಕೊಡಿ ಎಂದು ಕೇಳಿದ್ದಾರೆ, ಅದಕ್ಕೆ ಅಂಗಡಿ ಮಾಲೀಕ ಆಯ್ತು ತಗೊಳ್ಳಿ ಆದರೆ ಈ ಫ್ರಾಕ್​ನ ಗಾತ್ರ ಉದ್ದವಾದ ಕಾರಣ ಇನ್ನೂ 50 ರೂ. ಹೆಚ್ಚುವರಿಯಾಗಿ ನೀಡಬೇಕು ಎಂದು ಹೇಳಿದ್ದಾಮನೆ.
ಇದರಿಂದ 50 ರೂಪಾಯಿಗಳ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದದ ಬಳಿಕ ಕೋಪಗೊಂಡ ಗ್ರಾಹಕ ಬಟ್ಟೆ ಅಂಗಡಿ ಮಾಲೀಕನ ಎಡಗೈಯ ಮೇಲಿನ ಬೆರಳನ್ನು ಕಚ್ಚಿ ಜೊತೆಗೆ ಆತನ ಮಗನನ್ನೂ ಕಚ್ಚಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಅಂಗಡಿಯಲ್ಲಿದ್ದ ಬಟ್ಟೆಗಳನ್ನು ರಸ್ತೆಗೆ ಎಸೆದು ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಅಂಗಡಿ ಮಾಲೀಕ ಕಾರವಾರಿಯಾ ಸಮೀಪದ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಅಂಗಡಿಯವರ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಕೊತ್ವಾಲಿ ನರೈನಿಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುರೇಶ್ ಸೈನಿ ಅವರು ಆಜ್ ತಕ್/ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಅಂಗಡಿಯವರ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಆತನನ್ನು ಬಂಧಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − four =
Remember me
