ಉತ್ತರ ಪ್ರದೇಶ:ಒಂದೇ ಬಾರಿಗೆ ಮಿತಿಮೀರಿ ಮದ್ಯ ಸೇವನೆ ಮಾಡಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಮೂವರು ಒಟ್ಟಾಗಿ ಮದ್ಯಪಾನ ಮಾಡುತ್ತಿದ್ದ ವೇಳೆ ಎದುರಾದ ಸವಾಲನ್ನು ಸ್ವೀಕರಿಸಿ ಈ ದುರ್ಘಟನೆ ಸಂಭವಿಸಿದೆ. ಆಟೋ ಚಾಲಕ ಜೈ ಸಿಂಗ್(45) ಮೃತ ವ್ಯಕ್ತಿ.
ಮೂವರು ಸ್ನೇಹಿತರು ಒಟ್ಟಾಗಿ ಸೇರಿಕೊಂಡು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಇಬ್ಬರು ಸ್ನೇಹಿತರು ಹತ್ತೇ ಹತ್ತು ನಿಮಿಷದಲ್ಲಿ 3 ಬಾಟಲ್ ಮದ್ಯಪಾನ ಸೇವಿಸಬೇಕು. ಒಂದು ವೇಳೆ ಸೋತು ಹೋದರೆ ಸಂಪೂರ್ಣ ಬಿಲ್ ಪಾವತಿ ಮಾಡಬೇಕೆಂದು ಸವಾಲೆಸೆದಿದ್ದಾನೆ. ಇದೇ ಹುರುಪಿನಲ್ಲಿ ಸವಾಲು ಸ್ವೀಕರಿಸಿದ ಜೈಸಿಂಗ್ ಒಂದೇ ಸಮನೆ ಕುಡಿದಿದ್ದಾನೆ.
ಎಷ್ಟು ಹೊತ್ತಾದರೂ ಹೊರ ಹೋದ ತಂದೆ ಮನೆಗೆ ಬಂದಿಲ್ಲ ಎಂದು ಮಗ ಕರಣ್ ಹುಡುಕಾಟ ಆರಂಭಿಸಿದ್ದಾನೆ. ಈ ವೇಳೆ ಶಿಲ್ಪಗ್ರಾಮ್ ಎಂಬಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಮಗ, ಕೂಡಲೇ ತಂದೆಯನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದಿದ್ದಾನೆ. ಆದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಜೈಸಿಂಗ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಸಿಂಗ್ ಸಾವಿಗೀಡಾಗಲು ಕಾರಣರಾದ ಭೋಲಾ ಮತ್ತು ಕೇಶವ್ ಎಂಬ ಇಬ್ಬರು ಸ್ನೇಹಿತರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜ್‌ಗಂಜ್ ಪೊಲೀಸ್ ಠಾಣೆಯ ಅಧಿಕಾರಿ ಬಹದ್ದೂರ್ ಸಿಂಗ್ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಭೋಲಾ ಮತ್ತು ಕೇಶವ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಜೈಸಿಂಗ್ ಜತೆಗೆ ಫೆಬ್ರವರಿ 8 ರಂದು ಶಿಲ್ಪಗ್ರಾಮ್ ಬಳಿ ಕುಡಿಯಲು ಒಟ್ಟಾಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − one =
Remember me
