ಉತ್ತರಪ್ರದೇಶ:ಮಗನೋರ್ವ ತಂದೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದು ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ಗೆ ತುಂಬಿ ಎಸೆದಿರುವ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.
ಮುರಳಿ ಧಾರ್ ಗುಪ್ತಾ ಮೃತ. ಕೊಲೆ ಮಾಡಿದ ಆರೋಪಿಯನ್ನು ಸಂತೋಷ್ ಕುಮಾರ್ ಆಲಿಯಾಸ್ ಪ್ರಿನ್ಸ್ ಎಂದು ಗುರುತಿಸಲಾಗಿದೆ. 30 ವರ್ಷದ ಮಗ ತನ್ನ 62 ವರ್ಷದ ಅಪ್ಪನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಇದನ್ನೂ ಓದಿ:ದೆಹಲಿ ಶಾಸಕರ ಸಂಬಳ ಹೆಚ್ಚಳ; ಯಾರಿಗೆ ಎಷ್ಟು ವೇತನ? ಇಲ್ಲಿದೆ ಸಂಪೂರ್ಣ ಮಾಹಿತಿ…
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಪ್ಪ ಮಗನ ಮಧ್ಯೆ ವಾದ ವಿವಾದವೇರ್ಪಟ್ಟಿದೆ. ಈ ಮಾತಿನ ಕಲಹವೇ ವಿಕೋಪಕ್ಕೆ ತಿರುಗಿದ್ದು, ಕುಪಿತಗೊಂಡ ಮಗ ಅಪ್ಪನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ತನ್ನ ತಂದೆಯ ದೇಹವನ್ನು ಕತ್ತರಿಸಿ ತುಂಡು ತುಂಡುಗಳಾಗಿ ಮಾಡಿ ಅದನ್ನು ಸೂಟ್‌ಕೇಸ್‌ನಲ್ಲಿ ತುಂಬಿ ದೂರ ಎಸೆದಿದ್ದಾನೆ. ತಿವಾರಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸೂರಜ್‌ ಕುಂಡ್ ಕಾಲೋನಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಬೇರೊಬ್ಬಳ ಜತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಕರ; ಕುದಿಯುವ ಎಣ್ಣೆ ಸುರಿದ ಯುವತಿ !
ಭಾನುವಾರ ಆರೋಪಿಯ ಸಹೋದರ ಪ್ರಶಾಂತ್ ಗುಪ್ತಾ ಎಂಬುವವರು ದೂರು ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತೋಷ್ ಕುಮಾರ್​​ನನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ನಗರ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಕೃಷ್ಣ ಕುಮಾರ್ ಬಿಷ್ನೋಯಿ ಹೇಳಿದ್ದಾರೆ.
ಏಪ್ರಿಲ್ 1ರಿಂದ ಓಪನ್ ಏರ್ ಬಾರ್​ಗಳು ಬಂದ್‌; ನಿಯಮಗಳು ಅನ್ವಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 4 =
Remember me
