ಲಕ್ನೋ:ಪ್ರತಿಯೊಂದು ಹೆಣ್ಣು ಗರ್ಭಾವಸ್ಥೆಯಲ್ಲಿ ಅನೇಕ ದೈಹಿಕ ತೊಡಕುಗಳನ್ನು ಅನುಭವಿಸುತ್ತಾಳೆ. ಅವಳ ಹಿಂದೆ ಬೆನ್ನೆಲುಬಾಗಿ ಕುಟುಂಬ ಅಥವಾ ಗಂಡ ನಿಲ್ಲಬೇಕು. ಹೆಂಡತಿ ಅನುಭವಿಸುವ ಭಾವನಾತ್ಮಕ ಮತ್ತು ದೈಹಿಕ ಬದಲಾವಣೆಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು. ಈ ಸಮಯದಲ್ಲಿ ನೀವು ನೀಡುವ ಕಾಳಜಿ, ಬಹುಶಃ ಅವಳ ಜೀವನದಲ್ಲಿ ಎಂದೂ ಮರೆಯಲಾಗದು.
ಇದನ್ನೂ ಓದಿ:ಟೀಮ್ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ರಿಕಿ ಪಾಂಟಿಂಗ್ ನಿರಾಸಕ್ತಿ: ಜಯ್‌ಶಾ ಶಾಕಿಂಗ್ ಹೇಳಿಕೆ..!
ಆದರೆ ಇಲೊಬ್ಬ ಗಂಡ ಹೆಂಡತಿಯ ಗರ್ಭದಲ್ಲಿರುವ ಮಗು ಗಂಡು ಅಥವಾ ಹೆಣ್ಣೋ ಎಂದು ತಿಳಿಯಲು ಕುಡಗೋಲಿನಿಂದ ಹೊಟ್ಟೆಯನ್ನು ಕತ್ತರಿಸಿದ ಉತ್ತರ ಪ್ರದೇಶದ ಬದೌನ್‌ನ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬದೌನ್‍ನ ಸಿವಿಲ್ ಲೈನ್ಸ್‍ನ ನಿವಾಸಿ ಪನ್ನಾ ಲಾಲ್ ಹಾಗೂ ಅನಿತಾ ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿದ್ದು, ಐದು ಹೆಣ್ಣು ಮಕ್ಕಳಿದ್ದರು. ಆದರೆ, ಪನ್ನಾ ಲಾಲ್ ಗಂಡು ಮಗು ಬೇಕೆಂದು ಹೆಂಡತಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಅಲ್ಲದೇ ವಿಚ್ಛೇದನ ನೀಡಿ ಬೇರೆ ಮದುವೆಯಾಗುವುದಾಗಿ ಹೆಂಡತಿಗೆ ಬೆದರಿಕೆ ಹಾಕಿದ್ದ.
ಇದೇ ವಿಚಾರಕ್ಕೆ ಸೆಪ್ಟೆಂಬರ್ 2020 ರಲ್ಲಿ ತನ್ನ ಪತ್ನಿ ಅನಿತಾ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಪನ್ನಲಾಲ್, ಅನಿತಾ ಗರ್ಭದಲ್ಲಿರುವ ಮಗುವಿನ ಲಿಂಗದ ಬಗ್ಗೆ ಜಗಳವಾಡಿ, ಬಳಿಕ ಗರ್ಭದಲ್ಲಿರುವ ಮಗುವಿನ ಲಿಂಗ ತಿಳಿಯಲು ಆಕೆಯ ಹೊಟ್ಟೆಗೆ ಕುಡುಗೋಲಿನಿಂದ ಇರಿದಿದ್ದ. ಈ ಘಟನೆ ವೇಳೆ ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಹಲ್ಲೆ ಮಾಡಿ ಪನ್ನಲಾಲ್ ಪರಾರಿಯಾಗಿದ್ದ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ವೈದ್ಯರು ತಾಯಿಯನ್ನು ರಕ್ಷಿಸಿದ್ದರು. ಗರ್ಭದಲ್ಲಿದ್ದ ಗಂಡು ಮಗುವನ್ನು ಉಳಿಸಲಾಗಿರಲಿಲ್ಲ. ಈ ವಿಚಾರವನ್ನು ವಿಚಾರಣೆ ವೇಳೆ ಅನಿತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಚಾರಣೆ ವೇಳೆ ಅನಿತಾ ತನ್ನ ಸಹೋದರರೊಂದಿಗೆ ಸೇರಿ ಆಸ್ತಿ ವಿವಾದದಕ್ಕೆ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ತನಗೆ ತಾನೇ ಗಾಯ ಮಾಡಿಕೊಂಡಿದ್ದಾಳೆ ಎಂದು ಪನ್ನಾ ಲಾಲ್ ನ್ಯಾಯಾಲಯದಲ್ಲಿ ವಾದಿಸಿದ್ದ. ಸಾಕ್ಷ್ಯಾಧಾರಗಳನ್ನು ಗಮನಿಸಿದ ನ್ಯಾಯಾಲಯ ಪನ್ನಾ ಲಾಲ್‍ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ದುಬಾರಿ ಕಾರು ಖರೀದಿಸಿದ ನಟ ಅಕ್ಕಿನೇನಿ ನಾಗ ಚೈತನ್ಯ! ಬೆಲೆ ಎಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 6 =
Remember me
