ಲಕ್ನೋ:ವರದಕ್ಷಿಣೆ ಪಿಡುಗು ಸಮಾಜದಲ್ಲಿ ಬಡವ, ಮಧ್ಯಮ ಅಥವಾ ಶ್ರೀಮಂತ ವರ್ಗದವರು ಯಾರೆ ಇರಲಿ ಎಲ್ಲರ ಜೀವವನ್ನು ಬಲಿತೆಗೆದುಕೊಂಡಿದೆ. ಇದರಿಂದ ಅನೇಕ ಸಂಸಾರಗಳನ್ನು ಕೂಪಕ್ಕೆ ತಳ್ಳಿವೆ. ಇಂತಹದ್ದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ವರದಕ್ಷಿಣೆ ರೂಪದಲ್ಲಿ ದುಬಾರಿ ಕಾರು ನೀಡಲಿಲ್ಲ ಎಂಬ ಏಕೈಕ ಉದ್ದೇಶದಿಂದ ಪತ್ನಿಗೆ ತ್ರಿವಳಿ ತಲಾಖ್​ ನೀಡಿದ ಆರೋಪದ ಮೇಲೆ ಪತ್ನಿ ದೂರು ದಾಖಲಿಸಿರುವ ಘಟನೆ ಉತ್ತರಪ್ರದೇಶದ ಬಂದಾದಲ್ಲಿ ನಡೆದಿದೆ.
ಇದನ್ನೂ ಓದಿ:ಶ್ರೀರಾಮ ಉದ್ಘಾಟನೆ ನಿಮಿತ್ಯ ರಾಮನಾಮ ಜಪ ಕಾರ್ಯಕ್ರಮ: ವೆಂಕಟೇಶ್ ಕುಲಕರ್ಣಿ
2015ರಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆಯಾಗಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದು, ಆ ಸಮಯದಲ್ಲಿ ನನ್ನ ತಂದೆ 15 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದರು. ಮದುವೆಯ ನಂತರ ನನ್ನ ಪತಿ ಮತ್ತು ಐವರು ಸೋದರ ಮಾವಂದಿರು ಸೇರಿದಂತೆ ಇತರರು ವರದಕ್ಷಿಣೆಗಾಗಿ ಮತ್ತಷ್ಟು ಬೇಡಿಕೆಗಳನ್ನು ಮುಂದಿಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಬೇಡಿಕೆ ಈಡೇರದಿದ್ದಾಗ, ತಾನು ದೈಹಿಕ ಮತ್ತು ಮಾನಸಿಕ ಕಿರುಕುಳ, ಎರಡನೇ ಮದುವೆಯ ಬೆದರಿಕೆಗಳನ್ನು ಹಾಕಿದ್ದರು. ಕಳೆದ ವರ್ಷ ಜುಲೈನಲ್ಲಿ ಮನೆಯಿಂದ ಹೊರಹಾಕಲಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಮಹಿಳೆ ಪೋಷಕರ ಮನೆಯಲ್ಲಿ ಇದ್ದು, ಪತಿ ಇತ್ತೀಚೆಗೆ ಆಕೆಯನ್ನು ಭೇಟಿ ಮಾಡಿ ಸ್ಕಾರ್ಪಿಯೋ ಕಾರನ್ನು ವರದಕ್ಷಿಣೆಯಾಗಿ ನೀಡಲು ಒತ್ತಾಯಿಸಿ ಜಗಳವಾಡಿದ್ದಾನೆ. ಪತಿಯ ಬೇಡಿಕೆಯನ್ನು ತಿರಸ್ಕರಿಸಿದ ನಂತರ, ಅವರು ತ್ರಿವಳಿ ತಲಾಖ್ ಎಂದು ಹೇಳಿದ್ದಾರೆ.
ವರದಕ್ಷಿಣೆ ಕಿರುಕುಳ ಮತ್ತು ತ್ರಿವಳಿ ತಲಾಖ್ ಘಟನೆಗೆ ಸಂಬಂಧಿಸಿದಂತೆ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ಕೋರಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಪತಿಯು ತನ್ನ ಪತ್ನಿಗೆ ಮೂರು ಬಾರಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡುವ ಪದ್ಧತಿ ಇದೆ. ಇದನ್ನೇ ತ್ರಿವಳಿ ತಲಾಖ್ ಎನ್ನಲಾಗುತ್ತದೆ.
ಕೇಂದ್ರದ ಎನ್ ಡಿಎ ಸರ್ಕಾರ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಲು ತೀರ್ಮಾನಿಸಿ ಹೊಸ ಕಾಯ್ದೆ ಜಾರಿಗೆ ತರಲು ಮಸೂದೆ ಹೊರಡಿಸಿತು. ಈ ಮಸೂದೆಯು ಹಲವು ದಿನಗಳ ಬಳಿಕ ಲೋಕಸಭೆಯಲ್ಲಿ ಅನುಮೋದನೆ ಪಡೆದರೂ ರಾಜ್ಯಸಭೆಯಲ್ಲಿ ವಿಫಲವಾಯಿತು. ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಈ ಮಸೂದೆಯನ್ನು ವಿರೋಧಿಸಿವೆ.
ನಕಲಿ ಪಾಸ್‌ಪೋರ್ಟ್‌,ವೀಸಾ: ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಓರ್ವ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
