ಲಖನೌ:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಹೋದಾಗ ಏನಾಯಿತು ಎಂದು ವೈದ್ಯರು ಕೇಳುತ್ತಾರೆ. ಬಯಲು ಶೌಚದ ವೇಳೆ ಹಾವೊಂದು ಗುಪ್ತಾಂಗದಿಂದ ದೇಹವನ್ನು ಪ್ರವೇಶಿಸಿತು ಎಂದಿದ್ದಾನೆ. ಇದನ್ನು ಕೇಳಿ ವೈದ್ಯರೇ ದಂಗಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ನಡೆದಿದ್ದು ಎಲ್ಲಿ?ಈ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮಹೇಂದ್ರ ಎಂಬಾತ ಮಧ್ಯರಾತ್ರಿ ಹರ್ದೋಯ್​ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ಧಾವಿಸಿ ಬಂದನು. ಏನೆಂದು ಕೇಳಿದಾಗ ಹಾವು ದೇಹ ಪ್ರವೇಶಿಸಿದೆ ಎಂದಿದ್ದಾನೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ಇದು ಸಾಧ್ಯವಾ? ಎಂದು ಹುಬ್ಬೇರಿಸಿದ್ದಾರೆ. ಬಳಿಕ ಮಹೇಂದ್ರನ ಇಡೀ ದೇಹವನ್ನು ಪರೀಕ್ಷಿಸಿದಾಗ ಹಾವಿನ ಕಡಿತವಾಗಲಿ ಅಥವಾ ಯಾವುದೇ ವಸ್ತುವಾಗಲಿ ಆತನ ದೇಹದ ಒಳಗೆ ಕಂಡುಬಂದಿಲ್ಲ.
ಇದನ್ನೂ ಓದಿ:ರಾಜಕೀಯದಲ್ಲಿ ಸಿನಿ ಗುಂಗು: ಪಕ್ಷದ ವರ್ಚಸ್ಸು ವೃದ್ಧಿ ಆಗಲಿಲ್ಲ, ವೈಯಕ್ತಿಕ ಛಾಪೂ ಮೂಡಿಸದ ತಾರೆಯರು
ಇಲ್ಲ ಎಂದು ಒಪ್ಪಲು ತಯಾರಿಲ್ಲಮಹೇಂದ್ರನನ್ನು ಪರೀಕ್ಷಿಸಿದ ವೈದ್ಯರು ನೀನು ಅಂದುಕೊಂಡಂತೆ ನಿನ್ನ ದೇಹವನ್ನು ಯಾವುದೇ ಹಾವು ಪ್ರವೇಶಿಸಿಲ್ಲ. ನಿನಗೆ ಏನೂ ಆಗಿಲ್ಲ ಎಂದು ಹೇಳಿದ್ದಾರೆ. ಆದರೂ ವೈದ್ಯರ ಮಾತನ್ನು ನಂಬದ ಮಹೇಂದ್ರ ಅವರ ಕುಟುಂಬ ಎರಡನೇ ಅಭಿಪ್ರಾಯ ಅಥವಾ ಮತ್ತೊಮ್ಮೆ ಪರೀಕ್ಷೆಗಾಗಿ ಬೇರೊಂದು ಆಸ್ಪತ್ರೆಗೆ ವರ್ಗಾವಣೆ ಮಾಡಿ ಎಂದು ಪಟ್ಟು ಹಿಡಿದಿತ್ತು.
ಮದ್ಯದ ಅಮಲುಮಹೇಂದ್ರನನ್ನು ಪರೀಕ್ಷಿಸಿದ ವೈದ್ಯರು, ಈ ಅವಾಂತರಕ್ಕೆ ಮದ್ಯದ ಅಮಲು ಕಾರಣ ಎಂದಿದ್ದಾರೆ. ಪಾನಮತ್ತನಾಗಿ ಮಹೇಂದ್ರ ಬಯಲು ಶೌಚದಲ್ಲಿ ಹಾವನ್ನು ನೋಡಿ ತನಗೆ ತಾನು ಏನೇನೋ ಕಲ್ಪನೆ ಮಾಡಿಕೊಂಡು ಈ ರೀತಿ ಆಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಮರುದಿನ ಬೆಳಿಗ್ಗೆ ಆತನನ್ನು ಡಿಸ್ಚಾರ್ಜ್ ಮಾಡಿ ಕಳುಹಿಸಿದ್ದಾರೆ.
ಇದನ್ನೂ ಓದಿ:ಮಾನನಷ್ಟ ಪ್ರಕರಣ; ಜಡ್ಜ್​ ನಾಲಿಗೆ ಕತ್ತರಿಸುವುದಾಗಿ ಹೇಳಿದ ಕಾಂಗ್ರೆಸ್​ ಮುಖಂಡ
ವೈದ್ಯ ಹೇಳಿದ್ದೇನು?ಡಾ. ಶೇರ್ ಸಿಂಗ್ ಪ್ರಕಾರ ಅವರ ಪ್ರಕಾರ ಮಹೇಂದ್ರನು ಮದ್ಯದ ಅಮಲಿನಲ್ಲಿ ಇರುವಂತೆ ಕಾಣುತ್ತಿದ್ದ ಮತ್ತು ಸಾಂದರ್ಭಿಕ ಹೊಟ್ಟೆ ನೋವಿನ ಬಗ್ಗೆ ದೂರು ನೀಡುತ್ತಿದ್ದನು. ಇದು ಮಾದಕವಸ್ತು ಸೇವನೆಯಿಂದ ಉಂಟಾಗುತ್ತದೆ. ಎಲ್ಲಾದರೂ ಹಾವು ಗುಪ್ತಾಂಗದ ಮೂಲಕ ದೇಹ ಸೇರುವುದುಂಟಾ? ಈವರೆಗೆ ಈ ರೀತಿಯ ಪ್ರಕರಣಗಳ ಉದಾಹರಣೆ ಇಲ್ಲ. ಈ ಘಟನೆ ಮದ್ಯದ ಅಮಲಿನಲ್ಲಿ ಆದ ಎಡವಟ್ಟು ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ನಟ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣ: ಆ ಒಬ್ಬನಿಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಹುಡುಕಾಟ

ಬಿಜೆಪಿ ಸೇರ್ಪಡೆ ಹಾಗೂ ಬೆದರಿಕೆ ಪತ್ರ ವಿಚಾರ: ನಟ ಸುದೀಪ್​ ಕೊಟ್ಟ ಸ್ಪಷ್ಟನೆ ಹೀಗಿದೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 − one =
Remember me
