ಉತ್ತರಪ್ರದೇಶ:ಇತ್ತೀಚಿನ ದಿನಗಳಲ್ಲಿ ದಂಪತಿ ಕ್ಷುಲ್ಲಕ ಕಾರಣಕ್ಕೆ ದೂರವಾಗುವುದು, ಕೊಲೆಯ ಹಂತಕ್ಕೆ ತಲುಪ ಎಷ್ಟೋ ಘಟನೆಗಳ ಉದಾಹರಣೆಯನ್ನು ನಾವು ಕೇಳಿದ್ದೇವೆ. ಇಲ್ಲೊಬ್ಬ ಪತಿ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಇದಕ್ಕೆ ಇರುವ ಕಾರಣವನ್ನು ಕೇಳಿದ್ರೆ ನೀವು ಖಂಡಿತವಾಗಿಯೂ ಶಾಕ್​​ ಆಗುವುದು ಹೌದು.
ಸಾರ್ವಜನಿಕ ಸ್ಥಳದಲ್ಲಿ ಮೈತುಂಬಾ ಬಟ್ಟೆ ಧರಿಸಿಲ್ಲ ಎಂದು ಪತ್ನಿಯನ್ನೇ ವ್ಯಕ್ತಿಯೊಬ್ಬ ಹತ್ಯೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸ್ವಪ್ನಾ (28) ಮೃತ ಮಹಿಳೆ. ಮೋಹಿತ್ ಕುಮಾರ್ ಬಂಧಿತ ವ್ಯಕ್ತಿ. ಬರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಗಾಜಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಡೆತ್​ ನೋಟ್​ ಬರೆದ ನಟಿ ಪಾಯಲ್​ ಘೋಷ್​ ; ನಾನು ಸತ್ತರೆ ಇವರೇ ಕಾರಣ..
ಸ್ವಪ್ನಾ ಸಾರ್ವಜನಿಕ ಸ್ಥಳದಲ್ಲಿ ಮೈತುಂಬಾ ಬಟ್ಟೆ ಧರಿಸದೇ ಬಂದಿದ್ದಕ್ಕೆ ಮೋಹಿತ್ ಕುಮಾರ್​ಗೆ ಕೋಪ ಬಂದಿದೆ. ಈ ವಿಚಾರವಾಗಿ ದಂಪತಿ ಮಧ್ಯೆ ಜಗಳ ಬಂದಿದೆ. ಬಟ್ಟೆ ವಿಚಾರವಾಗಿ ಪತಿ ಎಚ್ಚರಿಕೆ ನೀಡಿದರೂ ಸ್ವಪ್ನಾ ಕಿವಿಗೊಡುತ್ತಿರಲಿಲ್ಲ. ಇದರಿಂದಾಗಿ ಆಕ್ರೋಶಗೊಂಡ ಮೋಹಿತ್ ಕುಮಾರ್, ಸ್ವಪ್ನಾಳ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಕೊಂದಿದ್ದಾನೆ.
ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಸ್ವಪ್ನಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೋಹಿತ್ ಕುಮಾರ್​ನನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ನೆರೆಹೊರೆಯವರ ಬಳಿ ಕೆಲವು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.ಈ ಘಟನೆಗೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
VIDEO| ಮದುವೆ ಶಾಸ್ತ್ರ ನಡೆಯುವಾಗಲೇ ನಿದ್ರೆಗೆ ಜಾರಿದ ವಧು; ವರ ಮಾಡಿದ್ದೇನು ನೋಡಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 2 =
Remember me
