ಬಂಡಾ (ಉತ್ತರಪ್ರದೇಶ):ಬಬೇರು ಪ್ರದೇಶದ ಭಾತಿ ಗ್ರಾಮದಲ್ಲಿ 22 ವರ್ಷದ ಯುವಕನೊಬ್ಬ ಕಾಳಿ ಮಾತೆಯನ್ನು ಒಲಿಸುವುದಕ್ಕಾಗಿ ತನ್ನ ನಾಲಿಗೆಯನ್ನೇ ಕತ್ತರಿಸಿ ಪೊಜೆಗೆ ಇರಿಸಿದ ವಿಲಕ್ಷಣ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಯುವಕನನ್ನು ಆತ್ಮಾ ರಾಮ ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ ಸ್ಥಳೀಯ ದೇವಸ್ಥಾನಕ್ಕೆ ಬಂದಿದ್ದ ಆತ ಎಲ್ಲರೂ ನೋಡು ನೋಡುತ್ತಿದ್ದಂತೆಯೇ ತನ್ನ ನಾಲಿಗೆಯನ್ನು ಕತ್ತರಿಸಿ ದೇವಿಯ ಎದುರು ಇಟ್ಟುಬಿಟ್ಟಿದ್ದ. ಆತ್ಮಾರಾಮನ ವಿಲಕ್ಷಣ ಮಾನಸಿಕತೆ ನೋಡಿ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ನಾಳೆ ಜಂಬೂಸವಾರಿ : ಮನೆಯಲ್ಲೇ ಕುಳಿತು ದಸರಾ ಸಂಭ್ರಮ ವೀಕ್ಷಿಸಿ..
ಆತ್ಮಾರಾಮನ ತಂದೆ ರಾಮಸಿಂಗ್​ ಪೊಲೀಸರಿಗೆ ತಿಳಿಸಿದ ಮಾಹಿತಿ ಪ್ರಕಾರ, ಆತ ಕಳೆದ 9 ದಿನಗಳಿಂದ ಉಪವಾಸವಿದ್ದು, ದೇವಿಯ ಆರಾಧನೆ ಮಾಡಿದ್ದ. ಅವನು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಕೆಲವರು ಅವನ ಮಾನಸಿಕಾವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು, ಈ ರೀತಿ ವರ್ತಿಸುವಂತೆ ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)
ಗುರು ತೇಗ್ ಬಹಾದೂರ್​ ಅವರ 400ನೇ ಜಯಂತಿ ಆಚರಣೆಗೆ ಉನ್ನತ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 15 =
Remember me
