ನವದೆಹಲಿ:ಕಚೇರಿಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರರು ಶನಿವಾರ ಮತ್ತು ಭಾನುವಾರಕ್ಕಾಗಿ ಕಾಯುತ್ತಾರೆ. ಏಕೆಂದರೆ ಆ ದಿನಗಳು ಅವನ ರಜಾದಿನಗಳಾಗಿವೆ. ಆಫೀಸಿನಲ್ಲಿ ಒಂದು ದಿನ ಮಾತ್ರ ರಜೆ ಇರುವ ಕೆಲವರಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ರಜೆಗಾಗಿ ಕಾಯುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಕಳೆದ 26 ವರ್ಷಗಳಿಂದ ನಿರಂತರವಾಗಿ ಅವರ ಕಚೇರಿಗೆ ಹೋಗುತ್ತಿದ್ದಾರೆ. ಒಂದು ದಿನ ಮಾತ್ರ ರಜೆ ತೆಗೆದುಕೊಂಡಿದ್ದಾರೆ ಎನ್ನುವುದು ಸುದ್ದಿಯಾಗಿದೆ.
ಒಂದು ದಿನವೂ ರಜೆ ತೆಗೆದುಕೊಳ್ಳದೆ ಕಚೇರಿಗೆ ಹೋಗುವ ವಿಷಯದಲ್ಲಿ ದಾಖಲೆ ಮಾಡಿದ ಒಬ್ಬ ವ್ಯಕ್ತಿ ಎಲ್ಲೆಲ್ಲೂ ಚರ್ಚೆಯಾಗುತ್ತಿದ್ದಾರೆ. ಅವರೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ವಾಸಿಸುತ್ತಿರುವ ಈ ವ್ಯಕ್ತಿಯ ಹೆಸರು ತೇಜ್‌ಪಾಲ್ ಸಿಂಗ್.
Narayan Murthy apni poori property is aadmi ke naam karega😂😂😂😂😂😂😂pic.twitter.com/rdBraCDeUg
— HasnaZarooriHai🇮🇳 (@HasnaZaruriHai)March 13, 2024

ತೇಜ್ಪಾಲ್ ಸಿಂಗ್ ಅವರು ತಮ್ಮ 26 ವರ್ಷಗಳ ಸೇವೆಯಲ್ಲಿ ಕೇವಲ ಒಂದು ದಿನ ರಜೆ ತೆಗೆದುಕೊಂಡಿದ್ದಾರೆ. ಇವರು ಭಾನುವಾರವೂ ಕಚೇರಿಗೆ ಹೋಗುತ್ತಾರೆ. ತೇಜ್ಪಾಲ್ ಸಿಂಗ್ ಅವರ ಈ ದಾಖಲೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್​​ನಲ್ಲಿ ನೋಂದಾಯಿಸಲಾಗಿದೆ.
ತೇಜ್ಪಾಲ್ ಸಿಂಗ್ ಅವರು 1995 ರಿಂದ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದಲ್ಲಿ ಸುಮಾರು 45 ರಜೆ ಸಿಗುತ್ತವೆ ಆದರೆ ಇಲ್ಲಿಯವರೆಗೆ ಅವರು ಕೇವಲ 1 ರಜೆ ತೆಗೆದುಕೊಂಡಿದ್ದಾರೆ, ಆದ್ದರಿಂದ ಇದು ದಾಖಲೆಯಾಗಿದೆ.
ಕುಟುಂಬ, ಪೋಷಕರು, ಒಡಹುಟ್ಟಿದವರು, ಸಂಬಂಧಿಕರು ಇದ್ದಾರೆಯೇ ಅಥವಾ ಇಲ್ಲವೇ? ಇದು ನಿಜಾನಾ? ನಮಗೆ ಸಾಧ್ಯವಿಲ್ಲ ಗುರು ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
ಊಟ ಮಾಡಿದ ತಕ್ಷಣ ಬಾತ್​​ರೂಮ್​​ಗೆ ಹೋಗ್ತೀರಾ? ಹಾಗಿದ್ರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
